ಅಂತರಾಷ್ಟ್ರೀಯ

ಇಸ್ರೇಲ್ ಆರೋಗ್ಯ ಸಚಿವ ಯಾಕೊವ್ ಲಿಟ್ಜ್‌ಮ್ಯಾನ್ ಗೆ ಕೊರೊನಾ!

Pinterest LinkedIn Tumblr


ಜೆರುಸಲೇಂ: ಇಸ್ರೇಲ್ ಆರೋಗ್ಯ ಸಚಿವ ಯಾಕೊವ್ ಲಿಟ್ಜ್‌ಮ್ಯಾನ್ ಅವರಿಗೆ ಕೊರೊನಾ ವೈರಸ್ ಸೋಂಕು ಪರೀಕ್ಷೆ ಪಾಸಿಟಿವ್ ಎಂದು ಬಂದಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಗುರುವಾರ ಬಹಿರಂಗಡಿಸಿದೆ. 71 ವರ್ಷದ ಯಾಕೊವ್ ಅವರನ್ನು ಐಸೋಲೆಶನ್ ನಲ್ಲಿ ಇರಿಸಲಾಗಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ದೇಶದ ಇತರ ಹಿರಿಯ ಅಧಿಕಾರಿಗಳೊಂದಿಗೆ ಯಾಕೊವ್ ಅವರು ನಿರಂತರ ನಿಕಟ ಸಂಪರ್ಕದಲ್ಲಿರುತ್ತಿದ್ದರು. ಹೀಗಾಗಿ ಆರೋಗ್ಯ ಸಚಿವರಿಗೆ ಕೊರೊನಾ ದೃಢಪಟ್ಟಿರುವುದು ಸಾಕಷ್ಟು ಭೀತಿ ಹುಟ್ಟಿಸಿದೆ. ಆರೋಗ್ಯ ಸಚಿವರ ಪತ್ನಿಗೆ ಕೂಡ ಸೋಂಕು ತಗಲಿದ್ದು ಇಬ್ಬರನ್ನೂ ಐಸೋಲೆಶನ್ ವಾರ್ಡ್ ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರೂ ಆರೋಗ್ಯವೂ ಚೇತರಿಸಿಕೊಳ್ಳುತ್ತಿದೆ ಎಂದು ಸರಕಾರದ ಸಚಿವಾಲಯ ತಿಳಿಸಿದೆ.

ಇನ್ನು ಕಳೆದೆರಡು ವಾರಗಳಿಂದ ಸಚಿವರ ಜತೆ ಸಂಪರ್ಕದಲ್ಲಿದ್ದವರನ್ನು ಕ್ವಾರೈಂಟೈನ್ ನಲ್ಲಿ ಇರಲು ಸೂಚಿಸಲಾಗಿದೆ ಎಂದೂ ಸಚಿವಾಲಯ ಹೇಳಿದೆ. ಈಗಾಗಲೇ ಇಸ್ರೇಲ್‍ ನ ಮೊಸ್ಸಾದ್ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಹಾಗೂ ರಾಷ್ಟ್ರೀಯ ಭದ್ರತಾ ಮಂಡಳಿಯ ಮುಖ್ಯಸ್ಥರನ್ನು ಕೂಡ ಕ್ವಾರೈಂಟೈನ್‍ ಗೊಳಗಾಗಲು ಸೂಚನೆ ನೀಡಲಾಗಿದೆ.

ಪ್ರಧಾನಿ ನೆತನ್ಯಾಹು ಅವರ ನಿಕಟವರ್ತಿಯೊಬ್ಬರಿಗೆ ಕೊರೊನಾ ದೃಢಪಟ್ಟಿತ್ತು ಅವರನ್ನು ಈಗಾಗಲೇ ಐಸೋಲೇಶನ್ ನಲ್ಲಿ ಇಡಲಾಗಿದೆ, ಹೀಗಾಗಿ ಪ್ರಧಾನಿ ನೆತನ್ಯಾಹು ಅವರಿಗೆ ಕೂಡ ಕೊರೊನಾ ಟೆಸ್ಟ್ ಮಾಡಲಾಗಿತ್ತು. ವರದಿಯಲ್ಲಿ ನೆಗೆಟಿವ್ ಎಂದು ಬಂದಿದೆ.

Comments are closed.