ಅಂತರಾಷ್ಟ್ರೀಯ

1000 ಗಡಿದಾಟಿದ ಕೊರೊನಾ ಸಾವಿನ ಸಂಖ್ಯೆ

Pinterest LinkedIn Tumblr


ಚೀನಾ: ಮಾರಾಣಾಂತಿಕ ಕೊರೋನಾ ವೈರಸ್ ಚೀನಾವನ್ನು ಅಕ್ಷರಶಃ ನಲುಗಿಸಿದ್ದು, ಸೋಮವಾರ ಒಂದೇ ದಿನ ಬಲಿಯಾದವರ ಸಂಖ್ಯೆ 100ರ ಗಡಿ ದಾಟಿದೆ. ಪರಿಣಾಮವಾಗಿ ಒಟ್ಟು ಮೃತರಾದವರ ಸಂಖ್ಯೆ 1016ಕ್ಕೆ ಏರಿದೆ.

ಚೀನಾದಲ್ಲಿ ಕೊರೊನಾ ವೈರಸ್ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇತರೆ ದೇಶಗಳಿಗೂ ಈ ವೈರಸ್ ಹರಡುತ್ತಿದೆ. ಈ ಕುರಿತು ವಿಷಾಧ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ, “ಕೊರೊನಾ ವೈರಸ್ ಮನುಕುಲಕ್ಕೆ ಸವಾಲಾಗಿದ್ದು, ಬೆಂಕಿ ಕಿಡಿಯಂತೆ ಎಲ್ಲೆಡೆ ವ್ಯಾಪಿಸುತ್ತಿದೆ. ಇದರಿಂದ ಶೀಘ್ರದಲ್ಲೇ ಮಾನವ ಜನಾಂಗ ಹೊರ ಬರಬೇಕು” ಎಂದು ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳ ಪ್ರಕಾರ ಚೀನಾದಲ್ಲಿ ಈವರೆಗೆ 42,634 ಜನರಿಲ್ಲಿ ಕರೋನಾ ವೈರಸ್ ಕಾಣಿಸಿಕೊಂಡಿದೆ. ಅಲ್ಲದೆ, ಚೀನಾ ಹೊರತಾಗಿ ಇತರೆ 24 ದೇಶಗಳಲ್ಲಿ ಸುಮಾರು 319 ಪ್ರಕರಣಗಳು ದಾಖಲಾಗಿವೆ.

ಇದರ ನಡುವೆಯೇ ಚೀನಾ ಅಧ್ಯಕ್ಷ ಕ್ಷಿ ಚಿನ್ ಪಿಂಗ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ವಿಶ್ವ ಶೇರುಪೇಟೆಯಲ್ಲಿ ಚೀನಾದ ಪ್ರಮುಖ ಕಂಪೆನಿಗಳ ಷೇರಿನ ಮೌಲ್ಯ ಪಾತಾಳಕ್ಕೆ ಕುಸಿಯುತ್ತಿವೆ. ಅಲ್ಲದೆ, ಡಾಲರ್ ಮತ್ತು ಯೂರೋ ಎದುರಿನ ಚೀನಾದ ಹಣ ದಾಖಲೆಯ ಪ್ರಮಾಣದಲ್ಲಿ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿರುವುದು ಅಲ್ಲಿನ ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ.

Comments are closed.