ರಾಷ್ಟ್ರೀಯ

ನಿರ್ಭಯಾ ಪ್ರಕರಣದ ದೋಷಿಗಳ ಗಲ್ಲಿಗೇರಿಸಲು ಸಿದ್ಧತೆ

Pinterest LinkedIn Tumblr


ನವದೆಹಲಿ: ಇದೇ ತಿಂಗಳ 20ರಂದು ನಿರ್ಭಯಾ ಹಂತಕರನ್ನು ಗಲ್ಲಿಗೇರಿಸುವಂತೆ ನ್ಯಾಯಾಲಯದ ಆದೇಶ ಜಾರಿಯಾಗಿರುವ ಹಿನ್ನೆಲೆಯಲ್ಲಿ, ಗಲ್ಲಿಗೇರಿಸುವ ದಿನಕ್ಕಿಂತ ಮೂರು ದಿನಗಳ ಮುಂಚಿತವಾಗಿಯೇ ವಧಾಕಾರನನ್ನು ತಿಹಾರ್‌ ಜೈಲಿಗೆ ಕರೆಯಿಸಿಕೊಳ್ಳಲು ಜೈಲಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ವಧಾಕಾರ ಪವನ್‌ ಜಲ್ಲಾದ್‌ ಸೇವೆ ಸಲ್ಲಿಸುತ್ತಿರುವ ಉತ್ತರ ಪ್ರದೇಶದ ಕಾರಾಗೃಹದ ಅಧಿಕಾರಿಗಳಿಗೆ ಪತ್ರ ಬರೆದಿರುವ ತಿಹಾರ್‌ ಜೈಲಧಿಕಾರಿಗಳು, ಆತನನ್ನು ಮೂರು ದಿನ ಮುಂಚಿತವಾಗಿ ಕಳುಹಿಸಬೇಕೆಂದು ಕೋರಿದ್ದಾರೆ.

ನ್ಯಾಯಾಲಯದ ಆದೇಶದಂತೆ, ಮಾ. 20ರ ಬೆಳಗಿನ ಜಾವ 5:30ಕ್ಕೆ ಹಂತಕರಾದ ಮುಕೇಶ್‌ ಕುಮಾರ್‌ ಸಿಂಗ್‌ (32), ಪವನ್‌ ಗುಪ್ತಾ (25), ವಿನಯ್‌ ಶರ್ಮಾ (26) ಹಾಗೂ ಅಕ್ಷಯ್‌ ಕುಮಾರ್‌ ಸಿಂಗ್‌ (31) ಅವರನ್ನು ಗಲ್ಲಿಗೇರಿಸಬೇಕಿದೆ.

Comments are closed.