ಕರ್ನಾಟಕ

ಸಹಿ ಪೋರ್ಜರಿಯಿಂದ 86 ಲಕ್ಷ ಸಾಲ ಮಾಡಿದ್ದಲ್ಲದೆ ಲೈಂಗಿಕ ಕಿರುಕುಳ; ಯುವತಿಯ ದೂರು

Pinterest LinkedIn Tumblr

ಬೆಂಗಳೂರು: ಕೆಲಸ ಮಾಡುತ್ತಿರುವ ಕಂಪನಿಯ ಮಾಲೀಕ ಲೈಂಗಿಕ ಕಿರುಕುಳ ಕೊಡುತ್ತಿರುವುದಾಗಿ ಬೆಳ್ಳಂದೂರಿನ 26 ವರ್ಷದ ಯುವತಿ ವೈಟ್ ಫೀಲ್ಡ್ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾಳೆ.

ಆರೋಪಿ ಹನುಮಂತ ಕಲ್ಲೂರು ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹನುಮಂತ ಸ್ವಂತ ಕಂಪನಿ ಹೊಂದಿದ್ದು, 2019ರಲ್ಲಿ ಕೆಲಸ ಮಾಡಲು ಒಪ್ಪಿಕೊಂಡಿದ್ದೆ. ಕೆಲಸ ಮಾಡುತ್ತಿರುವಾಗ ನನ್ನ ಬಳಿ ಬಂದು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ.

ಅದಕ್ಕೆ ಒಪ್ಪದಿದ್ದಾಗ ಕೆಟ್ಟ ಪದಗಳಿಂದ ಬೈದು ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ. ಜತೆಗೆ ಬ್ಲ್ಯಾಕ್​ಮೇಲ್​ ಮಾಡಿ ಹಲ್ಲೆ ನಡೆಸಿದ್ದಾನೆ. ನಾನು ನೀಡಿದ್ದ ದಾಖಲೆ ದುರುಪಯೋಗಪಡಿಸಿಕೊಂಡು ನಕಲಿ ಸಹಿ ಮಾಡಿ 8 ವಿವಿಧ ಬ್ಯಾಂಕ್ ಗಳಿಂದ 86 ಲಕ್ಷ ರೂ. ಸಾಲ ಪಡೆದಿದ್ದು, ಪ್ರಶ್ನಿಸಿದ್ದಕ್ಕೆ ಪ್ರಾಣ ಬೆದರಿಕೆ ಹಾಕುತ್ತಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

 

Comments are closed.