ಅಂತರಾಷ್ಟ್ರೀಯ

ಅಮೆರಿಕ ಮೂಲದ ಆನ್​ಲೈನ್​ ಮಾರುಕಟ್ಟೆ ದೈತ್ಯ ಅಮೇಜಾನ್​ನ 20 ಸಾವಿರ ಸಿಬ್ಬಂದಿಗೆ ಸೋಂಕು

Pinterest LinkedIn Tumblr


ವಾಷಿಂಗ್ಟನ್: ಅಮೆರಿಕ ಮೂಲದ ಆನ್​ಲೈನ್​ ಮಾರುಕಟ್ಟೆ ಸಂಸ್ಥೆ ಅಮೇಜಾನ್​ನಲ್ಲಿ ಇಲ್ಲಿಯವರೆಗೆ 20,000 ಮಂದಿಗೆ ಕೊರೋನಾ ಸೋಂಕು ತಗುಲಿದೆ ಎಂದು ವರದಿಗಳು ಹೇಳಿವೆ.

ಮಾರ್ಚ್‌ನಲ್ಲಿ ಕರೊನಾ ವೈರಸ್ ಕಾಣಿಸಿಕೊಂಡಾಗಿನಿಂದ ಇಲ್ಲಿವರೆಗಿನ ಲೆಕ್ಕಾಚಾರವನ್ನು ಹಾಕಲಾಗಿದ್ದು, ಇಷ್ಟು ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಅಮೆರಿಕದ ಫುಡ್ ಮಾರ್ಕೆಟ್ ಗ್ರಾಸರಿ ಸೇರಿ 1.37 ದಶಲಕ್ಷ ಫ್ರಂಟ್‌ಲೈನ್ ಜನ ಈ ಅನ್​ಲೈನ್​ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಾರೆ.

ಗುಂಪುಗುಂಪಾಗಿ ಸಿಬ್ಬಂದಿಗೆ ಕರೊನಾ ಸೋಂಕು ಕಾಣಿಸಿಕೊಂಡಿದೆ. ಆದರೆ ಈ ಬಗ್ಗೆ ಕಂಪೆನಿ ಭಯದಿಂದ ಯಾವುದೇ ಮಾಹಿತಿ ಹೊರಕ್ಕೆ ಹಾಕುತ್ತಿಲ್ಲ ಎಂದು ಅಮೇಜಾನ್​ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಇದೀಗ ಕಂಪೆನಿ ಸೋಂಕಿತರ ಮಾಹಿತಿ ಬಹಿರಂಗಪಡಿಸಿದೆ. ಪ್ರತಿದಿನ 650 ಸೈಟ್‌ಗಳಲ್ಲಿ 50 ಸಾವಿರ ಜನರ ಕರೊನಾ ಪರೀಕ್ಷೆ ನಡೆಸಲಾಗುತ್ತಿದೆ.

Comments are closed.