ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ಸೋಂಕಿನಿಂದ ಅಮೆರಿಕದಲ್ಲಿ ಮೃತಪಟ್ಟವರ ಸಂಖ್ಯೆ ಶುಕ್ರವಾರ 50 ಸಾವಿರ ಗಡಿ ದಾಟಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿವಿ ಮಾಹಿತಿ ನೀಡಿದೆ.
ಮಹಾಮಾರಿ ಕೊರೋನಾ ವೈರಸ್ ಜಾಗತಿಕ ಬಿಕ್ಕಟ್ಟು ಆರಂಭವಾದ ದಿನದಿಂದ ಈವರೆಗೆ ಅಮೆರಿಕದಲ್ಲಿ 50,031 ಜನರು ಕೋವಿಡ್ -19ಗೆ ಬಲಿಯಾಗಿದ್ದಾರೆ. ಹಾಗೂ 8,70,000 ಪ್ರಕರಣಗಳು ಖಚಿತಗೊಂಡಿವೆ.
ಜಾಗತಿಕವಾಗಿ ಕೊರೋನಾ ವೈರಸ್ ಪರಿಣಾಮ ಅಮೆರಿಕದ ಮೇಲೆ ದಟ್ಟವಾಗಿ ಬೀರಿದೆ. ಕಳೆದ 24 ಗಂಟೆಯಲ್ಲಿ 3,176 ಜನರು ಕೋವಿಡ್-19ನಿಂದ ಮೃತಪಟ್ಟೊದ್ದಾರೆ. ಜಾನ್ಸ್ ಹಾಪ್ಕಿನ್ಸ್ ವಿವಿ ಪ್ರಕಾರ, ಈ ಸಾಂಕ್ರಾಮಿಕ ಆರಂಭವಾದ ದಿನದಿಂದ ಈವರೆಗೂ ಇಷ್ಟು ಜನರು ಮೃತಪಟ್ಟಿದ್ದು ಇದೇ ದಿನ ಮೊದಲು ಎಂದು ತಿಳಿಸಿದೆ.
ರಾಯಿಟರ್ಸ್ ಸುದ್ದಿಸಂಸ್ಥೆ ಪ್ರಕಾರ, ಈ ತಿಂಗಳಲ್ಲಿ ಪ್ರತಿದಿನ ಕನಿಷ್ಠ ಎರಡು ಸಾವಿರ ಜನರು ಮಾರಕ ಸೋಂಕಿನಿಂದ ಮೃತಪಡುತ್ತಿದ್ದಾರೆ ಎಂದು ತಿಳಿಸಿದೆ.
ಇದರ ನಡುವೆಯೂ ಅಮೆರಿಕ ಜಾರ್ಜಿಯಾ ಮತ್ತು ಟೆಕ್ಸಾಸ್ ರಾಜ್ಯಗಳಲ್ಲಿ ಲಾಕ್ಡೌನ್ ನಿಯಮಗಳನ್ನು ತೆಗೆದುಹಾಕಿದ ಬಳಿಕ ಕೆಲ ವ್ಯವಹಾರಗಳು ಆರಂಭವಾಗಿವೆ.
ಅಮೆರಿಕದಲ್ಲಿ ಸಾವಿನ ಪ್ರಮಾಣ ಇನ್ನೂ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಈವರೆಗೂ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ಗಳಲ್ಲಿ ಮೃತಪಟ್ಟವರ ಸಂಖ್ಯೆ ಲೆಕ್ಕ ಹಾಕಲಾಗಿದೆಯೇ ಹೊರತು ಮನೆಗಳಲ್ಲಿ ಸತ್ತವರ ಸಂಖ್ಯೆ ಎಣಿಕೆ ಮಾಡಿಲ್ಲ. ಅಮೆರಿಕದ ಕೇಂದ್ರಬಿಂದುವಾಗಿರುವ ನೂಯಾರ್ಕ್ನಲ್ಲಿ ಶೇ.40ರಷ್ಟು ಸಾವುಗಳು ಸಂಭವಿಸಿದೆ. ಆನಂತರ ನ್ಯೂಜೆರ್ಸಿ, ಮಿಚಿಗನ್ ಹಾಗೂ ಮ್ಯಾಸಚೂಸೆಟ್ಸ್ನಲ್ಲಿ ಹೆಚ್ಚು ಸಾವು ಸಂಭವಿಸಿದೆ.
Comments are closed.