ಅಂತರಾಷ್ಟ್ರೀಯ

ಕೊರೋನಾ ದೇಹ ಸೇರಿದ ಎಷ್ಟು ದಿನದ ಬಳಿಕ ರೋಗದ ಲಕ್ಷಣ ಕಾಣಿಸಿಕೊಳ್ಳುತ್ತದೆ ಗೊತ್ತಾ?

Pinterest LinkedIn Tumblr


ಕೊರೋನಾ ಸೋಂಕಿನ ಕುರಿತು ನಿರಂತರವಾಗಿ ವಿಶ್ವದೆಲ್ಲೆಡೆ ಸಂಶೋಧನೆಗಳು ನಡೆಯುತ್ತಲೆ ಇವೆ. ಬ್ರಿಟನ್​ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ನಡೆಸಿರುವ ಸಂಶೋಧನೆಯಲ್ಲಿ ಈ ಕೋವಿಡ್​ ಸೋಂಕು ದೀರ್ಘಕಾಲದ ಪರಿಣಾಮ ಹೊಂದಿರುವುದು ಬಯಲಾಗಿದೆ.

ಕೊರೋನಾ ಸೋಂಕಿಗೆ ತುತ್ತಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರು ಇನ್ನು ಕೂಡ ಪೂರ್ಣ ಚೇತರಿಕೆ ಕಾಣದೇ, ಉಸಿರಾಟದ ಸಮಸ್ಯೆ, ಆಯಾಸ, ಆತಂಕ ಮತ್ತು ಖಿನ್ನತೆಗಳಿಂದ ಬಳಲುತ್ತಿರುವುದು ಅಧ್ಯಯನಗಳಿಂದ ದೃಢಪಟ್ಟಿದೆ.

ಅಷ್ಟೇ ಅಲ್ಲದೇ ಕೊವೀಡ್​ ಸೋಂಕಿಗೆ ತುತ್ತಾದವರ ಅಂಗಾಗಳಲ್ಲಿ ಊನತೆಯಂತಹ ಅಸಹಜ ಲಕ್ಷಣಗಳು ಕಂಡುಬರುತ್ತಿವೆ. ಕೊರೋನಾ ಹೋರಾಟದಲ್ಲಿ ಬದುಕುಳಿದವರು ನಿರಂತರ ಉರಿಯೂತಕ್ಕೆ ತುತ್ತಾಗುತ್ತಿರುವುದು ಬೆಳಕಿಗೆ ಬಂದಿದೆ ಎಂದು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಕೊರೋನಾಗೆ ತುತ್ತಾಗಿದ್ದ ದೆಹಲಿಯ 19 ವರ್ಷದ ಯುವಕನೊಬ್ಬ ಪಾರ್ಶ್ವವಾಯುಗೆ ತುತ್ತಾಗಿರುವ ಬಗ್ಗೆ ವೈದ್ಯರು ತಿಳಿಸಿದ್ದರು. ಯಾವುದೇ ಆರೋಗ್ಯ ಸಮಸ್ಯೆ ಇರದ ಸೋಂಕಿತ ಯುವಕ ಮೆಟ್ಟಿಲು ಹತ್ತುವಾಗ ಹಠಾತ್​ ಕುಸಿದು ಬಿದ್ದಿದ್ದ. ಈತನ ದೇಹಕ್ಕೆ ಕೊರೋನಾ ಸೋಂಕು ಹೊಕ್ಕಗ ದೇಹದಲ್ಲಿದ್ದ ರೋಗ ನಿರೋಧಕ ಶಕ್ತಿಯೂ ಬಾಹ್ಯ ನರಮಂಡಲಕ್ಕೆ ದಾಳಿ ಇಟ್ಟಿತ್ತು ಎಂದು ವೈದ್ಯರು ತಿಳಿಸಿದ್ದರು.

ಮುನ್ನೆಚ್ಚರಿಕೆಯೊಂದೆ ಮಾರ್ಗ:
ಕೊರೋನಾ ಪ್ರಕರಣಗಳು, ಸಾವಿನ ಸಂಖ್ಯೆ, ಚೇತರಿಕೆ ದರಗಳನ್ನು ಪ್ರತಿ ಮಿಲಿಯನ್​ಗಳಲ್ಲಿ ನೋಡಿದಾಗ ಭಾರತ ಮೂರನೇ ಸ್ಥಾನದಲ್ಲಿದೆ. ಕೊರೋನಾ ವಿರುದ್ಧ ಸಂಪೂರ್ಣ ಜಯಗಳಿಸಲು ಪ್ರತಿಯೊಬ್ಬ ಭಾರತೀಯರು ಕ್ರಮಕ್ಕೆ ಮುಂದಾಗಬೇಕು. ಮಾಸ್ಕ್​, ಸ್ವಚ್ಛತೆ, ಸಾಮಾಜಿಕ ಅಂತರ ಎಂಬ ಮೂರು ಮಂತ್ರಗಳನ್ನು ಅನುಸರಿಸಿದರೆ ವೈರಸ್​ನಿಂದ ಅನೇಕರ ಜೀವವನ್ನು ಉಳಿಸಿಕೊಳ್ಳಬಹುದಾಗಿದೆ.

ಚಳಿಗಾಲದ ಶೀತ ವೈರಸ್​ಗಳಿಗೆ ಹೇಳಿ ಮಾಡಿಸಿದ ವಾತಾವರಣವಾಗಿದೆ. ಚಳಿಗಾಲದಲ್ಲೇ ಹಬ್ಬಗಳು ಹೆಚ್ಚು ಇವೆ. ಈ ಸಂದರ್ಭದಲ್ಲಿ ಜನರು ಕೊರೋನಾ ವೈರಸ್ ಬಗ್ಗೆ ಜಾಗ್ರತೆ ವಹಿಸದೆ ನಿರ್ಲಕ್ಷ್ಯ ತೋರಿದರೆ ಸೋಂಕು ಏರುಗತಿಗೆ ಹೋಗಬಹುದು. ಒಂದು ತಿಂಗಳ ಅವಧಿಯಲ್ಲಿ 26 ಲಕ್ಷದಷ್ಟು ಪ್ರಕರಣಗಳ ಏರಿಕೆ ಆಗಬಹುದು ಎಂದು ತಜ್ಞರು ಹೇಳುತ್ತಾರೆ. ಈ ಹಿನ್ನಲೆ ಜನರು ಈ ಬಗ್ಗೆ ಎಚ್ಚರವಹಿಸಬೇಕು. ಹಬ್ಬಗಳ ಸಾಲಿನಲ್ಲಿ ಮೈಮರೆತು ಸೋಂಕಿಗೆ ಆಹ್ವಾನ ನೀಡಬಾರದು. ಲಸಿಕೆ ಕಂಡು ಹಿಡಿಯುವವರೆಗೂ ಮೂರು ಮಂತ್ರಗಳ ಜಾಗುರುಕತೆ ಅವಶ್ಯಕವಾಗಿದೆ.

Comments are closed.