ಆಂಧ್ರಪ್ರದೇಶ:ಕೋವಿಡ್ 19 ವೈರಸ್ ಹಬ್ಬದಿರುವಂತೆ ಮುಂಜಾಗ್ರತಾ ಕ್ರಮವಾಗಿ ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರ ಭಾನುವಾರ ಬಡವರಿಗೆ ಏಪ್ರಿಲ್ ತಿಂಗಳ ಉಚಿತ ರೇಷನ್ ವಿತರಿಸಿದೆ. ಜನರು ಕೂಡಾ ಸಾಮಾಜಿಕ ಅಂತರ ಕಾಯ್ದುಕೊಂಡು ರೇಷನ್ ಖರೀದಿಸಿರುವುದಾಗಿ ವರದಿ ತಿಳಿಸಿದೆ.
ಉಚಿತ ಅಕ್ಕಿ ಜತೆಗೆ 1ಕೆಜಿ ಬೇಳೆಯನ್ನು ನೀಡಲಾಗಿತ್ತು. ಬೆಳಗ್ಗೆ 6ಗಂಟೆಯಿಂದ ಮಧ್ಯಾಹ್ನ 1ಗಂಟೆವರೆಗೆ ರೇಷನ್ ವಿತರಿಸಲಾಗಿತ್ತು. ಇಂದು ಕೃಷ್ಣಾ ಜಿಲ್ಲೆಯಲ್ಲಿ ಉಚಿತ ರೇಷನ್ ನೀಡಲಾಗಿತ್ತು. ಆಂಧ್ರಪ್ರದೇಶ ಸರ್ಕಾರ ಬಡವರಿಗಾಗಿ ಉಚಿತ ರೇಷನ್ ನೀಡುತ್ತಿದ್ದು, ರೇಷನ್ ಕೊಂಡೊಯ್ಯುವವರು ತಮ್ಮ ಬಯೋ ಡಾಟಾ ಹಾಗೂ ಯಾವ ಜಿಲ್ಲೆ ಎಂಬುದನ್ನು ಖಚಿತಪಡಿಸಬೇಕು ಎಂದು ನಾಗರಿಕ ಪೂರೈಕೆ ಕಮಿಷನರ್ ಕೋನಾ ಶಶಿಧರ್ ತಿಳಿಸಿದ್ದಾರೆ.
ರೇಷನ್ ಕಾರ್ಡ್ ಹೊಂದಿರುವವರಿಗೆ ಏಪ್ರಿಲ್ ರೇಷನ್ ನಲ್ಲಿ ಅಕ್ಕಿ ಮತ್ತು ಒಂದು ಕೇಜಿ ಬೇಳೆಯನ್ನು ಉಚಿತವಾಗಿ ನೀಡುವುದಾಗಿ ಮಾರ್ಚ್ 24ರಂದು ಆಂಧ್ರಪ್ರದೇಶ ಸರ್ಕಾರ ಘೋಷಿಸಿತ್ತು. ಬಡವರಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಏಪ್ರಿಲ್ 4ರಂದು ಒಂದು ಸಾವಿರ ರೂಪಾಯಿ ನೀಡುವುದಾಗಿ ವೈಎಸ್ ಆರ್ ಸಿಪಿ ನೇತೃತ್ವದ ಸರ್ಕಾರ ಘೋಷಿಸಿದೆ.
Comments are closed.