ಅಂತರಾಷ್ಟ್ರೀಯ

ಚೀನಾದಲ್ಲಿ ಕೊರೊನಾ ವೈರಸ್ ಗೆ ಅಮೇರಿಕಾ ಪ್ರಜೆ ಬಲಿ

Pinterest LinkedIn Tumblr


ಬೀಜಿಂಗ್ ( ಚೀನಾ): ಚೀನಾದಲ್ಲಿ ಕೊರೊನಾ ವೈರಸ್ ಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಲ್ಲಿನ ವುಹಾನ್ ನಗರದಲ್ಲಿ ಅಮೇರಿಕಾ ಪ್ರಜೆಯೋರ್ವ ಕೊರೊನಾ ವೈರಸ್ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಫೆಬ್ರವರಿ ಆರರಂದು 60 ವರ್ಷದ ಅಮೇರಿಕಾ ಪ್ರಜೆ ಕೊರೊನಾ ವೈರಸ್ ಕಾರಣದಿಂದ ವುಹಾನ್ ನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ರಾಯಭಾರ ಕಚೇರಿ ಖಚಿತಪಡಿಸಿರುವುದಾಗಿ ಎಎಫ್ ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಚೀನಾದಲ್ಲಿ ಇದುವರೆಗೆ ಒಟ್ಟು 722 ಜನರು ಕೊರೊನಾ ವೈರಸ್ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಒಟ್ಟು 34,546 ಜನರು ಚೀನಾದಲ್ಲಿ ಕೊರೊನಾ ವೈರಸ್ ಗೆ ತುತ್ತಾಗಿದ್ದಾರೆ ಎನ್ನಲಾಗಿದೆ.

ಚೀನಾದ ವುಹಾನ್ ನಗರಲ್ಲಿ ಮೊದಲು ಕೊರೊನಾ ವೈರಸ್ ಪತ್ತೆಯಾಗಿತ್ತು.

Comments are closed.