ಅಂತರಾಷ್ಟ್ರೀಯ

ಗಂಡನನ್ನು ಆತನ ಪ್ರೇಯಸಿಗೇ 1,210 ರೂಪಾಯಿಗೆ ಮಾರಿ ಆ ಹಣವನ್ನು ಪತ್ನಿ ಮಾಡಿದ್ದೇನು ಗೊತ್ತೇ…?

Pinterest LinkedIn Tumblr

ಸುಖ ಸಂಸಾರದಲ್ಲಿ ಮತ್ತೊಬ್ಬಳ ಪ್ರವೇಶವಾದರೆ ಯಾವ ಗೃಹಿಣಿಯೂ ಸುಮ್ಮನಿರುವುದಿಲ್ಲ. ಆರಂಭದಲ್ಲಿ ಪತಿಗೆ ಬುದ್ಧಿ ಹೇಳುತ್ತಾರೆ.. ಒಂದಷ್ಟು ದಿನ ಜಗಳವೂ ಆಗುತ್ತದೆ… ಆಗಲೂ ಗಂಡ ಸರಿದಾರಿಗೆ ಬರದೇ ಇದ್ದರೆ ಕೆಲವರು ಇಬ್ಬರಿಗೂ ಚೆನ್ನಾಗಿ ಥಳಿಸುತ್ತಾರೆ ಅಥವಾ ವಿಚ್ಛೇದನ ಪಡೆಯುತ್ತಾರೆ. ಆದರೆ, ಕೀನ್ಯಾದಲ್ಲಿ ಇಂತಹದ್ದೇ ಪ್ರಕರಣಕ್ಕೆ ವಿಭಿನ್ನ ಟ್ವಿಸ್ಟ್‌ ಸಿಕ್ಕಿದೆ. ಇಲ್ಲಿ ಪತ್ನಿ ವಿಚ್ಛೇದನ ಕೊಟ್ಟಿಲ್ಲ, ಬದಲಾಗಿ ದಾರಿ ತಪ್ಪಿದ ಪತಿ ಇನ್ನು ನನ್ನೊಂದಿಗೆ ಇರುವುದು ಬೇಡ ಎಂದು ಆತನನ್ನು ಪ್ರೇಯಸಿಗೇ ಮಾರಿ ಆ ಹಣದಲ್ಲಿ ಮಕ್ಕಳಿಗೆ ಹೊಸ ವರ್ಷಕ್ಕೆ ಬಟ್ಟೆ ಕೊಂಡಿದ್ದಾರೆ…!

ಕೀನ್ಯಾದ ಎಡ್ನಾ ಮುಕ್ವಾನಾ ಸದ್ಯ ಗಂಡನನ್ನು ಮಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಎಡ್ನಾ ಮುಕ್ವಾನಾ ಪತಿ ಮತ್ತೊಬ್ಬಾಕೆಯ ಪ್ರೀತಿಗೆ ಬಿದ್ದಿದ್ದ. ಹೀಗಾಗಿ, ಈತ ಮನೆಯನ್ನೇ ಮರೆತಿದ್ದ. ಒಂದು ದಿನ ಪತಿ ಮತ್ತು ಆತನ ಪ್ರೇಯಸಿ ತನ್ನ ಮನೆಯಲ್ಲೇ ಎಡ್ನಾ ಮುಕ್ವಾನಾಗೆ ಸಿಕ್ಕಿಬಿದ್ದಿದ್ದರು. ಬಳಿಕ ಈತ ಒಂದು ವಾರ ಮನೆಗೇ ಬಂದಿರಲಿಲ್ಲ. ಈ ಸಂದರ್ಭದಲ್ಲಿ ಎಡ್ನಾ 2,000 ಕೀನ್ಯಾದ ಶಿಲ್ಲಿಂಗ್ ಕೊಟ್ಟು ಗಂಡನನ್ನು ಖರೀದಿಸು ಎಂದು ಪ್ರೇಯಸಿಗೆ ಆಫರ್ ಕೊಟ್ಟಿದ್ದರು. ಇವರು ಸಿಟ್ಟಿನ ಭರದಲ್ಲಿ ಹೀಗೆ ಹೇಳಿದ್ದರಾ? ಅಥವಾ ಪ್ರೇಯಸಿಯ ಕಡೆಯಿಂದ ಇದಕ್ಕೆ ನಿಜವಾಗಿಯೂ ಪ್ರತಿಕ್ರಿಯೆಯನ್ನು ಇವರು ನಿರೀಕ್ಷಿಸಿದ್ದರಾ ಎಂಬುದು ಅಸ್ಪಷ್ಟ. ಆದರೆ, ಎಡ್ನಾ ಕೊಟ್ಟ ಆಫರನ್ನು ಸ್ವೀಕರಿಸಿದ್ದ ಪ್ರೇಯಸಿ ತಕ್ಷಣ 1,700 ಕೀನ್ಯಾದ ಶಿಲ್ಲಿಂಗನ್ನು ಕೊಟ್ಟು ಕಳುಹಿಸಿದ್ದಳು…! ಇದರ ಭಾರತದ ಮೌಲ್ಯ ಸುಮಾರು 1,210.30 ರೂಪಾಯಿ ಆಗುತ್ತದೆ.

ಗಂಡ ಸಂಸಾರದಿಂದ ಬಹುದೂರ ಹೋಗಿ ಆಗಿದೆ. ಇವರನ್ನು ಕರೆದುಕೊಂಡು ಬಂದರೂ ತಿದ್ದುವುದು ಕಷ್ಟ ಸುಲಭವಲ್ಲ. ಹೇಗೂ ಮನೆಗೆ ಬಂದ ಹಣವನ್ನು ಮರಳಿಸುವುದು ಯಾಕೆ…? ಎಂದು ನಿರ್ಧರಿಸಿದ್ದ ಎಡ್ನಾ ಈ ಹಣವನ್ನು ಸ್ವೀಕರಿಸಿದ್ದರು. ಜೊತೆಗೆ, ಇದೇ ಹಣದಲ್ಲಿ ತನ್ನ ಮಕ್ಕಳಿಗೆ ಹೊಸ ಬಟ್ಟೆ ಖರೀದಿಸಿದ್ದರು…!

ತನ್ನ ಈ ನಡೆಯಿಂದಲೇ ಎಡ್ನಾ ಅಂತಾರಾಷ್ಟ್ರೀಯ ಮಾಧ್ಯಮದಲ್ಲೂ ಹೆಡ್‌ಲೈನ್ ಆಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಎಡ್ನಾ, `ನನ್ನ ಗಂಡನನ್ನು ಮರಳಿ ಕರೆದುಕೊಂಡು ಬರುವ ಸಾಧ್ಯತೆ ಇರಲಿಲ್ಲ. ಅದೂ ಅಲ್ಲದೆ, ಹೊಸ ವರ್ಷದಲ್ಲಿ ನಾನು 2019ರ `ತೊಂದರೆ’ಯೊಂದಿಗೆ ಬದುಕುವುದಕ್ಕೂ ಬಯಸಿಲ್ಲ’ ಎಂದು ಹೇಳಿಕೊಂಡಿದ್ದಾರೆ.

Comments are closed.