ಅಂತರಾಷ್ಟ್ರೀಯ

76 ವರ್ಷದ ವೃದ್ಧರೊಬ್ಬರು ತಮ್ಮ 71 ವರ್ಷದ ಗೆಳತಿಯೊಂದಿಗೆ ಪ್ರೀತಿಯ ಪ್ರಸ್ತಾಪ; ಇವರ ಮಧುರ ಪ್ರೇಮಕತೆಗೆ ಎಲ್ಲರೂ ಫಿದಾ….!

Pinterest LinkedIn Tumblr

ಪ್ರೀತಿ ಎಂಬುದು ಮಧುರ ಬಾಂಧವ್ಯ. ಪ್ರತಿಯೊಬ್ಬರೂ ಪ್ರೀತಿ ಬಯಸುತ್ತಾರೆ. ಪವಿತ್ರ ಪ್ರೀತಿ ದೇವರಿಗೆ ಸಮಾನ. ಪ್ರೀತಿಗೆ ವಯಸ್ಸಿನ ಹಂಗಿಲ್ಲ. ಯಾವಾಗ ಬೇಕಾದರೂ ಪ್ರೀತಿ ಟಿಸಿಲೊಡೆಯಬಹುದು. ಪ್ರತಿಯೊಬ್ಬರೂ ತಮ್ಮ ಬಾಳಿನಲ್ಲಿ ಸಂಗಾತಿಗಾಗಿ ಹಾತೊರೆಯುತ್ತಾರೆ. ಕಷ್ಟ ಸುಖಗಳನ್ನು ಹಂಚಿಕೊಳ್ಳಲು, ಕಷ್ಟದಲ್ಲಿದ್ದಾಗ ಬೆಂಬಲವಾಗಿ ನಿಲ್ಲಲು, ಸುಖದಲ್ಲಿ ಸಿಹಿಯನ್ನು ಹಂಚಿಕೊಳ್ಳಲು ಎಲ್ಲರಿಗೂ ಜೀವನ ಸಂಗಾತಿಯೊಬ್ಬರು ಬೇಕೇಬೇಕು. ಈ ಬಾಂಧವ್ಯವೇ ಪ್ರತಿಯೊಬ್ಬರಿಗೂ ಬಹುದೊಡ್ಡ ಶಕ್ತಿ.

https://www.instagram.com/p/CDjcdPyghXg/?utm_source=ig_web_copy_link

ಅದರಲ್ಲೂ ಜೀವನದ ಸಂಧ್ಯಾಕಾಲದಲ್ಲಿ ಎಲ್ಲರೂ ಹಿಡಿಪ್ರೀತಿಯನ್ನು ಬಯಸುತ್ತಾರೆ. ಬಹುಶಃ ಈ ಜೋಡಿಯೂ ಸಂಗಾತಿ ಇಲ್ಲದ ಕೊರಗಿನಲ್ಲಿದ್ದರು. ಆದರೆ, ಈಗ ಈ ಕೊರಗು ನೀಗಿದೆ. ಇಳಿ ವಯಸ್ಸಿನಲ್ಲಿ ಪರಸ್ಪರ ಪ್ರೀತಿ ತೋರಲು ಇವರಿಬ್ಬರು ಈಗ ಜೊತೆಯಾಗಿದ್ದಾರೆ. ಈ ಪ್ರೇಮಕತೆಯೇ ಅಪೂರ್ವವಾಗಿದೆ.

ಆ ವೃದ್ಧರಿಗೆ ವಯಸ್ಸು 76. ಸದ್ಯ ಆರೈಕೆ ಕೇಂದ್ರದಲ್ಲಿದ್ದಾರೆ. ಇವರು ಈಗ ತನಗೊಬ್ಬರು ಜೀವನ ಸಂಗಾತಿಯನ್ನು ಹುಡುಕಿಕೊಂಡಿದ್ದಾರೆ. ಈ ಸಂಗಾತಿಯ ವಯಸ್ಸು 71. ನ್ಯೂಯಾರ್ಕ್‌ನ ಬ್ರೂಕ್ಲಿಯಾನ್‌ನಲ್ಲಿರುವ ಆಶ್ರಯ ಕೇಂದ್ರದಲ್ಲಿರುವ ಜೆಫ್ರಿ ಮಿಲ್ಲರ್ ಮತ್ತು ಗ್ಲೋರಿಯಾ ಅಲೆಕ್ಸಿಸ್ ಈ ಅಪೂರ್ವ ಕತೆಯ ನಾಯಕ, ನಾಯಕಿ. ಇವರಿಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿದ್ದು, ನಿಶ್ಚಿತಾರ್ಥವೂ ನಡೆದು ಹೋಗಿದೆ.

ಸದ್ಯ ಈ ನಿಶ್ಚಿತಾರ್ಥದ ವಿಡಿಯೋವನ್ನು ಇನ್‌ಸ್ಟಾಗ್ರಾಂಗೆ ಅಪ್ಲೋಡ್ ಮಾಡಲಾಗಿದೆ. ಆಶ್ರಯಕೇಂದ್ರದ ಇತರ ವಾಸಿಗಳು, ಸಿಬ್ಬಂದಿಗಳ ಹರ್ಷೋದ್ಗಾರದ ನಡುವೆ ಜೆಫ್ರಿ ಮಿಲ್ಲರ್ ಗ್ಲೋರಿಯಾ ಅವರಿಗೆ ಉಂಗುರ ತೊಡಿಸಿದ್ದಾರೆ. ಈ ಖುಷಿಗೆ ಕೆಂಗುಲಾಬಿಗಳು, ಬಲೂನ್‌ಗಳು ಇನ್ನಷ್ಟು ಮೆರುಗು ತಂದಿದ್ದವು. ಈ ಇಬ್ಬರು ಒಬ್ಬರಿಗೊಬ್ಬರು ತುಂಬಾ ಹಚ್ಚಿಕೊಂಡಿದ್ದರು. ಇತ್ತೀಚೆಗೆ ಅಲೆಕ್ಸಿಸ್ ಆಸ್ಪತ್ರೆಗೆ ದಾಖಲಾಗಿದ್ದರಂತೆ. ಈ ವೇಳೆ, ಜೆಫ್ರಿ ಒಂಟಿತನದ ನೋವು ಅನುಭವಿಸಿದ್ದರಂತೆ. ಸದ್ಯ ಇವರ ಪ್ರೀತಿಯ ಕತೆ ಕೇಳಿ ಎಲ್ಲರೂ ಫಿದಾ ಆಗಿದ್ದು, ಇವರಿಬ್ಬರ ಪ್ರೀತಿಯ ಅಪೂರ್ವ ವಿಡಿಯೋ ಕೂಡಾ ವೈರಲ್ ಆಗುತ್ತಿದೆ. ಈ ವಿಡಿಯೋ ಕಂಡ ಎಲ್ಲರೂ ಈ ಇಬ್ಬರು ಹಿರಿಯರಿಗೆ ಶುಭಹಾರೈಸಿದ್ದಾರೆ.

Comments are closed.