ಅಂತರಾಷ್ಟ್ರೀಯ

ಚೀನಾದಲ್ಲಿ ಮತ್ತೊಂದು ವೈರಸ್‌ ಪತ್ತೆ, 7 ಸಾವು, 60 ಮಂದಿಗೆ ಸೋಂಕು!

Pinterest LinkedIn Tumblr

ವುಹಾನ್‌: ಕೊರೊನಾ ವೈರಸ್‌ನಿಂದಾಗಿ ಇದೀಗ ಇಡೀ ಜಗತ್ತೆ ಕೊರಗುತ್ತಿರುವಾಗ ಚೀನಾದಲ್ಲಿ ಮತ್ತೊಂದು ವೈರಸ್‌ನ ಆರ್ಭಟ ಆರಂಭವಾಗಿದ್ದು ಜನರನ್ನ ಭಯಭೀತಗೊಳಿಸಿದೆ. ಈ ಬಗ್ಗೆ ಚೀನಾದ ಗ್ಲೋಬಲ್‌ ಟೈಮ್ಸ್‌ ವರದಿ ಮಾಡಿದ್ದು, ಈ ವೈರಸ್‌ನಿಂದಾಗಿ ದೇಶದಲ್ಲಿ 7 ಮಂದಿ ಬಲಿಯಾಗಿದ್ದು, 60 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದೆ.

ಇನ್ನು ಈ ವೈರಸನ್ನ ಎಸ್‌ಎಫ್‌ಟಿಎಸ್‌ವಿ(ಸೀವಿಯರ್ ಫೀವರ್‌ ವಿಥ್‌ ಥ್ರೋಂಬೊ ಬೊಕ್ಯಾಟೋಪಿನಿಯಾ ಸಿಂಡ್ರೋಮ್‌ ಬುನಿವೈರಸ್‌) ಎಂದು ಗುರುತಿಸಲಾಗಿದ್ದು, ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ಆರಂಭದಲ್ಲಿ 37 ಮಂದಿಯಲ್ಲಿ ಇದರ ರೋಗ ಲಕ್ಷಣಗಳು ಕಂಡು ಬಂತು. ನಂತರ ಅನುಯಿ ಪ್ರಾಂತ್ಯದಲ್ಲಿ 23 ಮಂದಿಗೆ ಸೋಂಕು ತಗುಲಿದೆ ಎಂದು ಗ್ಲೋಬಲ್‌ ಟೈಮ್ಸ್ ವರದಿ ಮಾಡಿದೆ. ಈ ವೈರಸ್‌ ಕಚ್ಚುವ ಮೂಲಕ ಮನುಷ್ಯನ ದೇಹ ಪ್ರವೇಶಿಸುತ್ತದೆಯಂತೆ. ನಂತರ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ, ಈ ಹಿನ್ನೆಲೆ ಎಚ್ಚರದಿಂದ ಇರುವಂತೆ ಅಲ್ಲಿನ ದ್ಯಕೀಯ ಪರಿಣಿತರು ಮನವಿ ಮಾಡಿದ್ದಾರೆ.

ಮಹಿಳೆಗೆ ರೀತಿಯ ಲಕ್ಷಣಗಳಿತ್ತು!
ಇನ್ನು ವಾಂಗ್‌ ಎನ್ನುವ ಜಿಯಾಂಗ್ಸು ಪ್ರಾಂತ್ಯದ ಮಹಿಳೆಗೆ ಈ ವೈರಸ್‌ನ ಸೋಂಕು ತಗುಲಿದ್ದು. ಕೆಮ್ಮು ಹಾಗೂ ಜ್ವರದ ಲಕ್ಷಣಗಳು ಆರಂಭದಲ್ಲಿ ಕಂಡುಬಂದಿತ್ತಂತೆ. ಈ ಹಿನ್ನೆಲೆ ನಂಆ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರಂತೆ. ವೈದ್ಯರ ಹೇಳುವ ಪ್ರಕಾರ ಈ ವೈರಸ್‌ನ ಸೋಂಕಿನಿಂದಾಗಿ ಮಹಿಳೆಯ ದೇಹದಲ್ಲಿರುವ ಲ್ಯುಕೋಸೈಟ್, ರಕ್ತದ ಪ್ಲೇಟ್‌ಲೆಟ್ ಕುಸಿತ ಉಂಟಾಗಿತ್ತು ಎಂದು ತಿಳಿಸಿದ್ದಾರೆ.

ಚಿಕಿತ್ಸೆ ಬಳಿಕ ಅಂದರೆ ಒಂದು ತಿಂಗಳ ಚಿಕಿತ್ಸೆ ಬಳಿಕ ಮಹಿಳೆ ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಈ ಎಸ್‌ಎಫ್‌ಟಿಎಸ್ ವೈರಸ್ ಹೊಸ ವೈರಸ್ ಅಲ್ಲ.2011 ರಲ್ಲೇ ಇದು ಪತ್ತೆಯಾಗಿತ್ತು. ಇದು ಬುನ್ಯವೈರಸ್ ವರ್ಗಕ್ಕೆ ಸೇರಿದೆ ವೈರಸ್‌ ಎಂದು ಚೀನಾದ ಸಂಶೋಧಕರು ತಿಳಿಸಿದ್ದಾರೆ. ಸದ್ಯ ಈ ಎರಡು ಪ್ರಾಂತ್ಯಗಳಲ್ಲಿ ಒಟ್ಟು 7 ಮಂದಿ ಸಾವನಪ್ಪಿರುವುದು ವರದಿಯಾಗಿದೆ.

 

Comments are closed.