
ಕೊರೋನಾದಿಂದಾಗಿ ಅನೇಕರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಸೇರುತ್ತಿದ್ದಾರೆ. ಮನೆಯಿಂದಲೇ ಕುಳಿತು ಕೆಲಸದ ಕುರಿತಾಗಿ ಸಭೆ, ಮಾತುಕತೆ ನಡೆಸುತ್ತಿದ್ದಾರೆ. ಇಂತಹ ಸಂದರ್ಭಲ್ಲಿ ಗೊತ್ತಿಲ್ಲದೆ ಪತ್ನಿ, ಮಕ್ಕಳು ವಿಡಿಯೋ ಕಾನ್ಫರೆನ್ಸ್ನಲ್ಲಿ ಕಾಣಿಸಿಕೊಳ್ಳುತ್ತಾರೆ. ಸಾಕಷ್ಟು ಬಾರಿ ಇಂತಹ ಘಟನೆಗಳು ಬೆಳಕಿಗೆ ಬಂದಿವೆ, ವೈರಲ್ ಕೂಡ ಆಗಿವೆ. ಆದರೀಗ ಇಲ್ಲೊಬ್ಬ ಸರ್ಕಾರಿ ಅಧಿಕಾರಿ ವಿಡಿಯೋ ಕಾನ್ಫರೆನ್ಸ್ ವೇಳೆ ಸೆಕ್ಸ್ ಮಾಡಿ ಸಿಕ್ಕಿಬಿದ್ದಿದ್ದಾರೆ!
ಫಿಲಿಫೈನ್ನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಫಿಲಿಫೈನ್ನ ಸರ್ಕಾರ ಜೂಮ್ ಆ್ಯಪ್ನಲ್ಲಿ ವಿಡಿಯೋ ಕಾನ್ಫರೆನ್ಸ್ ಏರ್ಪಡಿಸಿತ್ತು. ಹಲವು ವಿಷಗಳ ಕುರಿತು ಚರ್ಚೆಗಳನ್ನು ನಡೆಸಲಾಗುತ್ತಿತ್ತು. ಆದರೆ ಈ ವೇಳೆ ಕಾರ್ಯದರ್ಶಿಯೊಬ್ಬರು ವಿಡಿಯೋ ಕಾನ್ಫರೆನ್ಸ್ ವೇಳೆ ಸೆಕ್ಸ್ ಮಾಡಿ ಸಿಕ್ಕಿಬಿದ್ದಿದ್ದಾರೆ.
ಫಿಲಿಫೈನ್ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿರುವ ಪ್ರಕಾರ, ‘ಕ್ಯಾವೈಟ್ ಪ್ರಾಂತ್ಯದ ಫಾತಿಮಾ ಡಾಸ್ ಗ್ರಾಮದ ಕೌನ್ಸಿಲರ್ ಜೀಸಸ್ ಎಸ್ಟಿಲ್ ಕಾನ್ಫರೆನ್ಸ್ ವೇಳೆ ಸೆಕ್ಸ್ ಮಾಡಿ ಸಿಕ್ಕಿಬಿದ್ದಿದ್ದಾರೆ. ಜೂಮ್ ಆ್ಯಪ್ನಲ್ಲಿ ಸಭೆ ಸೇರಿರುವ ವೇಳೆ ಜೀಸಸ್ ಎಸ್ಟಿಲ್ ಕ್ಯಾಮೆರಾ ಆಫ್ ಆಗಿದೆ ಎಂದು ತಿಳಿದು ಮಹಿಳೆಯೊಂದಿಗೆ ಸೆಕ್ಸ್ ಮಾಡಿದ್ದಾರೆ. ಆದರೆ ಕ್ಯಾಮೆರಾ ಆನ್ ಆಗಿತ್ತು. ಹಾಗಾಗಿ ಈ ಘಟನೆ ಬೆಳಕಿಗೆ ಬಂದಿದೆ ಎಂದಿದೆ.
ಜೀಸಸ್ ಎಸ್ಟಿಲ್ ಸೆಕ್ಸ್ ಮಾಡಿರುವ ವಿಚಾರ ಎಲ್ಲೆಡೆ ವೈರಲ್ ಆಗಿದೆ. ಮಾತ್ರವಲ್ಲದೆ ಅಲ್ಲಿನ ಮಾದ್ಯಮಗಳು ಕೂಡ ಈ ವಿಚಾರವನ್ನು ಬಯಲು ಮಾಡಿದೆ.
ಆಗಸ್ಟ್ 26 ರಂದು ಈ ಘಟನೆ ಬೆಳಕಿಗೆ ಬಂದಿದ್ದು, ಸಿಬ್ಬಂಧಿಯೊಬ್ಬರು ಜೀಸಸ್ ಎಸ್ಟಿಲ್ ವಿಡಿಯೋ ಕಾನ್ಪರೆನ್ಸ್ ವೇಳೆ ಸೆಕ್ಸ್ ಮಾಡುತ್ತಿದ್ದ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ನಂತರ ವಿಡಿಯೋ ಸಾರ್ವಜನಿಕವಾಗಿ ಶೇರ್ ಆಗಿದೆ. ಅಲ್ಲಿನ ಸರ್ಕಾರ ಗಮನಕ್ಕೂ ಬಂದಿದೆ. ನಂತರ ಜೀಸಸ್ ಎಸ್ಟಿಲ್ ಅವರನ್ನು ಕೆಲಸದಿಂದ ತೆಗೆದಚು ಹಾಕಿದೆ.
Comments are closed.