ರಾಷ್ಟ್ರೀಯ

ಕೊರೊನಾ ಸೋಂಕು ಅಬ್ಬರ ತಗ್ಗಿಸಿದ ತಾಪಮಾನ ಏರಿಕೆ

Pinterest LinkedIn Tumblr


ಪುಣೆ: ಬಿಸಿಲಿನ ಬೇಗೆ ಹೆಚ್ಚಿರುವ ದೇಶಗಳಲ್ಲಿ ಕೊರೊನಾ ಅಬ್ಬರ ತಗ್ಗುತ್ತದೆ ಎನ್ನುವ ವಿಜ್ಞಾನಿಗಳ ಅಂದಾಜು ಈಗ ನಿಜವಾಗಿದೆ. ಭಾರತದಲ್ಲಿ ತಾಪಮಾನ ಏರಿಕೆಯಿಂದಾಗಿ ಕೊರೊನಾ ವೈರಾಣು ಹರಡುವಿಕೆ ಸಾಧ್ಯತೆ ಕ್ಷೀಣಿಸಿದೆ. ಅದರಲ್ಲೂಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಬಿಸಿಲಿನ ಹೆಚ್ಚಳ ಹಾಗೂ ಕೊರೊನಾ ಕ್ಷೀಣತೆಗೆ 85% ಸಾಮ್ಯತೆ ಇರುವ ನಿದರ್ಶನ ಹೊರ ಹೊಮ್ಮಿರುವುದು ಸಂಶೋಧನೆಯಿಂದ ಸಾಬೀತಾಗಿದೆ.

ನಾಗಪುರದಲ್ಲಿರುವ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್‌ ಸಂಶೋಧನಾ ಸಂಸ್ಥೆ (ನೀರಿ) ನಡೆಸಿರುವ ಸಂಶೋಧನೆಯಲ್ಲಿವಿಶ್ವ ಆರೋಗ್ಯ ಸಂಸ್ಥೆ ನೀಡುತ್ತಿರುವ ಕೊರೊನಾ ಸೋಂಕಿನ ಪ್ರಕರಣಗಳ ದಾಖಲೆ ಮತ್ತು ಭಾರತೀಯ ಹವಾಮಾನ ಇಲಾಖೆಯ ವಿವಿಧ ರಾಜ್ಯಗಳ ತಾಪಮಾನ ದಾಖಲೆಗಳನ್ನು ಹೋಲಿಕೆಯೊಂದಿಗೆ ಸೂಕ್ಷತ್ರ್ಮ ಅಧ್ಯಯನ ಮಾಡಿ ಈ ಕುತೂಹಲಕಾರಿ ಸಂಗತಿಯನ್ನು ಪತ್ತೆಹೆಚ್ಚಲಾಗಿದೆ.

ಅದರಂತೆ ತಾಪಮಾನಕ್ಕೂ ಕೊರೊನಾ ಸೋಂಕಿಗೂ ಶೇ.85ರಷ್ಟು ನಂಟಿರುವುದು ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿನಡೆದ ಇತ್ತೀಚಿನ ಬೆಳವಣಿಗೆಗಳಿಂದ ದೃಢಪಟ್ಟಿದೆ. ಎರಡೂ ರಾಜ್ಯಗಳಲ್ಲಿಸರಾಸರಿ ತಾಪಮಾನ 25 ಡಿಗ್ರಿ ಸೆಲ್ಸಿಯಸ್‌ ದಾಟಿದಾಗೆಲ್ಲಕೊರೊನಾ ಸೋಂಕು ಪಸರಿಸುವ ಪ್ರಮಾಣದಲ್ಲಿಗಣನೀಯ ಕುಸಿತ ಕಂಡುಬಂದಿದೆ ಎಂದು ಸಂಶೋಧಕರು ಪ್ರತಿಪಾದಿಸಿದ್ದಾರೆ.

ಮಳೆಗಾಲವಾಗಿದ್ದರೆ ಸೋಂಕು ನಿಯಂತ್ರಣವನ್ನು ದೇಶದಲ್ಲಿಈ ಮಟ್ಟಿಗೆ ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಅಂತರವೂ ಪ್ರಮುಖವಾಗಿದೆ: ನೀರಿ ಮುಖ್ಯಸ್ಥ ಹೇಮಂತ್‌ ಭೆರ್ವಾನಿ ಅವರ ಅಭಿಪ್ರಾಯದಂತೆ ತಾಪಮಾನ ಮತ್ತು ಕೊರೊನಾ ಕ್ಷೀಣಿಸುವಿಕೆ ಬಗ್ಗೆ ಮಾತ್ರ ಗಮನಹರಿಸುವುದು ಸಂಶೋಧನೆ ಉದ್ದೇಶವಾಗಿರಲಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯೂ ಪ್ರಮುಖ ವಿಚಾರವಾಗಿದೆ. ಅದರಿಂದಲೂ ಸೋಂಕಿನ ಪ್ರಕರಣಗಳ ಇಳಿಕೆಯಾಗಿದೆ ಎನ್ನುವುದು ಗಮನಾರ್ಹ ಎಂದಿದ್ದಾರೆ.

ಜನ ಜಾಗೃತಿ, ಸಾಮಾಜಿಕ ಅಂತರದ ಜತೆಗೆ ತಾಪಮಾನ ಹೆಚ್ಚಳವು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Comments are closed.