ಮಗಳಿಗೆ ಕಿರುಕುಳ ನೀಡಿದ ಪತಿಯನ್ನು ಹತ್ಯೆ ಮಾಡಿ ಆತನನ್ನು ಕುಕ್ಕರ್ನಲ್ಲಿ ಇಟ್ಟು ಬೇಯಿಸಿದ ಘಟನೆ ಪಾಕಿಸ್ತಾನದಲ್ಲಿ ನಡೆದಿರುವುದು ವರದಿಯಾಗಿದೆ.
ಜೈನಾಬ್ ಬೀಬಿ ಬಂಧಿತೆ. ಈಕೆಗೆ ಈ ಮೊದಲು ಒಂದು ಮದುವೆ ಆಗಿತ್ತು. ಮೊದಲ ಗಂಡನಿಂದ ಮಗಳು ಕೂಡ ಹುಟ್ಟಿದ್ದಳು. ಇಬ್ಬರೂ ಬೇರೆ ಆದ ನಂತರದಲ್ಲಿ ಈಕೆ ಅಹ್ಮದ್ ಅಬ್ಬಾಸ್ನನ್ನು ಮದುವೆ ಆಗಿದ್ದಳು. ಮೊದಲ ಮದುವೆ ವೇಳೆ ಹುಟ್ಟಿದ ಮಗುವಿಗೆ ಅಹ್ಮದ್ ಅಬ್ಬಾಸ್ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ.
ಇದನ್ನು ಸಹಿಸದ ಜೈನಾಬ್ ಆತನನ್ನು ಕೊಂದು ಹಾಕಿದ್ದಾಳೆ. ಕೈಗೆ ಸಿಕ್ಕ ಚಾಕುವಿನಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ಅಷ್ಟಾದರೂ ಆಕೆಯ ರೋಷ ತಣಿದಿಲ್ಲ. ನಂತರ ಹೆಣವನ್ನು ಚಿಕ್ಕದಾಗಿ ಕೊಚ್ಚಿ ಕುಕ್ಕರ್ನಲ್ಲಿ ಬೇಸಿದ್ದಾಳೆ.
ಗಂಡನ ಶವವನ್ನು ಹೇಗೆ ವಿಲೇವಾರಿ ಮಾಡಬೇಕು ಎನ್ನುವ ಪ್ರಶ್ನೆ ಆಕೆಯನ್ನು ಕಾಡಿತ್ತು. ನಂತರ ಬೇಯಿಸಿದ ಶವದಿಂದಲೇ ಆಕೆ ಅಡುಗೆ ಸಿದ್ಧಪಡಿಸಿದ್ದಳು. ಅಲ್ಲದೆ, ಮಾಡಿದ ಅಡುಗೆ ಹೆಚ್ಚಾಗಿದೆ ಎಂದು ಆಕೆ ಬೀದಿ ನಾಯಿಗಳಿಗೆ ಹಂಚಿದ್ದಳು. ಪೊಲೀಸರ ತನಿಖೆ ವೇಳೆಯಲ್ಲಿ ಅಸಲಿ ವಿಚಾರ ಬಯಲಾಗಿದೆ. ಸದ್ಯ ಈಕೆ ಪೊಲೀಸರ ಮುಂದೆ ಎಲ್ಲವನ್ನೂ ಬಾಯ್ಬಿಟ್ಟಿದ್ದಾಳೆ. ಹೀಗಾಗಿ, ನ್ಯಾಯಾಲಯ ಈಕೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ.