ಅಂತರಾಷ್ಟ್ರೀಯ

ಸ್ವೀಡನ್​ನ ಗಡಿರಾಜ್ಯ ಮಾಲ್ಮೋ ನಲ್ಲಿ ಕುರಾನ್ ಸುಟ್ಟ ದುಷ್ಕರ್ಮಿಗಳು; ಪ್ರತಿಭಟನೆ

Pinterest LinkedIn Tumblr


ಸ್ಟಾಕ್​ಹಾಮ್(ಆ. 29): ಸ್ವೀಡನ್ ದೇಶದ ಗಡಿರಾಜ್ಯ ಮಾಲ್ಮೋ ಶುಕ್ರವಾರ ಹಲವು ಹಿಂಸಾಚಾರಗಳಿಗೆ ಸಾಕ್ಷಿಯಾಯಿತು. ಇಸ್ಲಾಮ್ ವಿರೋಧಿ ಪ್ರತಿಭಟನಾಕಾರರು ಕುರಾನ್ ಗ್ರಂಥಕ್ಕೆ ಅವಮಾನ ಮಾಡಿ ಸುಟ್ಟು ಹಾಕಿದ್ದಾರೆ. ಡೆನ್ಮಾರ್ಕ್ ದೇಶದ ಕಟ್ಟರ್ ಬಲಪಂಥೀಯ ನಾಯಕರೊಬ್ಬರ ಆಗಮನವನ್ನು ತಡೆದು ವಾಪಸ್ ಕಳುಹಿಸಲಾಗಿದೆ. ಅದನ್ನ ವಿರೋಧಿಸಿ ಸ್ವೀಡನ್​ನಲ್ಲಿ ಪ್ರತಿಭಟನಾಕಾರರು ಗಲಭೆ ಮಾಡಿದ್ದಾರೆ. ಅದಾದ ಕೆಲ ಗಂಟೆಗಳಲ್ಲಿ ಮತ್ತೊಂದು ಗುಂಪಿನ ಪ್ರತಿಭಟನಾಕಾರರೂ ಕಲ್ಲುತೂರಾಟ ಇತ್ಯಾದಿ ಗಲಭೆಗಳನ್ನ ಎಸಗಿದ್ದಾರೆ.

ಈ ಹಿಂಸಾಚಾರಕ್ಕೆ ಕಿಡಿ ಹಚ್ಚಿದ್ದು ಸ್ವೀಡನ್ ದೇಶದ ಮಾಲ್ಮೋದಲ್ಲಿ ನಡೆದ ಇಸ್ಲಾಮ್ ವಿರೋಧಿ ಪ್ರತಿಭಟನೆ. ಈ ಪ್ರತಿಭಟನೆ ವೇಳೆ ಕುರಾನ್ ಗ್ರಂಥವನ್ನು ಜನರು ಕಾಲಿನಿಂದ ಒದ್ದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು. ಡೆನ್ಮಾರ್ಕ್ ದೇಶದ ಬಲಪಂಥೀಯ “ಹಾರ್ಡ್ ಲೈನ್” ಪಕ್ಷದ ನಾಯಕ ರಾಸ್ಮಸ್ ಪಲುಡನ್ ಅವರು ಈ ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆ ಇತ್ತು. ಇವರ ಉಪಸ್ಥಿತಿಯಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದೆಂದು ಮುನ್ನೆಚ್ಚರಿಕೆಯಾಗಿ ಸ್ವೀಡನ್ ಪೊಲೀಸರು ಇವರನ್ನ ಮಾಲ್ಮೋ ಗಡಿ ಬಳಿಯೇ ಬಂಧಿಸಿದರು. ನಂತರ ಇವರನ್ನು 2 ವರ್ಷ ಸ್ವೀಡನ್​ಗೆ ಆಗಮಿಸದಂತೆ ನಿರ್ಬಂಧ ಹೇರಿ ವಾಪಸ್ ಕಳುಹಿಸಲಾಯಿತು.

ಆದರೆ, ರಾಸ್ಮುಸ್ ಪಲುಡನ್ ವಾಪಸ್ ಹೋದ ನಂತರ ಇತ್ತ ಇಸ್ಲಾಮ್ ವಿರೋಧಿ ಪ್ರತಿಭಟನಾಕಾರರು ತಮ್ಮ ರ್ಯಾಲಿ ಮುಂದುವರಿಸಿದರು. ಕುರಾನ್ ಗ್ರಂಥಕ್ಕೆ ಅವಮಾನ ಮಾಡಿಕ ಕಾರಣಕ್ಕೆ ಪೊಲೀಸರು ಮೂವರನ್ನು ಬಂಧಿಸಿದರು.

ಅದಾದ ಕೆಲ ಗಂಟೆಗಳ ನಂತರ 300 ಜನ ಪ್ರತಿಭಟನಾಕಾರರು ಮಾಲ್ಮೋದ ಬೀದಿಗಳಲ್ಲಿ ಹಿಂಸಾಚಾರ, ಗಲಭೆ ನಡೆಸಿದರು. ಟೈರ್ ಸುಟ್ಟು, ಪೊಲೀಸರ ಮೇಲೆ ಕಲ್ಲು ತೂರಾಟ ಎಸಗಿದ್ದಾರೆ. ಬೆಳಗ್ಗೆ ನಡೆದ ಕುರಾನ್ ಸುಡುವ ಘಟನೆಗೂ ಈಗ ನಡೆಯುತ್ತಿರುವ ಪ್ರತಿಭಟನೆಗೂ ಸಂಬಂಧ ಇದೆ ಎಂದು ಸ್ವೀಡನ್ ಪೊಲೀಸರು ಶಂಕಿಸಿದ್ದಾರೆ.

ಅತ್ತ, ಸ್ವೀಡನ್​ಗೆ ಪ್ರವೇಶ ಮಾಡಲು ಸಾಧ್ಯವಾಗದೇ ವಾಪಸ್ ಹೋದ ಡೆನ್ಮಾರ್ಕ್ ರಾಜಕಾರಣಿ ರಾಸ್ಮುಸ್ ಪಲುಡನ್ ತಮ್ಮ ಫೇಸ್​ಬುಕ್​ನಲ್ಲಿ “ಎರಡು ವರ್ಷ ನಿಷೇಧ ಹೇರಿ ನನ್ನನ್ನು ವಾಪಸ್ ಕಳುಹಿಸಲಾಯಿತು. ಆದರೆ, ಅತ್ಯಾಚಾರಿಗಳು ಮತ್ತು ಕೊಲೆಗಡುಕರನ್ನು ಸ್ವಾಗತಿಸುತ್ತಾರೆ” ಎಂದು ವ್ಯಂಗ್ಯವಾಗಿ ಪೋಸ್ಟ್ ಹಾಕಿದ್ದಾರೆ.ರಾಸ್ಮಸ್ ಪಲುಡನ್ ಮುಸ್ಲಿಮ್ ವಿರೋಧಿ ಧೋರಣೆಯ ರಾಜಕಾರಣಿಯಾಗಿ ವಿವಾದಾತ್ಮಕ ವ್ಯಕ್ತಿ ಎನಿಸಿದ್ದಾಎರ. ಕಳೆದ ವರ್ಷ ಇವರು ಕುರಾನ್ ಗ್ರಂಥದಲ್ಲಿ ಹಂದಿ ಮಾಂಸ ಇಟ್ಟು ಬೆಂಕಿಯಿಂದ ಸುಟ್ಟಿದ್ದರು.

Comments are closed.