ಅಂತರಾಷ್ಟ್ರೀಯ

ಇಂಡಿಯಾದಲ್ಲಿ ಕೊರೊನಾ ಹರುಡುತ್ತಿರುವ ಪ್ರವೃತ್ತಿಯನ್ನು ಗಮನಿಸಿದರೆ ಮುಂದೆ ಸ್ಫೋಟಗೊಳ್ಳಬಹುದು: ವಿಶ್ವಸಂಸ್ಥೆ

Pinterest LinkedIn Tumblr


ವಿಶ್ವಸಂಸ್ಥೆ: ವಿಶ್ವದಲ್ಲಿ ಕೊರೊನಾ ವೈರಸ್‌ ಹರುಡುತ್ತಿರುವ ಪ್ರವೃತ್ತಿಯನ್ನು ಗಮನಿಸಿದರೆ, ಈ ಸೋಂಕು ಭಾರತದಲ್ಲಿ ಸ್ಫೋಟಗೊಳ್ಳುವ ಬದಲು ಕುದಿಯುತ್ತಿದೆ. ಮುಂದೆ ಯಾವ ಸಂದರ್ಭದಲ್ಲಾದರೂ ಸ್ಪೋಟಗೊಳ್ಳಬಹುದು ಎಂದು ವಿಶ್ವಸಂಸ್ಥೆ ಆರೋಗ್ಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಇಟಲಿ, ಸ್ಪೇನ್‌, ಜರ್ಮನಿ, ಬ್ರಿಟನ್‌ನಲ್ಲಿ ಲಾಕ್‌ಡೌನ್‌ ಜಾರಿಗೊಳಿಸಿದ ಒಂದೆರಡು ವಾರಗಳಲ್ಲೇ ದೇಶವ್ಯಾಪಿ ಸೋಂಕು ಸ್ಪೋಟಗೊಂಡಿತ್ತು. ಆದರೆ, ಭಾರತದಲ್ಲಿ ಲಾಕ್‌ಡೌನ್‌ ಜಾರಿಯಾಗಿ 90 ದಿನಗಳಾಗುತ್ತ ಬರುತ್ತಿವೆ. ದೇಶದಲ್ಲಿ ಇಂದಿಗೂ ಸೋಂಕು ಹರಡುವಿಕೆ ನಿಧಾನಗತಿಯಲ್ಲಿದೆ.

ವಿಶ್ವಸಂಸ್ಥೆ ಆರೋಗ್ಯ ತಜ್ಞ ಮೈಕೆಲ್ ರಯಾನ್ ಅವರು ಹೇಳುವ ಪ್ರಕಾರ, ಪ್ರಸ್ತುತ ಭಾರತದಲ್ಲಿ ಕರೋನವೈರಸ್ ಪ್ರಕರಣಗಳು ದ್ವಿಗುಣಗೊಳ್ಳಲು ಸುಮಾರು ಮೂರು ವಾರಗಳ ಸಮಯ ಹಿಡಿಯುತ್ತಿದೆ. ಅಂದರೆ, ಇಂದಿಗೂ ದೇಶದಲ್ಲಿ ಸೋಂಕು ಹರಡುವಿಕೆಯ ಮಟ್ಟ ಗರಿಷ್ಠ ಹಂತ ತಲುಪಿಲ್ಲ. ಆದರೆ, ದೇಶದಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗುತ್ತಿದೆ. ಇದರಿಂದಾಗಿ ಮುಂದೆ ಅತಿ ದೊಡ್ಡ ಅಪಾಯ ಕಾದಿದೆ ಎಂದು ಎಚ್ಚರಿಸಿದ್ದಾರೆ.

ಭಾರತದಲ್ಲಿ ಸೋಂಕು ಹರಡುವಿಕೆ ಈಗಷ್ಟೇ ಹಿಚ್ಚುತ್ತಿದೆ , ಇನ್ನೂ ದ್ವಿಗುಣಗೊಳ್ಳು ಪ್ರಮಾಣದಲ್ಲಿಲ್ಲ. ಅಲ್ಲದೆ ದೇಶದ ವಿವಿಧ ಭಾಗಗಳಲ್ಲಿ ಸೋಂಕು ಹರಡುವಿಕೆಯ ಮಟ್ಟ ಭಿನ್ನವಾಗಿದೆ.

ಭಾರತವಷ್ಟೇ ಅಲ್ಲದೆ, ದಕ್ಷಿಣ ಏಷ್ಯಾ ರಾಷ್ಟ್ರಗಳಾದ ಬಾಂಗ್ಲಾದೇಶ, ಪಾಕಿಸ್ತಾನದಲ್ಲೂ ಜನಸಂದಣಿ ಹೆಚ್ಚಾಗಿದೆ. ಇಲ್ಲಿಯೂ ಕೂಡ ಸೋಂಕು ಸ್ಫೋಟಗೊಂಡಿಲ್ಲ. ಆದರೆ, ಮುಂದೆ ಸ್ಫೋಟಗೊಳ್ಳು ಸಾಧ್ಯತೆ ಇದ್ದೇ ಇದೆ. ಎಂದು ರಿಯಾನ್ ಶುಕ್ರವಾರ ಜಿನೀವಾದಲ್ಲಿ ಹೇಳಿದರು.

