ಅಂತರಾಷ್ಟ್ರೀಯ

ಮತ್ತೆ ಕಾಣಿಸಿಕೊಂಡ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್

Pinterest LinkedIn Tumblr


ಪ್ಯಾಂಗ್ಯಾಂಗ್: ಹೈಡ್ ಆ್ಯಂಡ್ ಸೀಕ್ ಆಟ ಆಡುತ್ತಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಇದೀಗ ಮತ್ತೆ ಬಹಿರಂಗವಾಗಿ ಕಾಣಿಸಿಕೊಂಡಿದ್ದಾನೆ.

ಕಳೆದ ಬಾರಿ ಆಹಾರ ಸಂಸ್ಕರಣಾ ಘಟಕದ ಉದ್ಘಾಟನೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದ ಕಿಮ್ ಜಾಂಗ್ ಉನ್, ಮತ್ತೆ ಅದೃಶ್ಯನಾಗಿದ್ದ. ಇದೀಗ ಮತ್ತೆ ಬಹಿರಂಗವಾಗಿ ಕಾಣಿಸಿಕೊಂಡಿರುವ ಆತ, ಪರಮಣು ಸಭೆಯ ನೇತೃತ್ವವಹಿಸಿದ್ದಾನೆ.

ಹೌದು, ಉತ್ತರ ಕೊರಿಯಾದ ವರ್ಕರ್ಸ್ ಪಾರ್ಟಿ ಆಯೋಜಿಸಿದ್ದ ಪರಮಾಣು ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಕಿಮ್ ಜಾಂಗ್ ಉನ್, ದೇಶದ ಸೈನ್ಯ ಬಲವನ್ನು ಮತ್ತಷ್ಟು ಹೆಚ್ಚಿಸುವ ಕುರಿತು ಮಾತನಾಡಿದ್ದಾನೆ ಎನ್ನಲಾಗಿದೆ.

ಅಮೆರಿಕದೊಂದಿಗೆ ಅಣ್ವಸ್ತ್ರ ನಿಶಸ್ತ್ರೀಕರಣ ಒಪ್ಪಂದ ಜಾರಿಯಲ್ಲಿರುವುದರಿಂದ ದೇಶದ ಸೈನ್ಯ ಬಲವನ್ನು ಮತ್ತಷ್ಟು ಹೆಚ್ಚಿಸಿ ಗಡಿ ಸುರಕ್ಷತೆಯನ್ನು ಖಾತ್ರಿಗೊಳಿಸಬೇಕಿದೆ ಎಂದು ಕಿಮ್ ಜಾಂಗ್ ಉನ್ ಅಭಿಪ್ರಾಯಪಟ್ಟಿದ್ದಾನೆ.

ಇನ್ನು ಕಿಮ್ ಜಾಂಗ್ ಉನ್ ಸೇರಿದಂತೆ ಪರಮಾಣು ಸಭೆಯಲ್ಲಿ ಭಾಗವಹಿಸಿದ್ದ ಯಾವ ನಾಯಕರೂ ಮಾಸ್ಕ್ ಧರಿಸದಿರುವುದು ಕೂಡ ಗಮನ ಸೆಳೆದಿದೆ. ಉತ್ತರ ಕೊರಿಯಾದಲ್ಲಿ ಇದುವರೆಗೂ ಒಂದೇ ಒಂದು ಕೊರೊನಾ ವೈರಸ್ ಪ್ರಕರಣ ದಾಖಲಾಗದಿರುವುದು ವಿಶೇಷ.

ಆದರೆ ಈ ಕುರಿತು ಅನುಮಾನ ವ್ಯಕ್ತಪಡಿಸಿರುವ ದಕ್ಷಿಣ ಕೊರಿಯಾ, ಬಹುಶ: ಉತ್ತರ ಕೊರಿಯಾ ತನ್ನ ಕೊರೊನಾ ವೈರಸ್ ಪ್ರಕರಣಗಳನ್ನು ಮುಚ್ಚಿಟ್ಟಿದೆ ಎಂದು ಅಂದಾಜಿಸಿದೆ.

ಅದೆನೆ ಇರಲಿ, ಪರಮಾಣು ಸಭೆಯಲ್ಲಿ ಭಾಗವಹಿಸುವ ಮೂಲಕ ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಕಿಮ್ ಜಾಂಗ್ ಉನ್, ಮತ್ತೆ ಅದೆಷ್ಟು ದಿನಗಳ ಕಾಲ ಅದೃಶ್ಯನಾಗಲಿದ್ದಾನೆ ಎಂಬುದು ಕುತೂಹಲ ಮೂಡಿಸಿದೆ.

Comments are closed.