ಅಂತರಾಷ್ಟ್ರೀಯ

ಹಿಂದೂ ಅರ್ಚಕರಿಂದ ಅಮೆರಿಕದ ಶ್ವೇತಭವನದಲ್ಲಿ ವೇದ ಮಂತ್ರಗಳ ಪಠಣ!

Pinterest LinkedIn Tumblr


ವಾಷಿಂಗ್ಟನ್: ವಿಶ್ವಗುರುವಾಗುವತ್ತ ಹೆಜ್ಜೆ ಇಟ್ಟಿರುವ ಭಾರತಕ್ಕೆ ಸನಾತನ ಸಂಸ್ಕೃತಿ ಎಂಬ ಶಕ್ತಿಯ ಬೆಂಬಲವಿದೆ. ಭಾರತ ವಿಶ್ವದಾದ್ಯಂತ ತನ್ನ ಪ್ರಭಾವ ಬೀರಲು ತನ್ನ ಮಹಾನ್ ಸಂಸ್ಕೃತಿಯ ಮೊರೆ ಹೋಗಿರುವುದು ವಿಶೇಷ.

ಇದೇ ಕಾರಣಕ್ಕೆ ಪ್ರತಿ ಕಾಲಘಟ್ಟದಲ್ಲೂ ಭಾರತ ವಿಶ್ವಕ್ಕೆ ಮಾರ್ಗದರ್ಶನ ಮಾಡಲು ಸಾಧ್ಯವಾಗಿದೆ. ಭಾರತದ ಈ ನಾಯಕತ್ವ 21ನೇ ಶತಮಾನದಲ್ಲೂ ಮುಂದುವರೆದಿದ್ದು, ಸನಾತನ ಸಂಸ್ಕೃತಿ ತನ್ನ ಪ್ರಭಾವವನ್ನು ಜಗತ್ತಿನ ಮೂಲೆ ಮೂಲೆಗೂ ಜ್ಞಾನವನ್ನು ಉದ್ದೀಪನಗೊಳಿಸುವ ಮೂಲಕ ಬೀರುತ್ತಿದೆ.

ಇದಕ್ಕೆ ಪುಷ್ಠಿ ಎಂಬಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಅಧಿಕೃತ ಕಚೇರಿ ಶ್ವೇತಭವನಕ್ಕೆ ಹಿಂದೂ ಅರ್ಚಕರೊಬ್ಬರಿಗೆ ಆಹ್ವಾನ ನೀಡಿದ್ದಾರೆ. ಹಿರಿಯ ಅರ್ಚಕರಿಂದ ಮೊಳಗಿದ ವೇದ ಮಂತ್ರಘೋಷಗಳಿಂದ ಇಡೀ ಶ್ವೇತಭವನ ಪುನೀತವಾಗಿದೆ.

ಕೊರೊನಾ ವೈರಸ್ ಎಂಬ ಮಾರಕ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಪ್ರತಿಯೊಬ್ಬರ ಆರೋಗ್ಯ ಸುಧಾರಣೆಗೆ ಪ್ರಾರ್ಥಿಸಿ, ಶ್ವೇತಭವನದಲ್ಲಿ ‘ಶಾಂತಿ ಪಥ’ ವೈದಿಕ ಮಂತ್ರಘೋಷಗಳನ್ನು ಮೊಳಗಿಸಲಾಯಿತು.

ರಾಷ್ಟ್ರೀಯ ಪ್ರಾರ್ಥನಾ ಸೇವೆ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ, ಶ್ವೇತಭವನದ ರೋಸ್ ಗಾರ್ಡನ್‌ನಲ್ಲಿ ಹಿರಿಯ ಹಿಂದೂ ಅರ್ಚಕರು ವೇದ ಮಂತ್ರಗಳನ್ನು ಪಠಿಸಿದರು.

ನ್ಯೂಜೆರ್ಸಿಯ ಸ್ವಾಮಿನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕ ಹರೀಶ್ ಬ್ರಹ್ಮಭಟ್ ಅವರು ಟ್ರಂಪ್ ಆಹ್ವಾನದ ಮೇರೆಗೆ ಶ್ವೇತಭವನದ ರೋಸ್ ಗಾರ್ಡನ್‌ನಲ್ಲಿ ವೇದ ಮಂತ್ರಗಳನ್ನು ಪಠಿಸಿದರು.

ಅರ್ಚಕ ಹರೀಶ್ ಬ್ರಹ್ಮಭಟ್ ಸಂಸ್ಕೃತದಲ್ಲಿ ಪಠಿಸಿದ ಯಜುರ್ವೇದದ ‘ಶಾಂತಿ ಫಥ’ ಶ್ಲೋಕದ ಅರ್ಥವನ್ನು ಬಳಿಕ ಇಂಗ್ಲಿಷ್‌ನಲ್ಲಿ ತರ್ಜುಮೆ ಮಾಡಿ ಸಭೀಕರಿಗೆ ಹೇಳಲಾಯಿತು.

ಸಂಸ್ಕೃತ ಮಂತ್ರ ಪಠಿಸಿದ ಅರ್ಚಕ ಹರೀಶ್ ಬ್ರಹ್ಮಭಟ್ ಅವರಿಗೆ ಧನ್ಯವಾದ ಅರ್ಪಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿಶ್ವ ಶಾಂತಿಯೊಂದೇ ಮಾನವ ಜನಾಂಗದ ಅಭ್ಯುದಯಕ್ಕೆ ಇರುವ ಏಕೈಕ ಮರ್ಗ ಎಂದು ಅಭಿಪ್ರಾಯಪಟ್ಟರು. ಈ ವೇಳೆ ಟ್ರಂಪ್ ಪತ್ನಿ ಮೆಲನಿಯಾ ಟ್ರಂಪ್ ಕೂಡ ಈ ವೇಳೆ ಹಾಜರಿದ್ದರು.

ಇನ್ನು ರಾಷ್ಟ್ರೀಯ ಪ್ರಾರ್ಥನಾ ಸೇವೆ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿವಿಧ ಧರ್ಮಗಳ ಧಾರ್ಮಿಕ ಮುಖಂಡರೂ ಭಾಗವಹಿಸಿದ್ದು ವಿಶೇಷವಾಗಿತ್ತು.

Comments are closed.