ಅಂತರಾಷ್ಟ್ರೀಯ

ಪೆರೋಲ್ ಮೂಲಕ ಜೈಲಿನಿಂದ ಬಂದು ಅಪ್ರಾಪ್ತೆಯ ಅತ್ಯಾಚಾರ: ವಿಡಿಯೋ ಮಾಡಿ, ದೇವರು ನನ್ನ ಕ್ಷಮಿಸುವನು ಎಂದ

Pinterest LinkedIn Tumblr


ವಾಷಿಂಗ್ಟನ್: ಕಾಮುಕನೊಬ್ಬ ಪೆರೋಲ್ ಮೂಲಕ ಜೈಲಿನಿಂದ ಹೊರ ಬಂದು ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಅದನ್ನು ವಿಡಿಯೋ ಮಾಡಿಕೊಂಡು ವಿಕೃತಿ ಮರೆದಿರುವ ಘಟನೆ ಉತಾಹ್‍ನ ವೆಸ್ಟ್ ವ್ಯಾಲಿ ಸಿಟಿಯಲ್ಲಿ ನಡೆದಿದೆ.

ಆರೋಪಿಯನ್ನು ಕ್ರೀಡ್ ಕೋಲ್ ಲುಜಾನ್ (43) ಎಂದು ಗುರುತಿಸಲಾಗಿದೆ. ಈತ ಕೊಲೆ ಪ್ರಯತ್ನ ಮಾಡಿದ್ದರಿಂದ ಜೈಲಿಗೆ ಹೋಗಿದ್ದನು. ಆದರೆ ಇತ್ತೀಚೆಗೆ ಪೆರೋಲ್‍ನಲ್ಲಿ ಜೈಲಿನಿಂದ ಹೊರ ಬಂದಿದ್ದನು. ಆದರೆ ಜೈಲಿನಿಂದ ಹೊರಬಂದ ಕೂಡಲೇ ಆರೋಪಿ ಅಪ್ರಾಪ್ತ ಬಾಲಕಿಯನ್ನು ಹಾಡಹಗಲೇ ಅಪಹರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಅದನ್ನು ವಿಡಿಯೋ ಮಾಡಿಕೊಂಡು ‘ದೇವರು ನನ್ನನ್ನು ಕ್ಷಮಿಸುವನು’ ಎಂದು ಬಾಲಕಿಗೆ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?
ಜನವರಿ 27 ರಂದು 15 ವರ್ಷದ ಬಾಲಕಿ ಮಧ್ಯಾಹ್ನ 2.15ಕ್ಕೆ ಶಾಲೆಯ ಬಳಿ ನಡೆದುಕೊಂಡು ಹೋಗುತ್ತಿದ್ದಳು. ಅದೇ ಸಮಯದಲ್ಲಿ ಆರೋಪಿ ಲುಜಾನ್ ಬಾಲಕಿಯನ್ನು ಬಲವಂತವಾಗಿ ತನ್ನ ಕಾರಿನ ಬಳಿ ಎಳೆದುಕೊಂಡು ಹೋಗಿದ್ದಾನೆ. ನಂತರ ಆರೋಪಿ ಬಾಲಕಿಗೆ ಚಾಕು ತೋರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಅಲ್ಲಿಂದ ಅಪಹರಿಸಿದ್ದಾನೆ. ಆರೋಪಿ ಕಾರಿನ ಮುಂಭಾಗದ ಸೀಟಿನ ಕೆಳಗೆ ಬಾಲಕಿಯ ಕೈ-ಕಾಲನ್ನ ಕಟ್ಟಿ ಕಿಡ್ನಾಪ್ ಮಾಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ನಡೆದ ಒಂದು ಗಂಟೆಯಲ್ಲೇ ತಾಯಿ ತನ್ನ ಮಗಳು ಮನೆಯಿಂದ ಶಾಲೆಗೆ ಹೋಗಿದ್ದಾಳೆ. ಆದರೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಆ ಪ್ರದೇಶ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿದ್ದಾರೆ. ಆಗ ವ್ಯಕ್ತಿಯೊಬ್ಬ ಬಾಲಕಿಯನ್ನು ತನ್ನ ಕಾರಿನಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಿದ್ದ ವಿಡಿಯೋ ಸೆರೆಯಾಗಿದೆ.

ಪೊಲೀಸರು ಸಂಜೆಯಷ್ಟರಲ್ಲಿ ಬಾಲಕಿಯನ್ನು ಪತ್ತೆ ಮಾಡಿದ್ದಾರೆ. ಆರೋಪಿ ಲುಜನ್ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾನೆ. ಲುಜನ್ ತನ್ನ ಮನೆಗೆ ಕರೆದುಕೊಂಡು ಹೋಗಿ ತಿನ್ನಲು ತಿಂಡಿ ಕೊಟ್ಟಿದ್ದನು. ನಂತರ ಮಧ್ಯಾಹ್ನ 3 ಗಂಟೆಯೊಳಗೆ ಮನೆಗೆ ಕಳುಹಿಸುವುದಾಗಿ ಹೇಳಿದ್ದನು. ನಂತರ ನನ್ನ ಮೇಲೆ ಅತ್ಯಾಚಾರ ಎಸಗಿ ಅದನ್ನು ವಿಡಿಯೋ ಮಾಡಿಕೊಂಡನು. ಕೊನೆಯಲ್ಲಿ ‘ದೇವರು ತನ್ನನ್ನು ಕ್ಷಮಿಸುವವನು’ ಎಂದು ಹೇಳಿರುವುದಾಗಿ ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾಳೆ.

ಸದ್ಯಕ್ಕೆ ಪೊಲೀಸರು ಲುಜಾನ್ ನನ್ನು ಬಂಧಿಸಿದ್ದು, ಕಿಡ್ನಾಪ್, ಲೈಂಗಿಕ ಕಿರುಕುಳ ಸೇರಿದಂತೆ ಅನೇಕ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಹಿಂದೆ ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ 3ನೇ ಜಿಲ್ಲಾ ನ್ಯಾಯಾಲಯವು ಲುಜನ್‍ಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

Comments are closed.