ಅಂತರಾಷ್ಟ್ರೀಯ

ನೀರು ಉಳಿತಾಯಕ್ಕೆ ಹೆಲಿಕಾಪ್ಟರ್ ಕಾರ್ಯಾಚರಣೆಯಲ್ಲಿ 5 ಸಾವಿರ ಒಂಟೆಗಳ ಹತ್ಯೆ

Pinterest LinkedIn Tumblr


ಕ್ಯಾನ್ ಬೆರ್ರಾ: ಬಿರುಬೇಸಿಗೆಗೆ ಆವರಿಸಿರುವ ಆಸ್ಟ್ರೇಲಿಯಾದಲ್ಲಿ ನೀರಿನ ಅಭಾವ ಮತ್ತು ಕಾಳ್ಗಿಚ್ಚು ನಂದಿಸಲು ಬೇಕಾದ ನೀರನ್ನು ಉಳಿಸುವ ನಿಟ್ಟಿನಲ್ಲಿ ಆಸ್ಟ್ರೇಲಿಯಾ ಸರ್ಕಾರ ಕೈಗೊಂಡಿದ್ದ ಐದು ದಿನಗಳ ಹೆಲಿಕಾಪ್ಟರ್ ಕಾರ್ಯಾಚರಣೆಯಲ್ಲಿ ಐದು ಸಾವಿರ ಒಂಟೆಗಳನ್ನು ಕೊಲ್ಲಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ದಕ್ಷಿಣ ಆಸ್ಟ್ರೇಲಿಯಾದ ಬುಡಕಟ್ಟು ಮುಖಂಡರ ಹೇಳಿಕೆ ಪ್ರಕಾರ, ಬರಗಾಲ ಮತ್ತು ಅತೀಯಾದ ಬೇಸಿಗೆಯಿಂದಾಗಿ ಸಾವಿರಾರು ಒಂಟೆಗಳು ಗ್ರಾಮೀಣ ಜನವಸತಿಯತ್ತ ಆಗಮಿಸಿ ನೀರು ಮತ್ತು ಆಹಾರಕ್ಕಾಗಿ ಹುಡುಕಾಡುತ್ತಿದ್ದು, ಇದರಿಂದಾಗಿ ಮೂಲಭೂತ ಸೌಕರ್ಯಗಳೆಲ್ಲಾ ಹಾಳಾಗಿ ಹೋಗಿದೆ ಎಂದು ದೂರಿದ್ದಾರೆ.

ಮೂಲನಿವಾಸಿಗಳು ವಾಸಿಸುವ ಎಪಿವೈ ಲ್ಯಾಂಡ್ಸ್ ನಲ್ಲಿ ಜನರು ಒಂಟೆಗಳ ಹಾವಳಿಯಿಂದ ತತ್ತರಿಸಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಐದು ದಿನಗಳ ಹೆಲಿಕಾಪ್ಟರ್ ಕಾರ್ಯಾಚರಣೆಯಲ್ಲಿ ಹತ್ತು ಸಾವಿರ ಒಂಟೆಗಳ ಹತ್ಯೆಗೆ ಸರ್ಕಾರ ಮುಂದಾಗಿರುವುದಾಗಿ ಈ ಮೊದಲು ವರದಿ ತಿಳಿಸಿತ್ತು.

ಮೂಲನಿವಾಸಿಗಳು ವಾಸಿಸುವ ಸ್ಥಳದಲ್ಲಿನ ನೀರನ್ನು ಉಳಿಸಬೇಕಾದ ಅಗತ್ಯ ಹೆಚ್ಚಿತ್ತು. ಮಕ್ಕಳು, ಪುರುಷರು, ಹೆಂಗಸರು ಸೇರಿದಂತೆ ಎಲ್ಲರೂ ಬದುಕಬೇಕಾಗಿದೆ. ಅದಕ್ಕೆ ನೀರು, ಬೆಳೆಗಳ ರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಒಂಟೆಗಳ ಹತ್ಯೆಗೆ ಮುಂದಾಗಿರುವುದಾಗಿ ಎಪಿವೈ ಜನರಲ್ ಮ್ಯಾನೇರ್ ರಿಚರ್ಡ್ ಕಿಂಗ್ ತಿಳಿಸಿದ್ದಾರೆ.

Comments are closed.