ಅಂತರಾಷ್ಟ್ರೀಯ

ಕೊರೊನಾ ವೈರಸ್ ಗೆ ಹುಬೇ ಪ್ರಾಂತ್ಯದಲ್ಲಿ 93 ಜನರ ಸಾವು: ಸತ್ತವರ ಸಂಖ್ಯೆ 1900ಕ್ಕೆ ಏರಿಕೆ

Pinterest LinkedIn Tumblr


ಬೀಜಿಂಗ್: ಮಾರಣಾಂತಿಕ ಕೊರೊನಾ ವೈರಸ್ ಗೆ ಬಲಿಯಾದವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಚೀನಾದಲ್ಲಿ ಇದುವರೆಗೆ ಒಟ್ಟು 1900 ಮಂದಿ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ.

ಸೋಮವಾರ ಸಾವಿನ ಸಂಖ್ಯೆ 1789ರಷ್ಟಿತ್ತು. ಆದರೆ ಇದು ಮತ್ತಷ್ಟು ಏರಿಕೆಯಾಗಿದೆ ಎಂದು ಚೀನಾದ ಆರೋಗ್ಯ ಇಲಾಖೆ ಖಚಿತಪಡಿಸಿದೆ.

ಮೊತ್ತ ಮೊದಲು ವೈರಸ್ ಪತ್ತೆಯಾದ ಚೀನಾದ ಹುಬೇ ಪ್ರಾಂತ್ಯದಲ್ಲಿ ಸೋಮವಾರ 93 ಜನರು ಸಾವನ್ನಪ್ಪುತ್ತಿದ್ದಾರೆ. ಚೀನಾದಲ್ಲಿ ಮತ್ತಷ್ಟು ಜನರಿಗೆ ಕೊರೊನಾ ವೈರಸ್ ಮಾರಿ ತಗುಲಿದ್ದು, ಸಾವಿನ ಪ್ರಮಾಣ ಇನ್ನೂ ಹೆಚ್ಚುವ ಸಂಭವವಿದೆ.

Comments are closed.