ಅಂತರಾಷ್ಟ್ರೀಯ

ಕೊರೋನಾಗೆ ಅಮೆರಿಕದಲ್ಲಿ 60 ಸಾವಿರ ಮಂದಿಯ ಸಾವು; ವಿಶ್ವಾದ್ಯಂತ 2.18 ಲಕ್ಷ ಮಂದಿ ಬಲಿ

Pinterest LinkedIn Tumblr


ವಾಷಿಂಗ್ಟನ್ (ಏ.29)​: ಮಾರಕ ವೈರಸ್​ ಕೊರೋನಾಗೆ ಅಮೆರಿಕದಲ್ಲಿ ಸಾಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅಮೆರಿಕದಲ್ಲಿ ಈಗಾಗಲೇ ಸಾವಿನ ಸಂಖ್ಯೆ 60 ಸಾವಿರದ ಗಡಿ ತಲುಪಿದೆ. ವಿಶ್ವಾದ್ಯಂತ 2.18 ಲಕ್ಷ ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ.

ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಕೊರೋನಾ ನಿಯಂತ್ರಣ ಸಾಧ್ತವಾಗುತ್ತಿಲ್ಲ. ಪ್ರತಿನಿತ್ಯ ಅಮೆರಿಕದಲ್ಲಿ ಸರಾಸರಿ 1.5-2 ಸಾವಿರ ಮಂದಿ ಮೃತಪಡುತ್ತಿದ್ದಾರೆ. ನಿನ್ನೆ ಒಂದೇ ದಿನ 2,217 ಜನರು ಮೃತಪಟ್ಟಿದ್ದಾರೆ. ಹೀಗಾಗಿ ಅಮೆರಿಕದಲ್ಲಿ ಸಾವಿನ ಸಂಖ್ಯೆ 59,266ಕ್ಕೆ ಏರಿಕೆ ಆಗಿದೆ. 10.35 ಲಕ್ಷ ಮಂದಿಯಲ್ಲಿ ಸೋಂಕಿರುವುದು ದೃಢಪಟ್ಟಿದೆ.

ಇಡೀ ವಿಶ್ವದಲ್ಲಿ 31.41 ಲಕ್ಷ ಜನರಿಗೆ ಕೊರೋನಾ ಅಂಟಿದೆ. ಈ ಮಹಾಮಾರಿ ವೈರಸ್​ನಿಂದ 2.18 ಲಕ್ಷ ಮಂದಿ ಅಸುನೀಗಿದ್ದಾರೆ. ಈ ವೈರಸ್​ನಿಂದ ಗುಣಮುಖರಾದವರ ಸಂಖ್ಯೆ 9.54 ಲಕ್ಷ ಮಂದಿ.

ಅತಿ ಹೆಚ್ಚು ಸೋಂಕಿತರಿರುವ ರಾಷ್ಟ್ರಗಳ ಪೈಕಿ ಸ್ಪೇನ್​ ಎರಡನೇ ಸ್ಥಾನದಲ್ಲಿದೆ. ಸ್ಪೇನ್​ನಲ್ಲಿ ಸೋಂಕಿತರ ಸಂಖ್ಯೆ 2.36 ಲಕ್ಷದ ಗಡಿ ದಾಟಿದೆ. 23,822 ಸಾವಿರ ಮಂದಿ ಮೃತಪಟ್ಟಿದ್ದಾರೆ. ಇಟಲಿಯಲ್ಲಿ 2.02 ಲಕ್ಷ ಜನರಿಗೆ ಸೋಂಕು ಅಂಟಿದ್ದು, ಸಾವಿನ ಸಂಖ್ಯೆ 27 ಸಾವಿರದ ಗಡಿ ತಲುಪಿದೆ. ಈ ಮೊದಲ ವಾರಗಳಿಗೆ ಹೋಲಿಸಿದರೆ ಇಟಲಿಯಲ್ಲಿ ಕೊರೋನಾ ಕೊಂಚ ನಿಯಂತ್ರಣಕ್ಕೆ ಬಂದಿದೆ ಎನ್ನಬಹುದು.

ಫ್ರಾನ್ಸ್​, ಜರ್ಮನಿ, ಇಂಗ್ಲೆಂಡ್​ನಲ್ಲೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ. ಫ್ರಾನ್ಸ್​ನಲ್ಲಿ 1.65 ಲಕ್ಷ ಮಂದಿಗೆ ಕೊರೋನಾ ದೃಢಪಟ್ಟಿದೆ. 23,660 ಸಾವಿರ ಮಂದಿ ಮೃತಪಟ್ಟಿದ್ದಾರೆ. ಜರ್ಮನಿಯಲ್ಲಿ 1.59 ಲಕ್ಷ ಜನರಿಗೆ ಕೊರೋನಾ ಸೋಂಕಿದೆ. 6,314 ಜನರು ಮೃತಪಟ್ಟಿದ್ದಾರೆ.

Comments are closed.