ಅಂತರಾಷ್ಟ್ರೀಯ

17ರ ಹುಡುಗಿ ಮತ್ತು 78ರ ಮುದುಕ ಮದುವೆ: ತಿಂಗಳಲ್ಲೇ ವೃದ್ಧನಿಂದಲೇ ವಿಚ್ಛೇದನಕ್ಕೆ ಅರ್ಜಿ; ಕಾರಣವೇನು ಗೊತ್ತಾ?

Pinterest LinkedIn Tumblr


ಜಕಾರ್ತಾ: 17ರ ಹುಡುಗಿ ಮತ್ತು 78ರ ಮುದುಕ ಮದುವೆಯಾಗಿ ಕೇವಲ 22 ದಿನದಲ್ಲೇ ವೃದ್ಧನಿಂದಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಘಟನೆ ಇಂಡೋನೇಷ್ಯಾದಿಂದ ವರದಿಯಾಗಿದೆ.

ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದ್ದು, ಪತಿ ಅಬಾ ಸರ್ನಾ ಹಾಗೂ ಪತ್ನಿ ನೋನಿ ನವಿತಾ ಎಂದು ಗುರುತಿಸಲಾಗಿದೆ.

ವೃದ್ಧ ಅಬಾ ಸರ್ನಾ ಅವರು ವಿಚ್ಛೇದನ ಪತ್ರ ಕಳುಹಿಸಿದ್ದಕ್ಕೆ 17 ವರ್ಷದ ನೋನಿ ಹಾಗೂ ಕುಟುಂಬದವರಿಗೆ ಆಘಾತವಾಗಿದೆ. ಇವರಿಬ್ಬರ ಸಂಬಂಧದ ಬಗ್ಗೆ ಹುಡುಗಿಗಾಗಲಿ ಅಥವಾ ಕುಟುಂಬದವರಿಗಾಗಲಿ ಯಾವುದೇ ಸಮಸ್ಯೆ ಇರಲಿಲ್ಲ. ಯಾವುದೇ ಮುನ್ಸೂಚನೆ ನೀಡದೆ ಈ ರೀತಿ ಮಾಡಿದ್ದಕ್ಕೆ ತುಂಬಾ ಆಘಾತವಾಗಿದೆ ಎಂದು ನೋನಿ ಸಹೋದರಿ ಅಯಾನ್ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಅಬಾ ಸರ್ನಾ ವಿಚಾರದಲ್ಲಿ ನಮ್ಮ ಕುಟುಂಬದವರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಅಬಾ ಸರ್ನಾ ಹಾಗೂ ಕುಟುಂಬದವರಿಂದ ಸಮಸ್ಯೆ ಶುರುವಾಗಿದೆ. ಅವರು ವಿವಾಹಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಅವರು ತಿಳಿಸಿದ್ದಾರೆ. ಅಲ್ಲದೆ ವಿವಾಹವಾಗುವುದಕ್ಕೂ ಮುನ್ನವೇ ನೋನಿ ಗರ್ಭಿಣಿಯಾಗಿದ್ದರಿಂದ ದಂಪತಿ ಬೇರೆಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಅಯಾನ್ ಇದನ್ನು ನಿರಾಕರಿಸಿದ್ದಾರೆ.

ವೃದ್ಧ ಅಬಾ ಅವರು ಆರ್‍ಎಂ 2,819(50 ಸಾವಿರ ರೂ.), ಮೋಟರ್ ಸೈಕಲ್, ಹಾಸಿಗೆ ಮೊದಲಾದವುಗಳನ್ನು ನೋನಿಗೆ ನೀಡಿದ್ದರು. ಈ ವಧುದಕ್ಷಿಣೆಯನ್ನು ಸಹ ವಾಪಸ್ ಕೊಂಡೊಯ್ದಿದ್ದು, ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ. ಇಂಡೋನೇಷ್ಯಾದಲ್ಲಿ ವಧುದಕ್ಷಿಣೆ ಕೊಡುವುದು ಸಾಮಾನ್ಯವಾಗಿದೆ.

Comments are closed.