ಅಂತರಾಷ್ಟ್ರೀಯ

ಈ ಮ್ಯೂಸಿಯಂನಲ್ಲಿದೆ ದೆವ್ವದ ಕಾಟ ! ಮಗು ಅಳುವ ಶಬ್ದ, ಯಾರೂ ಸಂಗೀತ ಕಚೇರಿ ನಡೆಸಿದಂತೆ, ಗೆಜ್ಜೆ ಸಪ್ಪಳದ ಸದ್ದು ಮಾಡುತ್ತಿದೆ !

Pinterest LinkedIn Tumblr

ಈಗ ಈ ಮ್ಯೂಸಿಯಂ ಭಾರಿ ಸುದ್ದಿಯಲ್ಲಿದೆ. ಅಷ್ಟಕ್ಕೂ ಇಲ್ಲಿ ನಡೆಯುತ್ತಿರುವುದು ಮಾತ್ರ ವಿಚಿತ್ರ ಘಟನೆ. ಸಾವಿರಾರು ಪ್ರವಾಸಿಗರು ಬರುವ ಈ ಮ್ಯೂಸಿಯಂನಲ್ಲಿ ದೆವ್ವ ಕಾಟ ಇದೆ ಎಂದು ಭದ್ರತಾ ಸಿಬ್ಬಂದಿಯೇ ದೂರೊಂದನ್ನು ನೀಡಿದ್ದಾನೆ.

18ನೇ ಶತಮಾನದಲ್ಲಿ ನಿರ್ಮಾಣವಾದ ಈ ಬ್ರಿಟಿಷ್​ ಮ್ಯೂಸಿಯಂನಲ್ಲಿಯೇ ದೆವ್ವ ಕಾಟ ಇದೆ ಎಂದು ಹೇಳಲಾಗುತ್ತಿದೆ.

ಆದರೆ, ಈಗ ಈ ಮ್ಯೂಸಿಯಂನಲ್ಲಿ ರಾತ್ರಿ ಪಾಳಿ ಮಾಡುವ ಭದ್ರತಾ ಸಿಬ್ಬಂದಿ ವಿಚಿತ್ರ ರೀತಿಯ ದೂರೊಂದನ್ನು ನೀಡಿದ್ದಾರೆ. ಅದೇನೆಂದರೆ, ರಾತ್ರಿ ಈ ಮ್ಯೂಸಿಯಂ ಒಳಗೆ ದೆವ್ವ ಕಾಟ ನೀಡುತ್ತಿದೆಯಂತೆ!

ಈ ಬಗ್ಗೆ ಭದ್ರತಾ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರಂತೆ. ರಾತ್ರಿ ವೇಳೆ ಕಿಡಿಕಿಗಳು ಬಡಿದುಕೊಳ್ಳುತ್ತವೆ. ಮಗು ಅಳುವ ಶಬ್ದ, ಯಾರೂ ಸಂಗೀತ ಕಚೇರಿ ನಡೆಸಿದಂತೆ, ಗೆಜ್ಜೆ ಸಪ್ಪಳದ ಸದ್ದು ಸೇರಿದಂತೆ ಚಿತ್ರ ವಿಚಿತ್ರ ಅನುಭವಗಳನ್ನು ಭದ್ರತಾ ಸಿಬ್ಬಂದಿ ಎದುರಿಸುತ್ತಿದ್ದಾರೆ.

ಭದ್ರತಾ ಸಿಬ್ಬಂದಿಗಳು ರಾತ್ರಿ ನಿದ್ದೆಗಣ್ಣಿನಲ್ಲಿ ಈ ರೀತಿ ಹೇಳಿರಬಹುದು ಎಂದು ಅಧಿಕಾರಿಗಳು ಭಾವಿಸಿದ್ದರು. ಆದರೆ, ರಾತ್ರಿ ಇಲ್ಲಿಗೆ ತೆರಳುವ ಪ್ರತಿಯೊಬ್ಬರಿಗೂ ಇದೇ ರೀತಿಯ ಅನುಭವ ಆಗುತ್ತಿದೆ.

