ಅಂತರಾಷ್ಟ್ರೀಯ

89ರ ವಯಸ್ಸಿನಲ್ಲಿ ತಂದೆಯಾಗುತ್ತಿರುವ ಫಾರ್ಮುಲಾ ವನ್‌ ರೇಸ್‌ನ ಅಧಿಪತಿ ಬೆರ್ನಿ ಎಕ್ಲೆಸ್ಟೋನ್‌

Pinterest LinkedIn Tumblr


ಲಂಡನ್‌: ಫಾರ್ಮುಲಾ ವನ್‌ ರೇಸ್‌ನ ಅಧಿಪತಿಯಾಗಿ ಮೆರೆದಿದ್ದ 89ರ ಹರೆಯದ ಬೆರ್ನೆ ಎಕ್ಲೆಸ್ಟೋನ್‌ ಮತ್ತೆ ತಂದೆ ಯಾಗುತ್ತಿದ್ದಾರೆ. ಎಕ್ಲೆಸ್ಟೋನ್‌ ಅವರು ತನ್ನಗಿಂತ ಅರ್ಧ ವಯಸ್ಸು ಕಡಿಮೆಯಿರುವ ಪತ್ನಿ ಫಾಬಿಯಾನಾ ಫ್ಲೋಸಿ ಅವರಿಂದ ಜುಲೈ ತಿಂಗಳಲ್ಲಿ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದಾರೆ. 44ರ ಹರೆಯದ ಫ್ಲೋಸಿ ಅವರು ಮಾರುಕಟ್ಟೆ ಎಕ್ಸಿಕ್ಯೂಟಿವ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

1978ರಿಂದ 2017ರ ಅವಧಿಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಫಾರ್ಮುಲಾ ವನ್‌ ರೇಸ್‌ನಲ್ಲಿ ಕ್ರಾಂತಿಕಾರಿ ಕೆಲಸ ನಿರ್ವಹಿಸಿದ ಎಕ್ಲೆಸ್ಟೋನ್‌ ಅವರಿಗೆ ಈ ಹಿಂದಿನ ಎರಡು ಪತ್ನಿಯರಿಂದ ಮೂವರು ವಯಸ್ಕ ಪುತ್ರಿಯರಿದ್ದಾರೆ.

ಮತ್ತೆ ತಂದೆಯಾಗುತ್ತಿರುವ ವಿಷಯದಲ್ಲಿ ಅಸಾಮಾನ್ಯವೇನೂ ಇಲ್ಲ. ಇದೆಲ್ಲ ಸಹಜವಾದದ್ದು ಎಂದ ಎಕ್ಲೆಸ್ಟೋನ್‌ ಅವರು ಕಳೆದ ಕೆಲವು ಸಮಯಗಳಿಂದ ನನಗೆ ಯಾವುದೇ ಉದ್ಯೋಗವಿರಲಿಲ್ಲ. ಹಾಗಾಗಿ ಅಭ್ಯಾಸ ಮಾಡಲು ಬಹಳಷ್ಟು ಸಮಯ ಸಿಕ್ಕಿದೆ. 89 ಮತ್ತು 29ರ ವಯಸ್ಸಿನಲ್ಲಿ ಯಾವುದೇ ವ್ಯತ್ಯಾಸವನ್ನು ನಾನು ಕಂಡಿಲ್ಲ ಎಂದರು.

ನನ್ನ ಪತ್ನಿಗೆ ರೋಮಾಂಚನವಾಗಿದೆ. ನನಗೂ ಸಹ. ಆಕೆ ಈ ಸಂಭ್ರಮಕ್ಕಾಗಿ ಎದುರು ನೋಡುತ್ತಿದ್ದರು. ನಾನು ಹೋದ ಅನಂತರ ಆಕೆಗೆ ಪುತ್ರ ಇರುವುದರಿಂದ ನನಗೆ ಅತೀವ ಸಂತಸವಾಗಿದೆ ಎಂದು ಎಕ್ಲೆಸ್ಟೋನ್‌ ತಿಳಿಸಿದರು.

Comments are closed.