ರಾಷ್ಟ್ರೀಯ

ಕೊರೋನಾ ಪರೀಕ್ಷೆಗೆ ಒಳಪಟ್ಟು 2 ಗಂಟೆಯೊಳಗೆ ವರದಿ: ರಿಲಾಯನ್ಸ್​ನಿಂದ ಆರ್​ಟಿ-ಪಿಸಿಆರ್​ ಕಿಟ್​ ಅಭಿವೃದ್ಧಿ

Pinterest LinkedIn Tumblr


ನವದೆಹಲಿ: ಇಲ್ಲಿಯವರೆಗೆ ಕೊರೋನಾ ಪರೀಕ್ಷೆ ವರದಿ ಬರಲು ಒಂದು ದಿನ ಬೇಕಿದೆ. ಈ ಪರೀಕ್ಷೆಯ ವಿಳಂಬವನ್ನು ತಪ್ಪಿಸುವ ಸಲುವಾಗಿ ರಿಲಯನ್ಸ್​ ಲೈಫ್​ ಸೈನ್ಸ್​ ಆರ್​ಟಿ-ಪಿಸಿಆರ್​ ಕಿಟ್​ ಅಭಿವೃದ್ಧಿ ಪಡಿಸಿದೆ. ಇದು ಎರಡು ಗಂಟೆಗಳ ಒಳಗಾಗಿ ಕೋವಿಡ್​ ಸೋಂಕಿನ ವರದಿ ನೀಡಲಿದೆ ಎಂದು ಕಂಪನಿ ತಿಳಿಸಿದೆ.

ಸದ್ಯ ಕೊರೋನಾ ಪರೀಕ್ಷೆಗೆ ಒಳಪಟ್ಟ ಬಳಿಕ ಸೋಂಕು ಇರುವ ಬಗ್ಗೆ ದೃಢೀಕರಿಸಲು 24ಗಂಟೆಗಳ ಸಮಯಬೇಕಾಗಿದೆ. ರಿಲಾಯನ್ಸ್​ ಲೈಫ್​ ಸೈನ್ಸ್​ನ ಜೀವಶಾಸ್ತ್ರಜ್ಞರು ಭಾರತದ 100 ಜೀನೋಮ್​ಗಳನ್ನು ವಿಶ್ಲೇಷಿಸಿ, ಪರಿಮಾಣಾತ್ಮಕವಾಗಿ ಈ ಕಿಟ್​ ಅಭಿವೃದ್ಧಿಪಡಿಸಲಾಗಿದೆ. ಇನ್ನು ಈ ಆರ್​ಟಿ-ಪಿಸಿಆರ್​ ಕಿಟ್​ ಅನ್ನು ಗೋಲ್ಡ್​ ಸ್ಟಾಂಡರ್ಡ್​ಆಗಿ ಪರಿಗಣಿಸಲಾಗಿದೆ.

ರಿಲಾಯನ್ಸ್​ ಲೈಫ್​ ಸೈನ್ಸ್​ ಅಭಿವೃದ್ಧಿ ಪಡಿಸಿರುವ ಈ ಕಿಟ್​ನ್ನು ಆರ್​- ಗ್ರೀನ್​ ಕಿಟ್ ಎಂದು ಹೆಸರಿಸಲಾಗಿದೆ. ಇದರ ತೃಪ್ತಿದಾಯಕ ಸೇವೆಯನ್ನು ಐಸಿಎಂಆರ್​ನಿಂದ ತಾಂತ್ರಿಕವಾಗಿ ಮೌಲ್ಯೀಕರಿಸಲಾಗಿದೆ.

ಐಸಿಎಂಆರ್​ ಮೌಲ್ಯೀಕರಣ ಪ್ರಕ್ರಿಯೆ ವಿನ್ಯಾಸವನ್ನು ಅನುಮೋದಿಸುವುದಿಲ್ಲ ಹಾಗೂ ನಿರಾಕರಿಸುವುದಿಲ್ಲ. ಅದು ಬಳಕೆದಾರ ಸ್ನೇಹಪರತೆಯನ್ನು ಕೂಡ ಪ್ರಮಾಣೀಕರಿಸುವುದಿಲ್ಲ.

ಈ ಕಿಟ್​ ಆಂತರಿಕ ನಿಯಂತ್ರಣದಲ್ಲಿ ಇ-ಜೆನ್​, ಆರ್​-ಜೆನ್​ ಆರ್ಡಿಆರ್​ಪಿ ಇರುವಿಕೆಯನ್ನು ಪತ್ತೆ ಮಾಡುತ್ತದೆ. ಐಸಿಎಂಆರ್​ ಪ್ರಕಾರಣ ಈ ಕಿಟ್​ ಶೇ98.8 ಸಂವೇದನೆಯನ್ನು 98.7ರಷ್ಟು ಸರಿಯಾಗಿ ತೋರಿಸುತ್ತದೆ.

ಈ ಕಿಟ್​​​ ಅನ್ನು ಸಂಪೂರ್ಣವಾಗಿ ಆರ್​ ಅಂಡ್​​ ಡಿ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ. ಇದು ಸರಳವಾಗಿದ್ದು ಸರಳವಾಗಿ ಪತ್ತೆಹಚ್ಚುವ ಕಾರ್ಯಕ್ಷಮತೆ ಹೊಂದಿದೆ. ಅಲ್ಲದೇ 2 ಗಂಟೆಯೊಳಗೆ ಪತ್ತೆಕಾರ್ಯ ನಡೆಸುತ್ತದೆ.

ರಿಲಾಯನ್ಸ್​ ಲೈರ್ಫ್ ಸೈನ್​ ನಡೆಸಿದ ಪ್ರತ್ಯೇಕ ಸಮೀಕ್ಷೆ ಪ್ರಕಾರ 2020ರ ವೇಳೆಗೆ ಸೋಂಕಿನಿಂದ ಮೃತಪಡುವವರ ಸಂಖ್ಯೆ ಕಡಿಮೆಯಾಗಲಿದೆ ಎಂದು ತಿಳಿಸಿದೆ.

Comments are closed.