
ಜೈಪುರ: ಯುವತಿ ಜೊತೆ ಟಿಕ್‍ಟಾಕ್ ಮಾಡಿ ವಿಡಿಯೋ ಅಪ್ಲೋಡ್ ಮಾಡಿದ್ದಕ್ಕೆ ಗ್ರಾಮಸ್ಥರು ಅಪ್ರಾಪ್ತನನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ತನ್ನ ಸಹೋದರಿ ಜೊತೆ ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಮೂವರು ಆರೋಪಿಗಳು ಅಪ್ರಾಪ್ತನನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿದ್ದಾರೆ. ಅಲ್ಲದೆ ಬಾಲಕನ ಬೆಲ್ಟ್ ನಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಬಾಲಕನ ವಿಡಿಯೋ ಕೂಡ ಸೆರೆ ಹಿಡಿಯಲಾಗಿದ್ದು, ಅದರಲ್ಲಿ ಆರೋಪಿಗಳು ಅಪ್ರಾಪ್ತನನ್ನು ಬಲವಂತವಾಗಿ ಮೆರವಣಿಗೆ ಮಾಡಿಸಿರುವುದು ಕಂಡು ಬಂದಿದೆ.
ಅಪ್ರಾಪ್ತ ಕ್ಷಮೆ ಕೇಳುತ್ತಿದ್ದರೂ ಆರೋಪಿಗಳು ಆತನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೆ ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಈಗ ನೀನು ಬುದ್ಧ ಕಲಿಯುತ್ತಿದ್ದೀಯಾ ಎಂದು ವಿಡಿಯೋದಲ್ಲಿ ಆರೋಪಿಗಳು ಬಾಲಕನಿಗೆ ಹೇಳುತ್ತಿದ್ದಾರೆ.
ಈ ಬಗ್ಗೆ ಅಪ್ರಾಪ್ತನ ಪೋಷಕರು ಪ್ರತಿಕ್ರಿಯಿಸಿ, ಈ ಘಟನೆಯಿಂದ ನಮ್ಮ ಮಗ ತುಂಬಾ ಹೆದರಿಕೊಂಡು ಮನೆಗೆ ಓಡಿ ಬಂದಿದ್ದಾನೆ. ಮೂವರು ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಪೊಲೀಸರು ಆರೋಪಿಗಳ ವಿರುದ್ಧ ಐಟಿ ಆ್ಯಕ್ಟ್ ಹಾಗೂ ಇತರ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದರು ಹೇಳಿದ್ದಾರೆ.
ಅಪ್ರಾಪ್ತನ ಪೋಷಕರು ದೂರು ದಾಖಲಿಸಿದ ನಂತರ ಯುವತಿಯ ಪೋಷಕರು ಕೂಡ ಮೂವರು ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಅಪ್ರಾಪ್ತನನ್ನು ನಗ್ನವಾಗಿ ಮೆರವಣಿಗೆ ಮಾಡಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ವಿಡಿಯೋ ಮಾಡಿದ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Comments are closed.