ಅಂತರಾಷ್ಟ್ರೀಯ

ಕೊರೊನಾ ವೈರಸ್: ಭಾರತದ ನೆರವು ಕೇಳುತ್ತಿರುವ ಅಮೆರಿಕಾ

Pinterest LinkedIn Tumblr


ವಾಷಿಂಗ್ಟನ್: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ತಮ್ಮ ದೇಶದಲ್ಲಿನ ಕೊರೊನಾ ವೈರಸ್ ಪ್ರಕೋಪದ ಕುರಿತು ಚರ್ಚೆ ನಡೆಸಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿರುವುದಾಗಿ ಹೇಳಿರುವ ಟ್ರಂಪ್, ಕೊರೊನಾ ವೈರಸ್ ರೋಗಿಗಳ ಚಿಕಿತ್ಸೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನು ರವಾನಿಸಲು ಮನವಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಭಾರತ ಈ ಔಷಧಿಯ ರಫ್ತಿಗೆ ತಡೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಅಮೇರಿಕಾ ಈ ಮನವಿ ಮಾಡಿದೆ ಎನ್ನಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಡೊನಾಲ್ಡ್ ಟ್ರಂಪ್ ಶನಿವಾರ ಅವರು ಈ ಕುರಿತು ಚರ್ಚೆ ನಡೆಸಿದ್ದು, ಮಲೇರಿಯಾ ಕಾಯಿಲೆ ನಿವಾರಣೆಗೆ ದಶಕಗಳಿಂದ ಬಳಕೆಯಾಗುತ್ತಿರುವ ಹಾಗೂ ಅಗ್ಗದ ಬೆಲೆಯ ಹೈಡ್ರಾಕ್ಸಿಕ್ಲೋರೋಕ್ವಿನ್ ಬಿಡುಗಡೆಗೊಳಿಸಲು ಮನವಿ ಮಾಡಿದ್ದಾರೆ. ವೈಟ್ ಹೌಸ್ ನಲ್ಲಿ ನಿತ್ಯ ನಡೆಸಲಾಗುವ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಟ್ರಂಪ್ ಈ ಕುರಿತು ಮಾಹಿತಿ ನೀಡಿದ್ದು, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಉತ್ಪಾದಿಸಿ, ಅಮೆರಿಕಾಗೆ ರವಾನಿಸಲು ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದು, ಭಾರತ ಈ ಕುರಿತು ಗಂಭೀರ ಯೋಚನೆ ನಡೆಸುತ್ತಿದೆ.

ಭಾಟದ ವಿದೇಶಿ ವ್ಯಾಪಾರ ಪ್ರವರ್ತನಾಲಯ ಮಾರ್ಚ್ 25 ರಂದು ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತಿನ ಮೇಲೆ ತಡೆ ನೀಡಿತ್ತು. ಈ ವೇಳೆ ಕೆಲ ಸರಕುಗಳನ್ನು ಮಾತವತೆಯ ಆಧಾರದ ಮೇಲೆ ರಫ್ತು ಮಾಡಲು ಅನುಮತಿ ನೀಡುವ ಕುರಿತು ಯೋಚಿಸಲಾಗುವುದು ಎಂದು ಹೇಳಿತ್ತು. ಮಲೇರಿಯಾ ರೋಗಕ್ಕೆ ಬಳಸಲಾಗುವ ಈ ವೈರಸ್ ಹಲವು ಕಡೆಗಳಲ್ಲಿ ಕೊರೊನಾ ವೈರಸ್ ಅನ್ನು ಮಟ್ಟಹಾಕಲು ಬಳಸಲಾಗುತ್ತಿದೆ. ಸದ್ಯ ಅಮೇರಿಕಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,00,000ಕ್ಕೆ ತಲುಪಿದ್ದು, ಇದುವರೆಗೆ ಸುಮಾರು 8100 ಜನ ಈ ಮಾರಕ ಕಾಯಿಲೆಗೆ ಬಲಿಯಾಗಿದ್ದಾರೆ.

ಕೊರೊನಾ ವೈರಸ್ ಮಹಾಮಾರಿಯಿಂದ ಉದ್ಭವಿಸಿರುವ ಪರಿಸ್ಥಿತಿಯನ್ನು ಹತ್ತಿಕ್ಕಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಮಾತುಕತೆ ನಡೆಸಿದ್ದಾರೆ. ಕೊವಿಡ್-19 ವಿರುದ್ಧ ಹೋರಾಟ ನಡೆಸಲು ಭಾರತ-ಅಮೇರಿಕಾ ಉಭಯ ರಾಷ್ಟ್ರಗಳು ಪ್ರತಿಬದ್ಧವಾಗಿವೆ ಎಂದು ಸಂಕಲ್ಪ ಕೈಗೊಂಡಿದ್ದಾರೆ.

ತಮ್ಮ ಈ ಮಾತುಕತೆಯ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, “ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ತಾವು ದೂರವಾಣಿ ಮೂಲಕ ವಿಸ್ತೃತ ಚರ್ಚೆ ನಡೆಸಿರುವುದಾಗಿ ಹೇಳಿದ್ದು, ನಮ್ಮ ಚರ್ಚೆ ಈ ನಿಟ್ಟಿನಲ್ಲಿ ಫಲಪ್ರದವಾಗಿದ್ದು, ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತ-ಅಮೇರಿಕಾ ಜಂಟಿಯಾಗಿ ಪ್ರತಿಬದ್ಧವಾಗಿವೆ” ಎಂದು ಮಾಹಿತಿ ನೀಡಿದ್ದಾರೆ.

Comments are closed.