ಅಂತರಾಷ್ಟ್ರೀಯ

ಪೂರ್ವ ಲಡಾಕ್ ನ ಗಲ್ವಾನ್ ಕಣಿವೆ ನಮಗೆ ಸೇರಿದ್ದು: ಸೈನಿಕರ ಮಧ್ಯೆ ನಡೆದ ಘರ್ಷಣೆ ಬಳಿಕ ಚೀನಾ ವಾದ

Pinterest LinkedIn Tumblr

ಬೀಜಿಂಗ್: ಪೂರ್ವ ಲಡಾಕ್ ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ-ಚೀನಾ ಸೈನಿಕರ ಮಧ್ಯೆ ನಡೆದ ಘರ್ಷಣೆ, ಅದರಲ್ಲಿ ಅನೇಕ ಯೋಧರ ಬಲಿದಾನದ ಬಗ್ಗೆ ಚೀನಾ ಪ್ರತಿಕ್ರಿಯೆ ನೀಡಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಚಿವಾಲಯ, ಎರಡೂ ದೇಶಗಳ ನಡುವೆ ಗಡಿ ವಿವಾದದ ಬಗ್ಗೆ ಶಾಂತಿ ಮಾತುಕತೆ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಬೇಕಾದರೆ ಭಾರತೀಯ ಸೈನಿಕರು ಗಡಿ ಉಲ್ಲಂಘಿಸಿ ಬಂದು ಪ್ರಚೋದನಾಕಾರಿ ಚಟುವಟಿಕೆಗಳನ್ನು ನಡೆಸುವುದನ್ನು ಕಟ್ಟುನಿಟ್ಟಾಗಿ ನಿಲ್ಲಿಸಲೇಬೇಕು, ನಂತರವಷ್ಟೇ ಶಾಂತಿ ಮಾತುಕತೆಗೆ ಬನ್ನಿ, ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳೋಣ ಎಂದು ಹೇಳಿದೆ.

ಗಲ್ವಾನ್ ಕಣಿವೆಯ ಸೌರ್ವಭೌಮತ್ವ ನಿಯಂತ್ರಣ ಯಾವತ್ತಿಗೂ ಚೀನಾಕ್ಕೆ ಸೇರಿದ್ದು. ಗಡಿ-ಸಂಬಂಧಿತ ವಿಷಯಗಳ ಬಗ್ಗೆ ಮಾಡಿಕೊಂಡಿರುವ ನಿಯಮಾವಳಿಗಳನ್ನು ಭಾರತೀಯ ಸೇನೆ ಉಲ್ಲಂಘಿಸಿದ್ದಲ್ಲದೆ, ಕಮಾಂಡರ್ ಮಟ್ಟದ ಮಾತುಕತೆಯ ಒಮ್ಮತವನ್ನು ಸಹ ಉಲ್ಲಂಘಿಸಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯ ವಕ್ತಾರ ಜ್ವೌ ಲಿಜಿಯಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾರತದೊಂದಿಗೆ ಚೀನಾ ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಮಾತುಕತೆ ನಡೆಸುತ್ತಿದೆ. ನಿನ್ನೆ ನಡೆದ ಘರ್ಷಣೆ ಲಡಾಕ್ ನ ಗಡಿ ವಾಸ್ತವ ರೇಖೆಯ ಚೀನಾದ ಭಾಗದಲ್ಲಿ ಆಗಿದ್ದು ಇದಕ್ಕೆ ಚೀನಾವನ್ನು ಹೊಣೆಯಾಗಿಸುವುದಾಗಲಿ, ಆರೋಪಿಸುವುದಾಗಲಿ ಮಾಡಬಾರದು. ನಾವು ಯಾವತ್ತಿಗೂ ಇಂತಹ ಘರ್ಷಣೆ ನೋಡಲು ಬಯಸುವುದಿಲ್ಲ ಎಂದು ಚೀನಾ ಹೇಳಿದೆ.

Comments are closed.