ಅಂತರಾಷ್ಟ್ರೀಯ

ಚೀನಾದಲ್ಲಿ ಗುಂಪು ಗುಂಪಾಗಿ ಸೇರುತ್ತಿರುವ ಜನ

Pinterest LinkedIn Tumblr


ಚೀನಾದಲ್ಲಿ ಕಂಡುಬಂದ ಕೊರೊನಾವೈರಸ್‌ನಿಂದಾಗಿ ಈಗ ಇಡೀ ವಿಶ್ವವೇ ತತ್ತರಿಸಿದೆ. ಭಾರತ ದೇಶ ಸಂಪೂರ್ಣ ಲಾಕ್‌ಡೌನ್‌ ಮಾಡಿದೆ. ಆದರೆ ಚೀನಾದ ಇತ್ತೀಚಿನ ಪರಿಸ್ಥಿತಿಯನ್ನು ನೋಡಿದರೆ ಕೊನೆಗೂ ಚೀನಾ ಇಲ್ಲಿ ಹುಟ್ಟಿದ ಕೊರೊನಾವೈರಸ್ ಸಾಂಕ್ರಾಮಿಕವನ್ನು ನಿವಾರಿಸಿದಂತೆ ತೋರುತ್ತಿದೆ.

ತಿಂಗಳುಗಳ ಲಾಕ್‌ಡೌನ್ ನಂತರ, ದೇಶವು ಅಂತಿಮವಾಗಿ ಹಲವಾರು ಸ್ಥಳಗಳಿಂದ ಪ್ರಯಾಣದ ನಿರ್ಬಂಧಗಳನ್ನು ತೆಗೆದುಹಾಕಿದೆ, ಮತ್ತು ವಾರಾಂತ್ಯದಲ್ಲಿ 3 ದಿನಗಳ ಕ್ವಿಂಗ್ಮಿಂಗ್ ಉತ್ಸವದಲ್ಲಿ ಚೀನಾದಲ್ಲಿ ಹಲವಾರು ಪ್ರವಾಸಿಗರು ಮಾಸ್ಕ್ ಧರಿಸುವ ಮೂಲಕ ಪಾಲ್ಗೊಂಡಿದ್ದರು, ಚೀನಾವು ಸಂಭ್ರಮದಿಂದ ಕೂಡಿತ್ತು.

ಕ್ವಿಂಗ್ಮಿಂಗ್ ಉತ್ಸವವು ಶನಿವಾರದಿಂದ ಪ್ರಾರಂಭವಾಯಿತು ಮತ್ತು ಈ ದೇಶದ ಪ್ರವಾಸೋದ್ಯಮ ಕೂಡಾ ಚೇತರಿಸಿಕೊಳ್ಳುತ್ತಿದೆ. ಆದಾಗ್ಯೂ, ತಜ್ಞರ ಪ್ರಕಾರ, ಪ್ರವಾಸಿ ತಾಣಗಳಲ್ಲಿ COVID-19 ಪ್ರಸರಣದ ಸಾಧ್ಯತೆಯು ಹೆಚ್ಚಿರುವುದರಿಂದ ಜನರು ಅಷ್ಟೊಂದು ಸಂಖ್ಯೆಯಲ್ಲಿ ತಿರುಗಾಡುವುದು ಅತ್ಯಂತ ಅಪಾಯಕಾರಿ.

ಭಾನುವಾರ, ಚೀನಾದ ಅನ್ಹುಯಿ ಪ್ರಾಂತ್ಯದ ಪ್ರಮುಖ ಪ್ರವಾಸಿ ತಾಣವಾಗಿರುವ ಹುವಾಂಗ್‌ಶಾನ್ ಪರ್ವತವು ಹೆಚ್ಚಿನ ಸಂಖ್ಯೆಯ ಪ್ರವಾಸಿಗರಿಂದ ಕೂಡಿತ್ತು. ಪ್ರವಾಸೋದ್ಯಮವನ್ನು ಉತ್ತೇಜಿಸಲು, ಅಲ್ಲಿನ ನಿವಾಸಿಗಳಿಗೆ 190 ಯುವಾನ್ ($ 26.7) ಪ್ರವೇಶ ಶುಲ್ಕವನ್ನು ವಿಧಿಸಿದೆ.

ಕೊರೊನಾವೈರಸ್ ಅಪಾಯವು ದೂರವಿರುವುದರಿಂದ ಚೀನಾದಲ್ಲಿ ಆರೋಗ್ಯ ಅಧಿಕಾರಿಗಳಿಂದ ಹಲವಾರು ಎಚ್ಚರಿಕೆಗಳನ್ನು ನೀಡಿದ್ದರೂ ಸಹ ಇಷ್ಟೊಂದು ಸಂಖ್ಯೆಯಲ್ಲಿ ಜನರು ಸೇರಿರುವುದು ನಿಜಕ್ಕೂ ಭಯವನ್ನು ಮೂಡಿಸಿದೆ. ಹುವಾಂಗ್‌ಶಾನ್ ಪರ್ವತ ಉದ್ಯಾನವನದ ಹಲವಾರು ಚಿತ್ರಗಳನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳಲಾಗಿದ್ದು, ಸಾವಿರಾರು ಚೀನಿಯರು ಮಾಸ್ಕ್‌ಗಳನ್ನು ಧರಿಸಿರುವುದನ್ನು ತೋರಿಸಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಜನರು ಬೆಳಿಗ್ಗೆ 7:48 ಗಂಟೆಯಿಂದಲೇ ನೂಕುನುಗ್ಗಲು ಮೂಲಕ ಈ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ ಮತ್ತು ಅಧಿಕಾರಿಗಳು ಬೆಳಗ್ಗೆ 10 ಗಂಟೆಗೆ ಉದ್ಯಾನವನವು ತನ್ನ ದೈನಂದಿನ ಸಾಮರ್ಥ್ಯವನ್ನು ಅಂದರೆ 20000 ಸಂದರ್ಶಕರನ್ನು ಈಗಾಗಲೇ ತಲುಪಿದೆ ಎಂದು ಘೋಷಿಸುವ ನೋಟೀಸ್ ನೀಡಿದ್ದರು, ಅದಲ್ಲದೆ ಉಳಿದವರು ಇನ್ನೊಂದು ದಿನ ಇಲ್ಲಿಗೆ ಭೇಟಿ ನೀಡುವಂತಹ ನೋಡಿಸನ್ನು ಜಾರಿಗೊಳಿಸಿದ್ದರು ಎನ್ನಲಾಗಿದೆ .

ಮತ್ತೊಂದೆಡೆ, ಶಾಂಘೈನ ಹೆಸರಾಂತ ಬಂಡ್ ಜಲಾಭಿಮುಖವು ವ್ಯಾಪಾರಿಗಳು ಮತ್ತು ಪ್ರವಾಸಿಗರಿಂದ ತುಂಬಿ ತುಳುಕುತ್ತಿರುವುದು ಕಂಡುಬಂತು. ನಗರದ ರೆಸ್ಟೋರೆಂಟ್‌ಗಳು ಸಹ ಜನರಿಂದ ತುಂಬಿವೆ ಎಂದು ವರದಿಯಾಗಿದೆ. ಅಂತೆಯೇ, ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿನ ಉದ್ಯಾನವನಗಳೂ ಜನರಿಂದ ತುಂಬಿ ತುಳುಕುತ್ತಿದ್ದವು.

Comments are closed.