ಅಂತರಾಷ್ಟ್ರೀಯ

ಮಿಡತೆ ದಾಳಿ: ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಪಾಕ್

Pinterest LinkedIn Tumblr


ಇಸ್ಲಾಮಾಬಾದ್: ಮಿಡತೆ ದಾಳಿಗೆ ತತ್ತರಿಸಿರುವ ಪಾಕಿಸ್ತಾನ, ಪಂಜಾಬ್ ಪ್ರಾಂತ್ಯದಲ್ಲಿ ಭಾರಿ ಪ್ರಮಾಣದಲ್ಲಿ ಬೆಳೆ ಹಾನಿಯುಂಟು ಮಾಡುತ್ತಿರುವ ಕೀಟಗಳನ್ನು ನಿಯಂತ್ರಿಸಲು ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದೆ.

ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲದೆ ಈ ಬಿಕ್ಕಟ್ಟಿನಿಂದ ಹೊರಬರಲು 7.3 ಬಿಲಿಯನ್ ಮೊತ್ತದ ರಾಷ್ಟ್ರೀಯ ಕ್ರಿಯಾ ಯೋಜನೆ (ಎನ್‌ಎಪಿ)ಗೆ ಅನುಮೋದನೆ ನೀಡಿದೆ.

ಈ ಸಭೆಯಲ್ಲಿ ಫೆಡರಲ್ ಮಂತ್ರಿಗಳು ಹಾಗೂ ನಾಲ್ಕು ಪ್ರಾಂತ್ಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ರಾಷ್ಟ್ರೀಯ ಆಹಾರ ಭದ್ರತಾ ಸಚಿವ ಖುಸ್ರೋ ಬಕ್ತಿಯಾರ್ ಅವರು, ಗೋಧಿ ಸೇರಿದಂತೆ ಹಲವು ಬೆಳೆಗಳನ್ನು ನಾಶಮಾಡುತ್ತಿರುವ ಮಿಡತೆಗಳನ್ನು ನಿಯಂತ್ರಿಸಲು ಫೆಡರಲ್ ಸರ್ಕಾರ ಮತ್ತು ಪ್ರಾಂತೀಯ ಸರ್ಕಾರಗಳು ತೆಗೆದುಕೊಂಡ ಕ್ರಮಗಳ ಬಗ್ಗೆ ಸಂಸತ್ತಿಗೆ ತಿಳಿಸಿದರು ಎಂದು ಡಾನ್ ದಿನಪತ್ರಿಕೆ ವರದಿ ಮಾಡಿದೆ.

ರೈತರ ರಕ್ಷಣೆ ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ರಾಷ್ಟ್ರೀಯ ಬೆಳೆಗಳನ್ನು ಉಳಿಸಲು ಮತ್ತುಅಗತ್ಯವಾದ ಸಂಪನ್ಮೂಲಗಳನ್ನು ಒದಗಿಸಲು ಫೆಡರಲ್ ಸರ್ಕಾರವು ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪ್ರಧಾನಿ ಇಮ್ರಾನ್ ಖಾನ್ ಸೂಚಿಸಿರುವುದಾಗಿ ವರದಿ ಮಾಡಲಾಗಿದೆ.

Comments are closed.