ಅಂತರಾಷ್ಟ್ರೀಯ

ಕೊರೊನಾ: ಅರಮನೆ ತೊರೆದ ಬ್ರಿಟನ್ ರಾಣಿ!

Pinterest LinkedIn Tumblr


ಲಂಡನ್: ಬಡವ-ಶ್ರೀಮಂತ ಎನ್ನದೇ ಎಲ್ಲರನ್ನೂ ಬಲಿ ಪಡೆಯುತ್ತಿರುವ ಕೊರೊನಾ ವೈರಸ್, ಬ್ರಿಟನ್ ರಾಣಿ ಎಲಿಜಬೆತ್-2 ಅವರನ್ನೂ ಕಾಡತೊಡಗಿದೆ. ಕರೊನಾ ಭೀತಿ ಹಿನ್ನೆಲೆಯಲ್ಲಿ ಕ್ವೀನ್ ಎಲಿಜಬೆತ್-2 ಹಾಗೂ ಪ್ರಿನ್ಸ್ ಫಿಲಿಪ್ ವಿಶ್ವವಿಖ್ಯಾತ ಬಕಿಂಗ್‌ಹ್ಯಾಮ್ ಅರಮನೆಯನ್ನು ತೊರೆದಿದ್ದಾರೆ.

ಕೊರೊನಾ ಮುನ್ನೆಚ್ಚರಿಕೆ ಕ್ರಮದ ಭಾಗವಾಗಿ ಕ್ವೀನ್ ಎಲಿಜಬೆತ್-2 ಹಾಗೂ ಪ್ರಿನ್ಸ್ ಫಿಲಿಪ್ ಅವರನ್ನು ಬಕಿಂಗ್‌ಹ್ಯಾಮ್ ಅರಮನೆಯಿಂದ ವಿಂಡ್ಸರ್ ಕ್ಯಾಸೆಲ್ ಅರಮನೆಗೆ ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ.

ಬ್ರಿಟನ್ ರಾಣಿಯ ಅಧಿಕೃತ ಅರಮನೆಯಾದ ಬಕಿಂಗ್‌ಹ್ಯಾಮ್ ಪ್ಯಾಲೇಸ್ ಇದೀಗ ಬಣಗುಡುತ್ತಿದ್ದು, ಇಡೀ ಅರಮನೆಯ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ. ರಾಯಲ್ ಸ್ಯಾಂಡ್ರಿಂಗ್‌ಹ್ಯಾಮ್ ಎಸ್ಟೇಟ್‌ನಲ್ಲಿ ಕ್ವೀನ್ ಎಲಿಜಬೆತ್-2 ಹಾಗೂ ಪ್ರಿನ್ಸ್ ಫಿಲಿಪ್ ಅವರನ್ನು ತೀವ್ರ ಭದ್ರತೆಯಲ್ಲಿ ಇಡಲಾಗಿದೆ.

ಇದೇ ವೇಳೆ ಬಕಿಂಗ್‌ಹ್ಯಾಮ್ ಅರಮನೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದ್ದು, ಅರಮನೆಯೊಳಗೆ ಯಾರನ್ನೂ ಬಿಡದಂತೆ ಆದೇಶ ನೀಡಲಾಗಿದೆ.

ಮಾರಕ ಕೊರೊನಾ ವೈರಸ್‌ಗೆ ಇದುವರೆಗೂ ಇಂಗ್ಲೆಂಡ್ ನಲ್ಲಿ 21 ಜನರು ಬಲಿಯಾಗಿದ್ದು, 1,140 ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ ಎನ್ನಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಇಂಗ್ಲೆಂಡ್ ಆರೋಗ್ಯ ಸಚಿವ, ಕೊರನಾ ವಿರುದ್ಧ ಹೋರಾಡಲು ಇಲಾಖೆ ಸರ್ವಸನ್ನದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Comments are closed.