
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಈಗ ಮೋದಿ ಪೋಸ್ಟರ್ ಕಾಣಿಸಿಕೊಂಡಿವೆ…! ಪ್ರಧಾನಿ ಮೋದಿ, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಜೊತೆಗೆ ಸಂಸದ ಅಯಾಜ್ ಸಾಧಿಕ್ ಇರುವ ಪೋಸ್ಟರ್ ಗಳು ಕಾಣಿಸಿಕೊಂಡಿವೆ. ಅದರಲ್ಲಿ ಪಾಕ್ ಸಂಸದ ಅಯಾಜ್ ಸಾಧಿಕ್ ಮೋದಿ ಸ್ನೇಹಿತ ಎಂದು ಟ್ರೋಲ್ ಮಾಡಿರುವುದು ಗಮನಾರ್ಹವಾಗಿದೆ.
ಪಾಕಿಸ್ತಾನ ಸಂಸತ್ತಿನಲ್ಲಿ ಮುಸ್ಲಿಂ ಲೀಗ್-ಎನ್ ನಾಯಕ ಸಾಧಿಕ್ ಮಾತನಾಡಿ.. ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆ ಮಾಡದಿದ್ದರೆ ರಾತ್ರಿ 9 ಗಂಟೆಗೆ ಭಾರತ ನಮ್ಮ ಮೇಲೆ ದಾಳಿ ಮಾಡುತ್ತದೆ ಎಂದು ವಿದೇಶಾಂಗ ಸಚಿವ ಮೊಹಮ್ಮದ್ ಖುರೇಷಿ ಹೇಳಿದ್ದು ತಮಗೆ ಈಗಲೂ ನೆನಪಿದೆ.
ಆ ಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಇಮ್ರಾನ್ ಖಾನ್ ನಿರಾಕರಿಸಿದ್ದರು. ಆದರೆ, ವಿದೇಶಾಂಗ ಸಚಿವ ಮೊಹಮ್ಮದ್ ಖುರೇಷಿ ಮಾತ್ರ ಹಾಜರಾಗಿದ್ದರು. ಸಭೆಯಲ್ಲಿ ಸೇನಾ ಮುಖ್ಯಸ್ಥ ಬಾಜ್ವಾ ಕೂಡ ಉಪಸ್ಥಿತರಿದ್ದರು. ದಯವಿಟ್ಟು ಅಭಿನಂದನ್ ವರ್ಧಮಾನ್ ಅವರನ್ನು ಬಿಟ್ಟು ಬಿಡಿ. ಇಲ್ಲದಿದ್ದರೆ ರಾತ್ರಿ 9 ಗಂಟೆಗೆ ಭಾರತ ನಮ್ಮ ಮೇಲೆ ದಾಳಿ ಮಾಡುತ್ತದೆ ಎಂದು ಸಚಿವ ಖುರೇಷಿ ಎಚ್ಚರಿಸಿದ್ದರು. ಆ ಕ್ಷಣದಲ್ಲಿ ಸೇನಾ ಮುಖ್ಯಸ್ಥ ಬಾಜ್ವಾ ಕಾಲುಗಳು ನಡುಗುತ್ತಿದ್ದವು ಸಾಧಿಕ್ ಹೇಳಿದ್ದರು.
Comments are closed.