
ಜೈಪುರ: ತಲೆಗೆ ಪಂಚ್ ಮಾಡುವ ಮೂಲಕ ಕಾಶ್ಮೀರಿ ಯುವಕನನ್ನು ಕೊಲೆ ಮಾಡಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಬಾಸಿತ್ ಅಲಿಯಾಸ್ ಮೊಯ್ದಿನ್ ಖಾನ್ ಕೊಲೆಯಾದ ಯುವಕ. ಕ್ಷುಲ್ಲಕ ಕಾರಣಕ್ಕೆ ಬಾಸಿತ್ ಹಾಗೂ ಆತನ ಸಹದ್ಯೋಗಿ ಆದಿತ್ಯ ನಡುವೆ ವಾಗ್ವಾದ ನಡೆದು ಪರಸ್ಪರ ಹಲ್ಲೆ ಮಾಡಿದ್ದರು. ಹಲ್ಲೆ ಮಾಡುವ ವೇಳೆ ಬಾಸಿತ್ ತಲೆಗೆ ಆದಿತ್ಯ ಪಂಚ್ ಮಾಡಿದ್ದಾನೆ. ಪರಿಣಾಮ ಬಾಸಿತ್ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದನು. ತಕ್ಷಣ ಆತನನ್ನು ಸವಾಯು ಮಾನಸಿಂಗ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಸಿತ್ ಮೃತಪಟ್ಟಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಕಮೀಶನರ್ ಅಶೋಕ್ ಕುಮಾರ್ ಗುಪ್ತಾ, ಬಾಸಿತ್ ಕಾಶ್ಮೀರದ ಕುಪ್ವಾಡಾ ಜಿಲ್ಲೆಯವನಾಗಿದ್ದು, ಜೈಪುರದಲ್ಲಿ ಬೇರೆ ಯುವಕರ ಜೊತೆ ಕ್ಯಾಟರಿಂಗ್ ಸ್ಟಾಫ್ ಕೆಲಸ ಮಾಡುತ್ತಿದ್ದನು. ಫೆ. 4ರಂದು ಹರ್‍ಮಾಡದ ಮೈರಿಜ್ ಗಾರ್ಡನ್‍ನಲ್ಲಿ ಕೆಲಸ ಮಾಡಲು ಬಾಸಿತ್ ಹಾಗೂ ಆದಿತ್ಯ ಹೋಗಿದ್ದರು. ಕೆಲಸ ಮುಗಿಸಿ ಹಿಂದಿರುಗುವಾಗ ವಾಹನದಲ್ಲಿ ಕೂರುವ ವಿಷಯಕ್ಕೆ ಸಂಬಂಧಿಸಿದಂತೆ ಬಾಸಿತ್ ಹಾಗೂ ಆದಿತ್ಯ ನಡುವೆ ವಾಗ್ವಾದ ನಡೆಯಿತು. ಬಳಿಕ ನೋಡನೋಡುತ್ತಿದ್ದಂತೆ ಇಬ್ಬರು ಹೊಡೆದಾಡಿಕೊಂಡಿದ್ದಾರೆ ಎಂದರು.
ಈ ಘಟನೆಯಲ್ಲಿ ಬಾಸಿತ್‍ಗೆ ಗಂಭೀರವಾಗಿ ಗಾಯಗೊಂಡ ಬಾಸಿತ್‍ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಬಾಸಿತ್ ಮೃತಪಟ್ಟಿದ್ದಾನೆ. ಹಲ್ಲೆ ನಡೆದ ನಂತರ ಬಾಸಿತ್ ಸ್ನೇಹಿತೆ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದು, ಪೊಲೀಸರು ಆರೋಪಿ ಆದಿತ್ಯನನ್ನು ಬಂಧಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆದ ನಂತರ ಬಾಸಿತ್ ಮೃತದೇಹವನ್ನು ಕಾಶ್ಮೀರಕ್ಕೆ ರವಾನಿಸಲಾಯಿತು ಎಂದು ಪೊಲೀಸ್ ಕಮೀಶನರ್ ಅಶೋಕ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ಥಳದಲ್ಲಿದ್ದ ಜನರ ವಿಚಾರಣೆ ನಡೆಸಿದ್ದಾರೆ.
Comments are closed.