
ಮ್ಯಾಡ್ರಿಡ್: ಮಹಾಮಾರಿ ಕೋವಿಡ್ 19 ವೈರಸ್ ಗೆ ತತ್ತರಿಸಿ ಹೋಗಿರುವ ಸ್ಪೇನ್ ದೇಶಾದ್ಯಂತ ಲಾಕ್ ಡೌನ್ ಘೋಷಿಸಿ ಮೂರು ವಾರಗಳು ಸಮೀಪಿಸುತ್ತಿವೆ. ಮತ್ತೊಂದೆಡೆ ಕೋವಿಡ್ 19 ವೈರಸ್ ಗೆ ಕಳೆದ 24ಗಂಟೆಯಲ್ಲಿ ಬರೋಬ್ಬರಿ 838 ಜನರು ಸಾವನ್ನಪ್ಪಿದ್ದು, ಇದರೊಂದಿಗೆ ದೇಶದಲ್ಲಿ ಸಾವಿನ ಸಂಖ್ಯೆ 6,528ಕ್ಕೆ ಏರಿದೆ.
ಸ್ಪೇನ್ ನಲ್ಲಿಯೂ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ ಒಂದೇ ದಿನದಲ್ಲಿ 72,248ರಿಂದ 78,797ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಶನಿವಾರ ರಾತ್ರಿ ಟೆಲಿವಿಷನ್ ಮೂಲಕ ಸ್ಪೇನ್ ದೇಶದ ಜನರನ್ನು ಉದ್ದೇಶಿಸಿ ಪ್ರಧಾನಿ ಪೆಡ್ರೋ ಸ್ಯಾನ್ ಚೆಝ್ ಮಾತನಾಡಿದ್ದು, ತುರ್ತು ಅಗತ್ಯವಿಲ್ಲದ ಎಲ್ಲಾ ಉದ್ಯೋಗಿಗಳು ಇನ್ನೂ ಎರಡು ವಾರಗಳ ಕಾಲ ಮನೆಯಲ್ಲಿ ಇರುವಂತೆ ಸೂಚನೆ ನೀಡಿದ್ದಾರೆ.
ನೌಕರರು, ಉದ್ಯೋಗಿಗಳ ಅವರ ಸಂಬಳ ದೊರೆಯಲಿದೆ. ಆದರೆ ಮುಂದಿನ ದಿನಗಳಲ್ಲಿ ಹೆಚ್ಚುವರಿ ಕೆಲಸ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಸ್ಪೇನ್ ಸರ್ಕಾರ ಕೈಗೊಂಡ ನಿರ್ಧಾರವನ್ನು ಸ್ವಾಗತಿಸುವುದಾಗಿ ಯೂನಿಯನ್ಸ್ ಹಾಗೂ ಉದ್ಯಮಿಗಳ ಸಂಘ ತಿಳಿಸಿದೆ. ಇದರಿಂದಾಗಿ ಸ್ಪೇನ್ ಆರ್ಥಿಕತೆ ಹಾಗೂ ಕೈಗಾರಿಕಾ ವಲಯಕ್ಕೆ ಅನುಕೂಲವಾಗಲಿದೆ ಎಂದು ಹೇಳಿದೆ.
Comments are closed.