ಅಂತರಾಷ್ಟ್ರೀಯ

ಮದ್ಯಪಾನ ಮಾಡಿಸಿ ಅನೇಕ ವಿದ್ಯಾರ್ಥಿಗಳೊಂದಿಗೆ ಪ್ರೌಢ ಶಾಲೆಯ ಶಿಕ್ಷಕಿ ಸೆಕ್ಸ್

Pinterest LinkedIn Tumblr


ಅಟ್ಲಾಂಟಾ: ಶಾಲೆಯ ಮಾಜಿ ಉದ್ಯೋಗಿಯೊಬ್ಬಳು ಅನೇಕ ವಿದ್ಯಾರ್ಥಿಗಳೊಂದಿಗೆ ಸೆಕ್ಸ್ ಮಾಡಿದಲ್ಲದೇ ಅವರಿಗೆ ಮದ್ಯಪಾನ ಮಾಡಿಸಿರುವ ಘಟನೆ ಅಮೆರಿಕದ ಅಟ್ಲಾಂಟಾನಲ್ಲಿ ನಡೆದಿದೆ.

ಆರೋಪಿಯನ್ನು ಬೆತ್ಲೆಹೆಮ್ ನಿವಾಸಿ ಹೀದರ್ ಕಿಶುನ್ (35) ಎಂದು ಗುರುತಿಸಲಾಗಿದೆ. ಈಕೆ ಜಾರ್ಜಿಯಾ ಪ್ರೌಢ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದಳು. ಈಕೆ ಅನೇಕ ವಿದ್ಯಾರ್ಥಿಗಳೊಂದಿಗೆ ಸೆಕ್ಸ್ ಮಾಡಿದ್ದಾಳೆ. ಅಲ್ಲದೇ ಅವರಿಗೆ ಮದ್ಯಪಾನ ಕೂಡ ಮಾಡಿಸಿದ್ದಾಳೆ. ಹೀಗಾಗಿ ಈಕೆಯ ಮೇಲೆ ಅಪ್ರಾಪ್ತ ಮಕ್ಕಳಿಗೆ ಕಿರುಕುಳ, ಮದ್ಯಪಾನ ಮಾಡಿಸಿದ ಪ್ರಕರಣ ಸೇರಿದಂತೆ ಅನೇಕ ಕೇಸ್‍ಗಳು ದಾಖಲಾಗಿವೆ.

ಸ್ಥಳೀಯ ಶಾಲೆಯ ವಿದ್ಯಾರ್ಥಿಗಳ ಜೊತೆ ತನ್ನ ಮನೆಯಲ್ಲಿ ಇದ್ದಾಗಲೇ ಆರೋಪಿ ಕಿಶುನ್‍ನನ್ನು ಕಳೆದ ಶುಕ್ರವಾರ ಬಂಧಿಸಲಾಗಿದೆ. ಈಕೆ ಜಾರ್ಜಿಯಾ ಪ್ರೌಢ ಶಾಲೆಯಲ್ಲಿ ಪ್ಯಾರಾ ಪ್ರೊಫೆಷನಲ್ ಆಗಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.

ಆರೋಪಿ ಕಿಶುನ್ ಅನೇಕ ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಳೆ. ಅಲ್ಲದೇ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿ ಮದ್ಯಪಾನ ಮಾಡಿಸಿದ್ದಾಳೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಿಶುನ್ ಈ ಘಟನೆಯ ಸಮಯದಲ್ಲಿ ಬ್ಯಾರೊ ಕೌಂಟಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಅವಳು ಕೆಲಸ ಮಾಡಿದ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಳೆ ಎಂಬುದರ ಬಗ್ಗೆ ಮಾಹಿತಿ ದೊರೆತಿಲ್ಲ. ಆರೋಪಿಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಈ ಹಿಂದೆ ಕಿಶುನ್ ಗ್ವಿನ್ನೆಟ್ ಕೌಂಟಿ ಸಾರ್ವಜನಿಕ ಶಾಲೆಗಳಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು ಎಂದು ಅಧಿಕಾರಿ ತಿಳಿಸಿದ್ದಾರೆ.

ಪೊಲೀಸರು ಆರೋಪಿ ಕಿಶುನ್‍ನನ್ನು ಶುಕ್ರವಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅಲ್ಲಿ ಆಕೆಯ ಜಾಮೀನು ಅರ್ಜಿಯನ್ನು ನಿರಾಕರಿಸಲಾಗಿದೆ. ಸದ್ಯಕ್ಕೆ ಆಕೆಯನ್ನು ಬ್ಯಾರೊ ಕೌಂಟಿ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ.

Comments are closed.