ಅಂತರಾಷ್ಟ್ರೀಯ

ಇರಾನ್‌ನಲ್ಲಿ ಕೋವಿಡ್‌-19 ಪ್ರಕರಣಗಳಲ್ಲಿ ಇಳಿಮುಖ

Pinterest LinkedIn Tumblr


ತೆಹ್ರಾನ್: ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾದ ದೇಶಗಳಲ್ಲಿ ಇರಾನ್ ಕೂಡ ಒಂದು. ಮಾರಣಾಂತಿಕ ವೈರಸ್‌ಗೆ ಇಂದು ಹೊಸದಾಗಿ 117 ಮಂದಿ ಸಾವಿಗೀಡಾಗಿದ್ದು, ಒಟ್ಟಾರೆ ಮೃತಪಟ್ಟವರ ಸಂಖ್ಯೆ 4,110ಕ್ಕೇರಿದೆ ಎಂದು ಇರಾನ್‌ನ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

ಇಡೀ ವಿಶ್ವವೇ ಕೋವಿಡ್‌-19 ಸೋಂಕನ್ನು ನಿಯಂತ್ರಿಸುವಲ್ಲಿ ಕಠಿಣ ಹೋರಾಟ ನಡೆಸುತ್ತಿವೆ. ಆದರೆ, ನಮ್ಮ ದೇಶದಲ್ಲಿನ ಹೊಸ ಕೊರೊನಾ ವೈರಸ್ ಸೋಂಕುಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂಬುದನ್ನು ಇತ್ತೀಚಿನ ಅಂಕಿ ಅಂಶಗಳು ತೋರಿಸಿವೆ ಎಂದು ಆರೋಗ್ಯ ಸಚಿವಾಲಯದ ವಕ್ತಾರ ಕಿಯಾನೌಶ್ ಜಹಾನ್ಪೂರ್ ತಿಳಿಸಿದ್ದಾರೆ.

“ಇಂದು ನಾವು ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವುದನ್ನು ಸ್ಪಷ್ಟವಾಗಿ ನೋಡುತ್ತಿದ್ದೇವೆ. 1,634 ಹೊರ ಪ್ರಕರಣಗಳನ್ನು ಗುರುತಿಸಲಾಗಿದ್ದು, ಇದರೊಂದಿಗೆ ಒಟ್ಟಾರೆ 66,220 ಕೋವಿಡ್‌ ಸೋಂಕು ಪ್ರಕರಣಗಳು ಸ್ಪಷ್ಟವಾಗಿದೆ,” ಎಂದು ದೂರದರ್ಶನದ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದ್ದಾರೆ.

ಕೊರೊನಾ ವೈರಸ್‌ ನಿಯಂತ್ರಣ ಮಾಡುವಲ್ಲಿ ಆರೋಗ್ಯ ಇಲಾಖೆ ಸೂಚಿಸಿದ್ದ ಮಾರ್ಗಸೂಚಿಗಳನ್ನು ಚಾಚು ತಪ್ಪದೇ ಪಾಲಿಸಿದ ಇರಾನ್ ಜನತೆಯನ್ನು ಇದೇ ವೇಳೆ ಆರೋಗ್ಯ ಸಚಿವಾಲಯದ ವಕ್ತಾರರು ಕೊಂಡಾಡಿದರು.

“ಕೊರೊನಾ ವೈರಸ್‌ ಪ್ರಕರಣಗಳಲ್ಲಿ ಇಳಿಮುಖವಾಗುತ್ತಿದೆ ಎಂದು ಹೇಳಲು ಸಂತಸವಾಗುತ್ತಿದ್ದು, ಇದಕ್ಕೆ ಸಹಕರಿಸಿದ ವೈದ್ಯಕೀಯ ಸಿಬ್ಬಂದಿ ಹಾಗೂ ನಾನು ಕೊಟ್ಟ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿದ ಜನೆಗೆ ನಾವು ಚಿರ ಋಣಿಯಾಗಿರುತ್ತೇವೆ,” ಎಂದು ಕಿಯಾನೌಶ್ ಜಹಾನ್ಪೂರ್ ಹೇಳಿದ್ದಾರೆ.

“ಕಳೆದ 24 ಗಂಟೆಗಳಲ್ಲಿ ನಾವು 117 ಮಂದಿಯನ್ನು ಕಳೆದುಕೊಂಡಿದ್ದೇವೆ. ಕೋವಿಡ್‌-19 ಸೋಂಕಿನಿಂದ 4,110 ಮಂದಿ ಮೃತಪಟ್ಟಿದ್ದಾರೆ. ಇರಾನ್‌ನಲ್ಲಿ ಫೆಬ್ರುವರಿ 19 ರಂದು ಮೊದಲ ಕೊರೊನಾ ವೈರಸ್‌ ಪ್ರಕರಣ ದಾಖಲಾಗಿತ್ತು. ಆದರೆ. ದೇಶದಲ್ಲಿ ನೈಜ ಸಾವುಗಳು ಮತ್ತು ಸೋಂಕುಗಳು ಹೆಚ್ಚಾಗಬಹುದೆಂದು ವಿದೇಶಗಳಲ್ಲಿ ಊಹಾಪೋಹಗಳಿವೆ.

Comments are closed.