ಅಂತರಾಷ್ಟ್ರೀಯ

ರೋಗಿಗಳ ಜೊತೆ ಕಾರ್ಯಕ್ರಮ ನಡೆಸಿದ ಟಿವಿ ಆ್ಯಂಕರ್‌ಗೂ ಕೊರೊನಾ ಪಾಸಿಟಿವ್

Pinterest LinkedIn Tumblr


ಅಮೆರಿಕದಲ್ಲಿ ಕೊರೊನಾ ವೈರಸ್ ರುದ್ರ ನರ್ತನ ಮಾಡುತ್ತಿದೆ. ಜನಪ್ರಿಯ ಸುದ್ದಿ ವಾಹಿನಿ ಸಿಎನ್ಎನ್ ಪ್ರೈಮ್ ಟೈಮ್ ನ್ಯೂಸ್ ಆ್ಯಂಕರ್ ಕ್ರಿಸ್ ಕ್ಯೋಮೊಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಈ ಸಂಗತಿಯನ್ನು ಮಂಗಳವಾರ (ಮಾರ್ಚ್ 31) ಅವರು ಟ್ವಿಟರ್‌ನಲ್ಲಿ ಬಹಿರಂಗಪಡಿಸಿದ್ದಾರೆ.

ನ್ಯೂಯಾರ್ಕ್ ಗವರ್ನರ್ ಆಂಡ್ರೂ ಕ್ಯೂಮೊ ಸಹೋದರ ಇವರು ಎಂಬುದು ಗಮನಾರ್ಹ ಸಂಗತಿ. ಮಂಗಳವಾರ 9 pm ಕಾರ್ಯಕ್ರಮದಲ್ಲಿ ಕ್ರಿಸ್ ಕ್ಯೂಮೊ ಪಾಲ್ಗೊಳ್ಳಬೇಕಾಗಿತ್ತು. ಆದರೆ ಅಷ್ಟರಲ್ಲಾಗಲೆ ಈ ಸುದ್ದಿ ಬಹಿರಂಗವಾಗಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಅವರು ಕೊರೊನಾ ರೋಗಿಗಳ ಜೊತೆಗೆ ವಿಶೇಷ ಕಾರ್ಯಕ್ರಮ ನಡೆಸಿದ್ದರು. ಈಗ ಅವರಿಗೂ ಕೊರೊನಾ ಸೋಂಕು ಹರಡಿರುವುದು ಚರ್ಚಾಸ್ಪದ ಸಂಗತಿಯಾಗಿದೆ.

“ಈ ಕಷ್ಟಕಾಲದಲ್ಲಿ ನನ್ನ ಪರಿಸ್ಥಿತಿ ಇನ್ನಷ್ಟು ಭೀಕರವಾಗಿ ಬದಲಾಗಿದೆ. ಕಳೆದ ಕೆಲ ದಿನಗಳಿಂದ ಕೊರೊನಾ ವೈರಸ್ ಸೋಂಕಿಗೆ ಒಳಗಾದವರನ್ನು, ಆ ಮಹಾಮಾರಿಯನ್ನು ಗೆದ್ದವರನ್ನೂ ನಿಮ್ಮ ಮುಂದೆ ತಂದಿದ್ದೆ. ಆ ಬಳಿಕ ನನಗೆ ಜ್ವರ ಶುರುವಾಯಿತು. ಪರೀಕ್ಷಿಸಿದಾಗ ಕೊರೊನಾ ಪಾಸಿಟಿವ್ ಎಂದು ಗೊತ್ತಾಗಿದೆ. ಇದನ್ನು ನನ್ನ ಮಕ್ಕಳು, ಪತ್ನಿ ಕ್ರಿಸ್ಟಿನಾಗೆ ಸೋಂಕು ಹರಡಲು ಬಿಡಲ್ಲ. ಒಂದು ವೇಳೆ ಅದೇ ಏನಾದರು ನಡೆದರೆ ಇದರಿಂದ ನಾನು ಅನುಭವಿಸುತ್ತಿರುವ ನೋವಿಗಿಂತ ಇನ್ನಷ್ಟು ವ್ಯಥೆ ಪಡಬೇಕಾಗುತ್ತದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಅಮೆರಿಕದಲ್ಲಿ ಕೊರೊನಾ ವೈರಸ್ ಪ್ರಕರಣಗಳು 2 ಲಕ್ಷದ ಗಡಿ ತಲುಪಿದೆ. ಮಂಗಳವಾರದ ಹೊತ್ತಿಗೆ 1,76,518 ಪಾಸಿಟಿಕ್ ಪ್ರಕರಣಗಳು ದಾಖಲಾಗಿವೆ. 3431 ಮಂದಿಯನ್ನು ಕೊರೊನಾ ಬಲಿ ತೆಗೆದುಕೊಂಡಿದೆ. 6241 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ.

ನ್ಯೂಯಾರ್ಕ್, ನ್ಯೂಜೆರ್ಸಿಯಂತಹ ಜನಸಾಂದ್ರತೆ ದಟ್ಟವಾಗಿರುವ ರಾಜ್ಯಗಳಲಿ ಪರಿಸ್ಥಿತಿ ಇನಷ್ಟು ಬಿಗಡಾಯಿಸಿದೆ. ಆಸ್ಪತ್ರೆಗಳೆಲ್ಲವೂ ಕೊರೊನಾ ವೈರಸ್ ರೋಗಿಗಳಿಂದ ತುಂಬಿ ಹೋಗಿವೆ. ನ್ಯೂಯಾರ್ಕ್ ನಿವಾಸಿಗಳು ಹೆಜ್ಜೆ ಹೊರಗಡೆ ಇಡಲೂ ಹೆದರುತ್ತಿದ್ದಾರೆ.

Comments are closed.