ಅಂತರಾಷ್ಟ್ರೀಯ

ಈ ಮಗುವಿಗೆ 27 ವರ್ಷ: ಹುಟ್ಟಿದ್ದು ಮಾತ್ರ ಒಂದು ತಿಂಗಳ ಹಿಂದೆ!

Pinterest LinkedIn Tumblr


ಟೆನ್ನೀಸ್​ (ಅಮೆರಿಕ): ಈ ಮಗುವಿಗೆ 27 ವರ್ಷ. ಆದರೆ ಹುಟ್ಟಿದ್ದು ಮಾತ್ರ ಒಂದು ತಿಂಗಳ ಹಿಂದೆ. ಅಂದರೆ ಆ ಮಗುವಿಗೆ ಅಸಲಿಗೀಗ ಒಂದು ತಿಂಗಳು ಅಷ್ಟೇ…

ಇದೇ ಕಾರಣಕ್ಕೆ ಈ ಮಗು ದಾಖಲೆಯನ್ನೂ ಬರೆದಿದೆ. ಅಂದಹಾಗೆ ಇದು ಟೀನಾ ಮತ್ತು ಬೆನ್​ ಗಿಬ್ಸನ್​ ದಂಪತಿ ಕಥೆ. ಇವರು ವಿವಾಹವಾಗಿದ್ದು 1992ರಲ್ಲಿ. ಆದರೆ ಕೆಲವೊಂದು ಕಾರಣಕ್ಕೆ ಈ ದಂಪತಿಗೆ ಮಕ್ಕಳಾಗುವುದು ಕಷ್ಟ ಎಂದು ವೈದ್ಯರು ಹೇಳಿದ್ದರು. ಅದೇ ಕಾರಣಕ್ಕೆ ದಂಪತಿ ಅದೇ ಸಾಲಿನಲ್ಲಿ ಭ್ರೂಣವೊಂದನ್ನು ದತ್ತು ಪಡೆದಿದ್ದರು. ದಾನಿಗಳ ಮೂಲಕ ಭ್ರೂಣವನ್ನು ದತ್ತು ಪಡೆಯುವುದು ಇಲ್ಲಿ ಕಾನೂನುಬದ್ಧವಾಗಿದೆ.

ಈಗಿನಷ್ಟು ವೈದ್ಯಕೀಯ ತಂತ್ರಜ್ಞಾನ ಆಗ ಮುಂದುವರೆದಿಲ್ಲವಾಗಿದ್ದರೂ ಕೆಲವೊಂದು ಮಾದರಿಯನ್ನು ಅನುಸರಿಸಿ ಭ್ರೂಣವನ್ನು ಸಂರಕ್ಷಿಸಿ ಇಡಲಾಗಿತ್ತು. ಆದರೆ ಆ ಭ್ರೂಣವು ಮಗುವಿನ ರೂಪ ಪಡೆದು ಜನ್ಮ ಪಡೆಯುವುದು ಎಂದು ಈ ದಂಪತಿ ಅಷ್ಟೇ ಏಕೆ ಖುದ್ದು ವೈದ್ಯರೇ ನಂಬಿರಲಿಲ್ಲ.

ನಂತರ ಅನೇಕ ವರ್ಷ ಕಳೆಯಿತು. ಈ ದಂಪತಿಗೆ ಮತ್ತೆ ಮಕ್ಕಳಾಗುವ ಸಾಧ್ಯತೆ ಇರಲಿಲ್ಲ. 2017ರಲ್ಲಿ ಮತ್ತೊಂದು ಭ್ರೂಣವನ್ನು ದತ್ತು ಪಡೆದ ದಂಪತಿಗೆ ಮಗಳು ಎಮ್ಮಾ ಸಿಕ್ಕಳು.

ಅದೇ ಇನ್ನೊಂದೆಡೆ, ವೈಜ್ಞಾನಿಕ ಆವಿಷ್ಕಾರ ಹೆಚ್ಚಿದಂತೆ, ಹೊಸ ಹೊಸ ಸಂಶೋಧನೆಗಳು ಭ್ರೂಣ ಸಂರಕ್ಷಣೆ ವಿಷಯದಲ್ಲಿ ಬರುತ್ತಿದ್ದಂತೆಯೇ ವೈದ್ಯರಿಗೆ ಆ ಮಗುವಿನತ್ತ ಗಮನ ಹೋಯಿತು. ಹೊಸ ಹೊಸ ಪ್ರಯೋಗಗಳನ್ನು ಮಾಡಿದ ವೈದ್ಯರೇ ನಂಬದಂಥ ಅಚ್ಚರಿಯೊಂದು ನಡೆದಿತ್ತು. ಆ ಭ್ರೂಣ ಸಂಪೂರ್ಣವಾಗಿ ಈಗಷ್ಟೇ ಹುಟ್ಟಿದ ಶಿಶುವಿನ ರೂಪ ಪಡೆದಿತ್ತು.

ತಮ್ಮ ಕಣ್ಣುಗಳನ್ನೇ ನಂಬದ ವೈದ್ಯರು ಶಿಶುವಿಗೆ ಸಂಪೂರ್ಣ ಚೆಕಪ್​ ಮಾಡಿದಾಗ ಮಗ ಸಂಪೂರ್ಣವಾಗಿ ಆರೋಗ್ಯದಿಂದ ಇರುವುದು ತಿಳಿದಿದೆ. ಇದೀಗ ಆ ಮಗುವನ್ನು ದಂಪತಿಗೆ ಒಪ್ಪಿಸಿದ್ದಾರೆ. ಇನ್ನೊಂದು ಹೆಣ್ಣುಮಗುವಿನ ಅಪ್ಪ-ಅಮ್ಮ ಆಗಿದ್ದಾರೆ ಟಿನಾ ಹಾಗೂ ಬೆನ್ ಗಿಬ್ಸನ್‌. ಮಗುವಿಗೆ ಮೋಲಿ ಎಂದು ನಾಮಕರಣ ಮಾಡಲಾಗಿದೆ.

ಹುಟ್ಟಿದಾಗ ಮೋಲಿ ಕೇವಲ ಆರು ಪೌಂಡ್‌ 13 ಔನ್ಸ್‌ ತೂಗುತ್ತಿತ್ತು. ಇದೀಗ ಸಂಪೂರ್ಣ ಆರೋಗ್ಯದಿಂದ ಇರುವುದು ಮಾತ್ರವಲ್ಲದೇ ಸುದೀರ್ಘಾವಧಿಗೆ ಭ್ರೂಣಾವಸ್ಥೆಯಲ್ಲೇ ಇದ್ದು ಜನ್ಮ ಪಡೆದ ಶಿಶು ಎಂದು ದಾಖಲೆಯ ಪುಟ ಸೇರಿದ್ದಾಳೆ.

Comments are closed.