ಅಂತರಾಷ್ಟ್ರೀಯ

ಇಂಡಿಯಾದ ರಹಸ್ಯ ದೋಚಿದ ಅಮೆರಿಕ; ವಾಷಿಂಗ್ಟನ್‌ ಪೋಸ್ಟ್‌, ಝಡ್‌.ಡಿ.ಎಫ್.ನ ಜಂಟಿ ವರದಿಯಲ್ಲಿ ಸ್ಫೋಟಕ ಮಾಹಿತಿ

Pinterest LinkedIn Tumblr


ವಾಷಿಂಗ್ಟನ್‌: ಅನೇಕ ವರ್ಷಗಳಿಂದ ಅಮೆರಿಕದ ಸೆಂಟ್ರಲ್‌ ಇಂಟೆಲಿಜೆನ್ಸ್‌ ಏಜೆನ್ಸಿ (ಸಿಐಎ), ಭಾರತ ಸಹಿತ ಜಗತ್ತಿನ ನಾನಾ ರಾಷ್ಟ್ರಗಳ ಸೇನೆ, ಗೂಢಚರ್ಯೆ, ಹಣಕಾಸು ಇತ್ಯಾದಿ ಕ್ಷೇತ್ರಗಳಿಗೆ ಸಂಬಂಧಿಸಿದ ಅತ್ಯಂತ ಮಹತ್ವದ ರಹಸ್ಯಗಳನ್ನು ಕದ್ದು ಸಂಗ್ರಹಿಸಿದೆ ಎಂಬ ಆಘಾತಕಾರಿ ವಿಚಾರ ಈಗ ಬಹಿರಂಗವಾಗಿದೆ. ಅಮೆರಿಕದ “ದ ವಾಷಿಂಗ್ಟನ್‌ ಪೋಸ್ಟ್‌’ ಹಾಗೂ ಜರ್ಮನಿಯ ಬಾನುಲಿ ಕೇಂದ್ರ ‘ಝಡ್‌ಡಿಎಫ್’ ಸಂಸ್ಥೆಗಳು ಜಂಟಿಯಾಗಿ ನೀಡಿರುವ ವರದಿಯಲ್ಲಿ ಈ ಸ್ಫೋಟಕ ವಿಷಯವನ್ನು ಬಹಿರಂಗಗೊಳಿಸಿವೆ.

ಇದೊಂದು ಮಹಾ ಹಗರಣ!: 1952ರಲ್ಲಿ ಸ್ವಿಟ್ಸರ್ಲಂಡ್‌ನ‌ಲ್ಲಿ ಕ್ರಿಪ್ಟೋ ಎ.ಜಿ. ಎಂಬ ಮಾಹಿತಿ ಮತ್ತು ದಾಖಲೆಗಳ ಸಂರಕ್ಷಣಾ ಸಂಸ್ಥೆಯೊಂದು ಹುಟ್ಟಿದ್ದು, ಅದರಲ್ಲಿ ಇರಿಸಲಾಗುವ ದಾಖಲೆಗಳು ಅಥವಾ ದತ್ತಾಂಶಗಳು ಅತ್ಯಂತ ರಹಸ್ಯವಾಗಿ, ಸುರಕ್ಷಿತವಾಗಿರುತ್ತವೆ ಎಂಬ ಪ್ರತೀತಿ ಬೆಳೆದಿದ್ದರಿಂದ ಜಗತ್ತಿನ ಅನೇಕ ರಾಷ್ಟ್ರಗಳು ತಮ್ಮ ರಹಸ್ಯ ದಾಖಲೆಗಳನ್ನು ಅಲ್ಲಿ ಇಟ್ಟಿದ್ದವು.

ಆದರೆ, 1951ರಲ್ಲೇ ಕ್ರಿಪ್ಟೋ ಎ.ಜಿ. ಸಂಸ್ಥೆ ಸಂಸ್ಥಾಪಕರು, ಸಿಐಎ ಜತೆಗೆ ರಹಸ್ಯ ಒಪ್ಪಂದ ಮಾಡಿಕೊಂಡು ಭಾರತ, ಪಾಕಿಸ್ಥಾನ, ಇರಾನ್‌, ಲ್ಯಾಟಿನ್‌ ಅಮೆರಿಕ, ವ್ಯಾಟಿಕನ್‌ ಸಿಟಿ ಸೇರಿದಂತೆ ಅನೇಕ ರಾಷ್ಟ್ರಗಳ ಅನೇಕ ದಾಖಲೆಗಳನ್ನು ಅಮೆರಿಕಕ್ಕೆ ನೀಡಿದೆ. ಹಾಗಾಗಿ, ಅಮೆರಿಕ ಸರಕಾರ ಸುಮಾರು ಅರ್ಧ ಶತಮಾನದವರೆಗೆ ಅನೇಕ ದೇಶಗಳ ಗೌಪ್ಯ ಮಾಹಿತಿಯನ್ನು, ಹಣವನ್ನು ಲೂಟಿ ಹೊಡೆದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಈ ವರದಿಯ ಬಗ್ಗೆ ಸದ್ಯಕ್ಕೆ ಭಾರತ ಸರಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Comments are closed.