ಕರ್ನಾಟಕ

ಅಗಲಿದ ಮಾಲೀಕನ ನೆನಪಲ್ಲಿ ಅನ್ನ, ನೀರು ತ್ಯಜಿಸಿ ಪ್ರಾಣಬಿಟ್ಟ ನಾಯಿ

Pinterest LinkedIn Tumblr


ಬೆಳಗಾವಿ: ನಾಯಿಯೊಂದು ಅಗಲಿದ ಮಾಲೀಕನ ನೆನಪಲ್ಲಿ ಅನ್ನ, ನೀರು ತ್ಯಜಿಸಿ ಪ್ರಾಣಬಿಟ್ಟ ಮನಕಲುಕುವ ಘಟನೆ ಇದಾಗಿದೆ. ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ನಾಯಿಯನ್ನು ನಿಯತ್ತಿಗೆ ಹೋಲಿಸಲಾಗುತ್ತದೆ. ಅದರ ಪ್ರೀತಿ, ನಿಯತ್ತು ಮನುಷ್ಯನಿಗೂ ಇಲ್ಲ ಎಂದೇ ಬಿಂಬಿತವಾಗಿದೆ. ಒಂದೇ ಒಂದು ಹೊತ್ತು ಊಟ ಹಾಕಿದರೂ, ಅವರ ಮನೆಯನ್ನು ಜೀವನಪೂರ್ತಿ ಕಾಯುವ ಏಕೈಕ ನಿಯತ್ತಿನ ಪ್ರಾಣಿ ನಾಯಿ ಎಂದೇ ಹೇಳಲಾಗುತ್ತದೆ.

ಅಂಥದರಲ್ಲಿ ಜೀವನಪೂರ್ತಿ ಸಾಕಿ ಸಲುಹಿದ ಮಾಲೀಕನ ಮೇಲೆ ಅದೆಷ್ಟು ಪ್ರೀತಿ ಇರಬೇಡ ಈ ನಾಯಿಗೆ. ಇಂಥದ್ದೇ ಪ್ರೀತಿ, ವಿಶ್ವಾಸಹೊಂದಿದ ಬೆಳಗಾವಿಯ ನಾಯಿಯೊಂದು ತನ್ನ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

‘ಅವರಾದಿ ಗ್ರಾಮದ ಶಂಕ್ರಪ್ಪ ಮಡಿವಾಳರ ಎಂಬುವವರ ನಾಯಿ ಇದಾಗಿದೆ. ಇವರು ಹಾಲು ವ್ಯಾಪಾರಿಯಾಗಿದ್ದರು. ಅವರು ಈ ನಾಯಿಯ ಮೇಲೆ ಅಪಾಯ ಪ್ರೀತಿ ಇಟ್ಟಿದ್ದರು. ಅದಕ್ಕೆ ಕಡ್ಡಿ ಎಂದು ಹೆಸರಿಟ್ಟಿದ್ದರು.

ಕೆಲ ದಿನಗಳ ಹಿಂದೆ ಶಂಕ್ರಪ್ಪನವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರ ನಿಧನರಾದ ದಿನದಿಂದ ಕಡ್ಡಿ, ಗೋಳಾಡುತ್ತಿತ್ತು. ಶಂಕ್ರಪ್ಪನವರು ಹಾಲು ಸಂಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರಕ್ಕೆ ಹಾಲು ಮಾರಾಟ ಮಾಡುತ್ತಿದ್ದರು. ನಾಯಿ ಅಲ್ಲಿಗೆಲ್ಲಾ ಹೋಗಿ ಸುತ್ತಾಡಿ ಬಂದಿದೆ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.

ಮಾಲೀಕನಿಲ್ಲದ ಕೊರಗಲ್ಲೇ ಆರು ದಿನಗಳಿಂದ ಊಟವನ್ನೂ ಬಿಟ್ಟಿತ್ತು. ಇಂದು ನಾಯಿ ಮೃತಪಟ್ಟಿದೆ.

Comments are closed.