ಇನ್ನು, ಭದ್ರತಾ ಸಿಬ್ಬಂದಿ ಹೇಳಿಕೆಗೆ ಪುಷ್ಟಿ ನೀಡುವಂತಿದೆ ಕೆಲ ಪ್ರವಾಸಿಗರು ಇಲ್ಲಿ ತೆಗೆದಿರುವ ಚಿತ್ರಗಳು. ಇಲ್ಲಿ ಕ್ಲಿಕ್ಕಿಸಿದ ಕೆಲ ಫೋಟೋಗಳಲ್ಲಿ ಗ್ಲಾಸ್ ಒಂದರ ಮೇಲೆ ಹೆಣ್ಣಿನ ಆಕ್ರತಿ ಇರುವುದು ಕಂಡು ಬಂದಿದೆ.

ಇನ್ನು, ಭದ್ರತಾ ಸಿಬ್ಬಂದಿಯೋರ್ವ ರಾತ್ರಿ ಎರಡು ತಲೆ ಹೊಂದಿರುವ ಶ್ವಾನದ ಮೂರ್ತಿ ಇರುವ ದಿಕ್ಕಿನಲ್ಲಿ ತೆರಳುತ್ತಿದ್ದಂತೆ, ಫೈರ್ ಅಲಾರಮ್ ಹೊಡೆದುಕೊಳ್ಳಲು ಆರಂಭವಾಗಿತ್ತಂತೆ. ವಿಚಿತ್ರ ಎಂದರೆ, ಈ ಶಬ್ದ ಆತನಿಗೆ ಬಿಟ್ಟು ಬೇರಾರಿಗೂ ಕೇಳಿಯೇ ಇಲ್ಲ!

ಈ ಮ್ಯೂಸಿಯಂನಲ್ಲಿ ಈಜಿಫ್ಟ್ ಸಾಮ್ರಾಜ್ಯಗಳ ವಸ್ತುಗಳನ್ನು ಇಡಲಾಗಿದೆ. 19 ಮಮ್ಮಿಗಳನ್ನು ಇಟ್ಟಿರುವ ಜಾಗದಲ್ಲಿ ರಾತ್ರಿ ವೇಳೆ ತೆರಳಿದರೆ, ಅಲ್ಲಿನ ವಾತಾವರಣ ತುಂಬಾನೇ ಚಳಿಯಿಂದ ಕೂಡಿರುತ್ತದೆಯಂತೆ. ಆ ಹಾಲ್ ಬಿಟ್ಟು ಹೊರ ನಡೆದರೆ ವಾತಾವರಣ ತಿಳಿಯಾಗಿ ಬಿಡುತ್ತದೆಯಂತೆ!

ಸದ್ಯ, ಈ ಬಗ್ಗೆ ತನಿಖೆ ನಡೆಸಲು ಅಲ್ಲಿನ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಆದರೆ, ಭದ್ರತಾ ಸಿಬ್ಬಂದಿ ಈ ರೀತಿಯ ಅನುಭವಗಳನ್ನು ಎದುರಿಸುತ್ತಿರುವುದು ನಿಜಕ್ಕೂ ವಿಚಿತ್ರ!

ಈ ಮ್ಯೂಸಿಯಂನಲ್ಲಿ ಹಲವು ರಾಜ ಮನೆತನಗಳಿಗೆ ಸಂಬಂಧಿಸಿದ ವಸ್ತುಗಳನ್ನು ಇಡಲಾಗಿದೆ.

ಮಮ್ಮಿಗಳು ಕೂಡ ಇಲ್ಲಿ ಇರುವದರಿಂದ ಇದು ನಿಜಕ್ಕೂ ಇದು ದೆವ್ವದ ಕಾಟವೇ ಇರಬಹುದು ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.

Comments are closed.