ಅಂತರಾಷ್ಟ್ರೀಯ

ಕೊರೊನಾ ಕುರಿತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದೆ ಹೋದಲ್ಲಿ ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಕೈಜಾರಲಿದೆ: ವಿಶ್ವಸಂಸ್ಥೆ

Pinterest LinkedIn Tumblr


ಜಿನೇವಾ: ಹೆಚ್ಚುತ್ತಿರುವ ಕರೋನಾ ವೈರಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಹಿಂದಿನ ಪರಿಸ್ಥಿತಿಗೆ ಮರಳುವುದು ನಿಕಟ ಭವಿಷ್ಯದಲ್ಲಿ ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸ್ಪಷ್ಟಪಡಿಸಿದೆ. ಸರಳ ಭಾಷೆಯಲ್ಲಿ ಹೇಳುವುದಾದರೆ, ಕರೋನಾಗೆ ಮುಂಚಿನ ಜೀವನಕ್ಕೆ ಮರಳುವುದು ನಿಕಟ ಭವಿಷ್ಯದಲ್ಲಿ ಸ್ವಲ್ಪ ಕಷ್ಟಕರವಾಗಲಿದೆ ಮತ್ತು ‘ನ್ಯೂ ​​ನಾರ್ಮಲ್’ನಲ್ಲಿ ಬದುಕಬೇಕಾಗಲಿದೆ ಎಂದು ಸಂಘಟನೆ ಹೇಳಿದೆ.

ಕೊರೊನಾ ವೈರಸ್ ಪ್ರಕೋಪದಲ್ಲಿ ನಿರಂತರ ಏರಿಕೆಯಾಗುತ್ತಲೇ ಇದೆ ಎಂದು ಎಚ್ಚರಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ತೆಡ್ರೋಸ್ ಎಡನೋಮ್ ಘೆಬ್ರೆಯಸ್. ನಿಕಟ ಭವಿಷ್ಯದಲ್ಲಿ ಕೊರೊನಾ ಮುಂಚಿನ ಕಾಲಕ್ಕೆ ಮರಳುವ ಸಂಭವನೀಯತೆಗಳು ಕಡಿಮೆಯಾಗಿವೆ. ಒಂದು ವೇಳೆ ಕೊರೊನಾ ತಡೆಗಟ್ಟಲು ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದೆ ಹೋದಲ್ಲಿ ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಕೈಜಾರಲಿದೆ ಎಂದು ಅವರು ಹೇಳಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ವರ್ಚುವಲ್ ಬ್ರೀಫಿಂಗ್ ವೇಳೆ ಮಾತನಾಡಿರುವ ಸಂಘಟನೆಯ ಮಹಾನಿರ್ದೇಶಕರು, “ವಿಶ್ವದ ಅನೇಕ ದೇಶಗಳು ತಪ್ಪು ದಿಕ್ಕಿನಲ್ಲಿ ಸಾಗುತ್ತಿವೆ ಮತ್ತು ವೈರಸ್ ಜನರ ಅತಿ ದೊಡ್ಡ ಶತ್ರುವಾಗಿ ಮುಂದುವರೆದಿದೆ.” ಎಂದು ಹೇಳಿದ್ದಾರೆ. ಒಂದು ವೇಳೆ ಮೂಲಭೂತ ಅಂಶಗಳನ್ನು ಅನುಸರಿಸದೆ ಹೋದರೆ ಪರಿಸ್ಥಿತಿ ಕೆಟ್ಟ ಸ್ಥಿತಿಯಿಂದ ಅತಿ ಕೆಟ್ಟ ಸ್ಥಿತಿಗೆ ತಲುಪಲಿದೆ. ಇದುವರೆಗೆ ವಿಶ್ವಾದ್ಯಂತ ಒಟ್ಟು 13 ಲಕ್ಷಕ್ಕೂ ಅಧಿಕ ಪ್ರಕರಣಗಳು ಬೆಳಕಿಗೆ ಬಂದಿದ್ದು, ಕಳೆದ ಕೇವಲ ಐದು ದಿನಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿರುವುದು ಇಲ್ಲಿ ಉಲ್ಲೇಖನೀಯ.

Comments are closed.