ಭಾರತದಲ್ಲಿ ಕೈಗೊಂಡ ಕಠಿಣ ಲಾಕ್‌ಡೌನ್‌ನಂತಹ ಕ್ರಮಗಳು ಸೋಂಕು ಪ್ರಸರಣವನ್ನು ನಿಧಾನಗೊಳಿಸುವಲ್ಲಿ ಪರಿಣಾಮಕಾರಿಯಾಗಿತ್ತು. ಆದರೆ, ಇತ್ತೀಚೆಗೆ ಲಾಕ್‌ಡೌನ್‌ ಸಡಿಲಗೊಳೀಸಲಾಗುತ್ತಿದೆ. ಹೀಗಾಗಿ ಪ್ರಕರಣಗಳು ಹೆಚ್ಚಾಗುವ ಅಪಾಯವಿದೆ. ಭಾರತದಂತಹ ದಟ್ಟ ಜನಸಂದಣಿ ಇರುವ ದೇಶದಲ್ಲಿ ಲಾಕ್‌ಡೌನ್‌ ಸಡಿಲವಾದೊಡನೆ ಜನರು ಮತ್ತೆ ಚಲಿಸಲು ಪ್ರಾರಂಭಿಸಿದ್ದಾರೆ. ಇದರಿಂದ ಸೋಂಕು ಮತ್ತೆ ಪುಟಿಯುವ ಅಪಾಯವಿದೆ ” ಎಂದು ರಿಯಾನ್ ಎಚ್ಚರಿಗೆ ನೀಡಿದ್ದಾರೆ.

ಕಾರ್ಮಿಕರಿಗೆ ಕೆಲಸಕ್ಕೆ ಹೋಗದೆ ದುಡಿಮೆ ಇಲ್ಲ:
ಭಾರತದಲ್ಲಿ ಹೆಚ್ಚಿನ ಪ್ರಮಾಣದ ವಲಸೆ ಕಾರ್ಮಿಕರಿದ್ದಾರೆ. ನಗರ ಪ್ರದೇಶದಲ್ಲಿ ವಿಪರೀತ ಜನಸಂದಣಿ ಇದೆ. ಕಾರ್ಮಿಕರಿಗೆ ಪ್ರತಿದಿನ ಕೆಲಸಕ್ಕೆ ಹೋಗುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಹೀಗೆ ಭಾರತದಲ್ಲಿ ಲಾಕ್‌ಡೌನ್‌ ಮುಂದುವರಿಸಲು ಹಲವಾರು ನಿರ್ದಿಷ್ಟ ಸಮಸ್ಯೆಗಳಿವೆ ಎಂದು ಅವರು ಹೇಳಿದರು.

ಇಟಲಿ ಹಿಂದಿಕ್ಕಿದ ಭಾರತ:
ಭಾರತವು ಕೊರೊನಾ ಸೋಂಕಿನಲ್ಲಿ ಇಟಲಿಯನ್ನು ಹಿಂದಿಕ್ಕಿ 6ನೇ ಸ್ಥಾನ್ಕೆ ಜಿಗಿದಿದೆ. ಭಾರತವು ದಾಖಲೆಯ ಏಕದಿನ 9,887 ಕೊರೊನಾವೈರಸ್ ಪ್ರಕರಣಗಳು ಮತ್ತು 294 ಸಾವುಗಳು ಕಂಡಿದ್ದು, ರಾಷ್ಟ್ರವ್ಯಾಪಿ ಸೋಂಕನ್ನು 2,36,657 ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 6,642 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಭಾರತದಲ್ಲಿ ಮೊದಲು ಬಾರಿಗೆ ಮಾರ್ಚ್ 25 ಲಾಕ್‌ಡೌನ್‌ ಹೇರಲಾಯಿತು. ನಂತರ 21 ದಿನಗಳವರೆಗೆ ವಿಸ್ತರಿಸಲಾಯಿತು, ಆದರೆ ಎರಡನೇ ಹಂತದ ನಿರ್ಬಂಧಗಳು ಏಪ್ರಿಲ್ 15 ರಿಂದ ಪ್ರಾರಂಭವಾಗಿ ಮೇ 3 ರವರೆಗೆ 19 ದಿನಗಳವರೆಗೆ ವಿಸ್ತರಿಸಲ್ಪಟ್ಟವು. ಲಾಕ್‌ಡೌನ್‌ನ ಮೂರನೇ ಹಂತವು 14 ದಿನಗಳವರೆಗೆ ಜಾರಿಯಲ್ಲಿತ್ತು ಮತ್ತು ಮೇ 17ಕ್ಕೆ ಕೊನೆಗೊಂಡಿತು. ನಾಲ್ಕನೇ ಹಂತವು ಮೇ 31 ರಂದು ಕೊನೆಗೊಂಡಿತು. ಕಂಟೈನ್‌ಮೆಂಟ್ ವಲಯಗಳಲ್ಲಿ ಜೂನ್ 30 ರವರೆಗೆ ಲಾಕ್‌ಡೌನ್‌ ಮುಂದುವರಿಯಲಿದೆ. ಕೇಂದ್ರ ಗೃಹ ಸಚಿವಾಲಯದ ಹೊಸ ಮಾರ್ಗಸೂಚಿಗಳಲ್ಲಿ ಜೂನ್ 8 ರಿಂದ ಹಂತಹಂತವಾಗಿ ಸಡಿಲಗೊಳಿಸಲಿದೆ.

Comments are closed.