
ನವದೆಹಲಿ: ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಯುವಲ್ಲಿ ಈ ಈ ವರದಿ ಪ್ರಮುಖ ಪಾತ್ರವಹಿಸಲಿದೆ. ಮಾಹಿತಿ ತಂತ್ರಜ್ಞಾನದ ದೈತ್ಯ ಕಂಪನಿಗಳಲ್ಲಿ ಒಂದಾಗಿರುವ Facebook ಹಾಗೂ Google ವಿಶ್ವದ ದೇಶಗಳಿಗೆ ಸಹಾಯದ ಹಸ್ತ ಚಾಚಿವೆ. ಈ ಕಂಪನಿಗಳು ವಿಶ್ವದ ವಿವಿಧ ದೇಶಗಳಿಗೆ ಟ್ರ್ಯಾಕಿಂಗ್ ಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಲು ಮುಂದಾಗಿವೆ.
ಏನಿದು ಟ್ರ್ಯಾಕಿಂಗ್
Facebook ಹಾಗೂ Google ಬಳಿ ಎಲ್ಲ ಬಳಕೆದಾರರ ಫೋನ್ ಲೋಕೇಶನ್ ಡೇಟಾಗಳನ್ನು ಶೇಖರಿಸಿ ಇಡುತ್ತವೆ. ಒಂದು ವೇಳೆ ಯಾವುದೇ ಓರ್ವ ವ್ಯಕ್ತಿ ದೇಶದ ಒಂದು ಪಟ್ಟಣದಿಂದ ಇನ್ನೊಂದು ಪಟ್ಟಣಕ್ಕೆ ಪ್ರಯಾಣ ಬೆಳೆಸಿದರೆ ಅದರ ಮಾಹಿತಿಯನ್ನೂ ಸಹ ಈ ಕಂಪನಿಗಳು ತಮ್ಮ ಬಳಿ ಇರಿಸಿರುತ್ತವೆ. ಇಂತಹುದರಲ್ಲಿ ಒಂದು ವೇಳೆ ವಿಭಿನ್ನ ದೇಶಗಳ ನಾಗರಿಕರು ವಿದೇಶ ಯಾತ್ರೆಗಳಿಂದ ಮರಳಿದ್ದರೂ ಕೂಡ ಅವಿತು ಮನೆಯಲ್ಲಿ ಕುಳಿತಿದ್ದರೂ ಕೂಡ ಅಂತವರ ಮಾಹಿತಿಯನ್ನೂ ಸಹ ಈ ಕಂಪನಿಗಳು ತಮ್ಮ ಬಳಿ ಇರಿಸಿರುತ್ತವೆ.
ದೇಶದ ಸರ್ಕಾರಗಳಿಗೆ ಈ ಎರಡೂ ಕಂಪನಿಗಳು ಮಾಹಿತಿಯನ್ನು ಒದಗಿಸಲಿವೆ
ತಜ್ಞರು ಹೇಳುವ ಪ್ರಕಾರ ಕೊರೊನಾ ಸೋಂಕನ್ನು ತಡೆಯಲು ಹಾಗೂ ಅದರ ಹರಡುವಿಕೆಯನ್ನು ತಿಳಿದುಕೊಳ್ಳುವುದು ತುಂಬಾ ಅವಶ್ಯಕವಾಗಿದೆ. ಉದಾಹರಣೆಗಾಗಿ ಓರ್ವ ಕೊರೊನಾ ಸೋಂಕಿತ ವ್ಯಕ್ತಿಯ ಎಲ್ಲ ಲೋಕೇಶನ್ ಹಾಗೂ ಆತನ ಹತ್ತಿರಕ್ಕೆ ಬಂದ ಜನರ ಫೋನ್ ಲೋಕೇಶನ್ ಒಂದು ವೇಳೆ ಟ್ರ್ಯಾಕ್ ಮಾಡಿದರೆ ಈ ವೈರಸ್ ಸೋಂಕು ಹರಡುವಿಕೆ ತಡೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದ್ದಾರೆ. ಭಾರತ ಸೇರಿದಂತೆ ಇತರೆ ದೇಶದ ಸರ್ಕಾರಗಳು ವಿದೇಶದಿಂದ ಬಂದ ತಮ್ಮ ನಾಗರಿಕರು ಯಾರ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಹರಸಾಹಸ ಪಡುತ್ತಿವೆ. ಆದರೆ, ಇದುವರೆಗೂ ಖಚಿತ ಮಾಹಿತಿ ಸಂಗ್ರಹಿಸಲು ಅವು ಸಫಲವಾಗುತ್ತಿಲ್ಲ. ಇದರಿಂದ ಸೋಂಕಿನ ಮೇಲೆ ಹತೋಟಿ ಸಾಧಿಸುವುದು ಕಷ್ಟ ಸಾಧ್ಯ ಎಂದು ಹೇಳಲಾಗುತ್ತಿದೆ.
ಹೇಗೆ ಸಹಾಯ ಮಾಡಲಿವೆ Google ಹಾಗೂ Facebook
ಈ ಕುರಿತು ಹೇಳಿಕೆ ನೀಡಿರುವ Facebook ಒಂದು ವೇಳೆ ಕೊರೊನಾ ವೈರಸ್ ಮೇಲೆ ಸರ್ಕಾರ ಸಂಶೋಧನೆಗಾಗಿ ಬಳಕೆದಾರರ ಮಾಹಿತಿ ಸಂಗ್ರಹಿಸಲು ಬಯಸಿದರೆ, ಕಂಪನಿ ಈ ಮಾಹಿತಿಯನ್ನು ಪೂರೈಸಲು ಸಿದ್ಧವಾಗಿದೆ. ಈ ಕುರಿತು ಸೋಮವಾರ ಹೇಳಿಕೆ ನೀಡಿರುವ Facebook, ತಮ್ಮ ಬಳಕೆದಾರರ ಮಾಹಿತಿ, ಗುರುತು ಗೌಪ್ಯವಾಗಿ ಇರಿಸಿ, ಅವರ ಪ್ರವಾಸದ ಹಾಗೂ ಅವರ ಸಂಬಂಧಿಕರ ಮಾಹಿತಿಯನ್ನು ಸಂಶೋಧಕರಿಗೆ ನೀಡುವುದಾಗಿ ಹೇಳಿದ್ದು, ಇದರಿಂದ ವೈರಸ್ ಸೋಂಕು ಮುಂದೆ ಎಲ್ಲಿ ಪಸರಿಸಲಿದೆ ಎಂಬುದನ್ನು ತಿಳಿಯಲು ಇದು ಸಹಕಾರಿಯಾಗಲಿದೆ ಎಂದು ಹೇಳಿದೆ.
ಈ ಕುರಿತು ಕಳೆದ ವಾರವಷ್ಟೇ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದ ಗೂಗಲ್ ಕೂಡ ತನ್ನ ಬಳಕೆದಾರರ ಪ್ರವಾಸದ ಮಾಹಿತಿಯನ್ನು ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಂಶೋಧಕರ ಜೊತೆಗೆ ಹಂಚಿಕೊಳ್ಳಲು ಒಲವು ತೋರಿತ್ತು. ಅಷ್ಟೇ ಅಲ್ಲ ಈ ಮಾಹಿತಿ ಸರ್ಕಾರಕ್ಕೆ ಕೊವಿಡ್ 19 ಮೇಲೆ ಹಿಡಿತ ಸಾಧಿಸಲು ಸಹಕರಿಸಲಿದೆ ಎಂದೂ ಸಹ ಹೇಳಿತ್ತು.
Comments are closed.