ಅಂತರಾಷ್ಟ್ರೀಯ

ಕರೋನಾ ವೈರಸ್: ಮೃತರ ಸಂಖ್ಯೆ 304ಕ್ಕೆ ಏರಿಕೆ, 14000ಕ್ಕೇರಿದ ಸೋಂಕಿತರ ಸಂಖ್ಯೆ

Pinterest LinkedIn Tumblr


ಬೀಜಿಂಗ್: ಚೀನಾದಲ್ಲಿ ಕರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಈ ವರೆಗೂ ಮಾರಣಾಂತಿಕ ವೈರಸ್ ದಾಳಿಗೆ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 304ಕ್ಕೆ ಏರಿಕೆಯಾಗಿದೆ.

ಈ ಕುರಿತಂತೆ ಚೀನಾ ಸರ್ಕಾರ ಮಾಹಿತಿ ನೀಡಿದ್ದು, ಶನಿವಾರ ಒಂದೇ ದಿನದಲ್ಲಿ ಕರೋನಾ ವೈರಸ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ 45 ಮಂದಿ ಸಾವನ್ನಪ್ಪಿದ್ದಾರೆ. ಆ ಮೂಲಕ ವೈರಸ್ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದವರ ಸಂಖ್ಯೆ 304ಕ್ಕೆ ಏರಿಕೆಯಾಗಿದೆ.

ಅಂತೆಯೇ ಈ ವರೆಗೂ ಈ ಮಾರಣಾಂತಿಕ ಸೋಂಕಿಗೆ ತುತ್ತಾದವರ ಸಂಖ್ಯೆ ಕೂಡ 14000 ಕ್ಕೆ ಏರಿಕೆಯಾಗಿದ್ದು ಸಮರೋಪಾದಿಯಲ್ಲಿ ಮುಂಜಾಗ್ರತಾ ಕ್ರಮ ನಡೆಸಲಾಗುತ್ತಿದೆ. ವೈರಸ್ ಕೊಲ್ಲುವ ನಾಶಕಗಳನ್ನು ಚೀನಾದ ಪ್ರಮುಖ ನಗರಗಳಾದ್ಯಂತ ಸಿಂಪಡಿಸಲಾಗುತ್ತಿದ್ದು, ವೈರಸ್ ಅನ್ನು ಹತೋಟಿಗೆ ತರಲು ವಿಜ್ಞಾನಿಗಳು ಇನ್ನಿಲ್ಲದಂತೆ ಶ್ರಮಿಸುತ್ತಿದ್ದಾರೆ.

Comments are closed.