ಅಂತರಾಷ್ಟ್ರೀಯ

ಚೀನಾವನ್ನು ಸೋಲಿಸಿ ವಿಶ್ವಸಂಸ್ಥೆಯ ಸಿಎಸ್​ಡಬ್ಲ್ಯು ಸದಸ್ಯತ್ವ ಜಯಿಸಿದ ಇಂಡಿಯಾ

Pinterest LinkedIn Tumblr


ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಎಕನಾಮಿಕ್ ಆ್ಯಂಡ್ ಸೋಷಿಯಲ್ ಕೌನ್ಸಿಲ್​ (ECOSOC)ನ ಕಮಿಷನ್​ ಆನ್ ಸ್ಟೇಟಸ್ ಆಫ್ ವುಮೆನ್​ (CSW) ಸದಸ್ಯ ರಾಷ್ಟ್ರವಾಗಿ ಚುನಾವಣಾ ಕಣದಲ್ಲಿದ್ದ ಚೀನಾವನ್ನು ಸೋಲಿಸಿ ಭಾರತ ಜಯ ಸಾಧಿಸಿದೆ.

ಈ ಗೆಲುವಿನೊಂದಿಗೆ ಭಾರತ ಸಿಎಸ್​ಡಬ್ಲ್ಯುನ ಸದಸ್ಯ ರಾಷ್ಟ್ರವಾಗಿ 2021ರಿಂದ 2025ರ ಅವಧಿಯಲ್ಲಿ ಕಾರ್ಯನಿರ್ವಹಿಸಲಿದೆ. ಭಾರತ, ಚೀನಾ ಮತ್ತು ಅಫ್ಘಾನಿಸ್ತಾನ ಈ ಮೂರು ರಾಷ್ಟ್ರಗಳು ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದವು. ಆಫ್ಘನ್ ಮತ್ತು ಭಾರತ ಗೆಲುವು ದಾಖಲಿಸಿದರೆ, ಚೀನಾಕ್ಕೆ ಒಟ್ಟು ಸದಸ್ಯ ಬಲ 54ರ ಅರ್ಧದಷ್ಟು ಮತಕ್ಕಿಂತ ಹೆಚ್ಚು ಮತ ಗಳಿಸುವುದು ಸಾಧ್ಯವಾಗಲಿಲ್ಲ.

ಭಾರತದ ಪ್ರತಿಷ್ಠಿತ ಆಯೋಗದ ಸದಸ್ಯತ್ವ ಗೆಲುವಿನ ವಿಚಾರವನ್ನು ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಸಿಎಸ್​ಡಬ್ಲ್ಯು ಎಂಬುದು ಜಾಗತಿಕ ಮಟ್ಟದ ಅಂತರ್​ಸರ್ಕಾರೀಯ ಸಂಸ್ಥೆಯಾಗಿದ್ದು, ವಿಶೇಷವಾಗಿ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತದೆ. ಇದನ್ನು 1946ರ ಜೂನ್ 21ರಂದು ತೆಗೆದುಕೊಂಡ ನಿರ್ಣಯದ ಪ್ರಕಾರ ಸ್ಥಾಪಿಸಲಾಗಿದೆ. ಈ ಆಯೋಗದಲ್ಲಿ ವಿಶ್ವಸಂಸ್ಥೆಯ ECOSOCದ 45 ಸದಸ್ಯ ರಾಷ್ಟ್ರಗಳ ತಲಾ ಒಬ್ಬ ಪ್ರತಿನಿಧಿ ಇರುತ್ತಾನೆ.

Comments are closed.