ಅಂತರಾಷ್ಟ್ರೀಯ

ಕರೊನಾ ತಗುಲಲು ಸ್ವತಃ ಇಂಜೆಕ್ಷನ್​ ಚುಚ್ಚಿಕೊಂಡ ವೈದ್ಯ​!: ಹೀಗೆ ಮಾಡಿದ್ದು ಯಾಕೆ ಗೊತ್ತಾ?

Pinterest LinkedIn Tumblr


ರಷ್ಯಾ: ಕೆಲವರಿಗೆ ತಮ್ಮ ಕೆಲಸ, ಉದ್ಯೋಗ, ಆವಿಷ್ಕಾರಗಳಲ್ಲಿ ಅದೆಷ್ಟು ಶ್ರದ್ಧೆ, ಪ್ರೀತಿ, ಭಕ್ತಿ ಎಂದರೆ ಅವರು ಅದಕ್ಕಾಗಿ ಏನು ಬೇಕಾದರೂ ಮಾಡಲು ತಯಾರು ಇರುತ್ತಾರೆ, ಯಾವ ಹಂತದವರೆಗಾದರೂ ಕೆಲಸ ನಿರ್ವಹಿಸಲು ಸಿದ್ಧರಿರುತ್ತಾರೆ.

ಅಂಥದ್ದೇ ಒಬ್ಬ ವೈದ್ಯ ರಷ್ಯಾದ ವೈರಾಲೋಜಿಸ್ಟ್ ಅಲೆಕ್ಸಾಂಡರ್. ನೊವೊಸಿ ಬ್ರಿಸ್ಕ್​​ನ ಇನ್​ಸ್ಟಿಟ್ಯೂಟ್​ ಆಫ್​ ಕ್ಲಿನಕಲ್​ ಆಯಂಡ್​ ಎಕ್ಸ್​​ಪೆರಿಮೆಂಟಲ್​ ಮೆಡಿಸಿನ್​​ನಲ್ಲಿ ಹಿರಿಯ ಸಂಶೋಧಕರಾಗಿರುವ 69 ವರ್ಷದ ಅಲೆಕ್ಸಾಂಡರ್​​ ಅವರು ಮಾಡಿರುವುದೇನು ಎಂದು ಕೇಳಿದರೆ ಅಚ್ಚರಿಯಾಗದೇ ಇರದು.

ಎಲ್ಲರೂ ಕರೊನಾ ಬರದಿರಲಪ್ಪಾ ಎಂದು ಕಂಡಕಂಡ ದೇವರಲ್ಲಿ ಮೊರೆ ಹೋಗುತ್ತಿದ್ದಾರೆ, ಇನ್ನು ಕೆಲವರಂತೂ ಕರೊನಾ ಬರಬಹುದು ಎಂಬ ಹೆದರಿಕೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಸೋಂಕಿಗೆ ಒಳಗಾದವರು ತಮ್ಮ ಜೀವ ತೆಗೆದುಕೊಂಡಿದ್ದಾರೆ. ಇದೊಂದು ಕಥೆಯಾದರೆ, ಇನ್ನೊಂದೆಡೆ ಕರೊನಾಕ್ಕೆ ಲಸಿಕೆ ಕಂಡುಹಿಡಿಯಲು ಮಾನವ ಪ್ರಯೋಗಕ್ಕೆ ಒಳಗಾಗುವವರನ್ನು ಆಹ್ವಾನಿಸಿಯೂ ಆಗಿದೆ.

ಆದರೆ ಅಲೆಕ್ಸಾಂಡರ್​ ಮಾತ್ರ ಇದ್ಯಾವುದನ್ನೂ ಮಾಡದೇ ತಮ್ಮನ್ನೇ ತಾವು ಪ್ರಯೋಗಕ್ಕೆ ಒಡ್ಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅದಕ್ಕಾಗಿ ಅವರು ಕರೊನಾ ಸೋಂಕನ್ನು ಉದ್ದೇಶಪೂರ್ವಕವಾಗಿ ತಮ್ಮ ದೇಹದೊಳಕ್ಕೆ ಸೇರಿಸಿಕೊಂಡಿದ್ದಾರೆ!

ಅಲೆಕ್ಸಾಂಡರ್​ ಅವರು ಇಟಲಿಯ ಪ್ರವಾಸದ ವೇಳೆ ಕರೊನಾ ಸೋಂಕಿಗೆ ಒಳಗಾಗಿದ್ದರು. ಆದರೆ ಚೇತರಿಸಿಕೊಂಡ ಬಳಿಕ ಈ ಸೋಂಕಿನ ಬಗ್ಗೆ ಇನ್ನಷ್ಟು ಅಧ್ಯಯನ ಮಾಡಬೇಕು ಎಂದು ಉದ್ದೇಶಪೂರ್ವಕವಾಗಿ ಮತ್ತೊಮ್ಮೆ ಸೋಂಕಿಗೆ ಒಳಗಾಗಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿರುವ ಅಲೆಕ್ಸಾಂಡರ್​, ಮೊದಲ ಬಾರಿಗೆ ಸೋಂಕಿಗೆ ಒಳಗಾದ ಬಳಿಕ ಮೂರು ತಿಂಗಳಿಗೆ ಆಗುವಷ್ಟು ಪ್ರತಿಕಾಯಗಳು ನನ್ನ ದೇಹದಲ್ಲಿ ಉತ್ಪತ್ತಿಯಾಗಿದ್ದವು. ಮೊದಲ ಬಾರಿ ಸೋಂಕಿಗೀಡಾದಾಗ ಅದು ಅಂತರ ಗಂಭೀರ ಪ್ರಕರಣ ಆಗಿರಲಿಲ್ಲ. ಆದರೆ ಎರಡನೇ ಬಾರಿಗೆ ನಾನು ಆಸ್ಪತ್ರೆಗೆ ಸೇರಬೇಕಾಯಿತು. ಮೊದಲ ಬಾರಿಗೆ ಹೋಲಿಸಿದರೆ ಎರಡನೇ ಬಾರಿ ನಾನು ಬೇಗನೇ ಸೋಂಕಿನಿಂದ ಗುಣಮುಖನಾದೆ ಎಂದು ಹೇಳಿಕೊಂಡಿದ್ದಾರೆ.

ಆದರೆ ಇದು ಕಾನೂನುಬಾಹಿರ ಎಂದು ಹೇಳಿರುವ ಗ್ರಾಹಕ ಹಕ್ಕುಗಳ ಸಂರಕ್ಷಣೆ ಹಾಗೂ ಮಾನವ ಕಲ್ಯಾಣ ಮೇಲ್ವಿಚಾರಣೆ ಫೆಡರಲ್​ ಸೇವೆಯ ಮುಖ್ಯಸ್ಥ ಡಾ. ಅನ್ನಾ ಪೊಪೊವಾ ಅಲೆಕ್ಸಾಂಡರ್​ ವಿರುದ್ಧ ದೂರು ದಾಖಲು ಮಾಡಿದ್ದಾರೆ.

Comments are closed.