ಅಂತರಾಷ್ಟ್ರೀಯ

ಇರಾನ್-ಅಮೆರಿಕ ಮಧ್ಯೆ ತೀವ್ರಗೊಂಡ ಸಂಘರ್ಷ: 3ನೇ ಮಹಾಯುದ್ಧ ಆಗಲಿದೆಯೇ?

Pinterest LinkedIn Tumblr


ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಖ್ಯಾತಿಯ ಅಮೆರಿಕಾ ಹಾಗೂ ತೈಲ ಸಂಪದ್ಭರಿತ ರಾಷ್ಟ್ರ ಇರಾನ್ ನಡುವೆ ತೀವ್ರ ಸಂಘರ್ಷ ಎದುರಾಗಿದ್ದು, ಎರಡು ರಾಷ್ಟ್ರಗಳ ಈ ಬೆಳವಣಿಗೆಗಳು 3ನೇ ವಿಶ್ವ ಯುದ್ಧದ ಭೀತಿಯನ್ನು ಹುಟ್ಟುಹಾಕುತ್ತಿದೆ.

ಇರಾನ್ ರಕ್ಷಣಾ ಪಡೆಯ ದಂಡನಾಯಕ ಖಾಸಿಂ ಸುಲೈಮಾನಿಯನ್ನು ಅಮೆರಿಕಾವು ಡ್ರೋನ್ ದಾಳಿ ನಡೆಸಿ, ಇರಾಕ್ ನಲ್ಲಿ ಹತ್ಯೆ ಮಾಡುತ್ತಿದ್ದಂತೆಯೇ ಅಮೆರಿಕಾದ ಮೇಲೆ ಕಠೋರ ಪ್ರತೀಕಾರ ತೀರಿಸಿಕೊಳ್ಳುವ ಬೆದರಿಕೆಯನ್ನು ಇರಾನ್ ಹಾಕಿದೆ. ಇದರ ನಡುವೆಯೇ ಇರಾನ್ ಸುತ್ತಮುತ್ತಲಿನ ಮಧ್ಯಪ್ರಾಚ್ಯ ದೇಶಗಳಿಗೆ ಅಮೆರಿಕಾವು 3 ಸಾವಿರ ಹೆಚ್ಚುವಯಿ ಸೇನಾಪಡೆಗಳನ್ನು ನಿಯೋಜನೆ ಮಾಡಿದೆ.

ಈ ಮಧ್ಯೆ, ಬಾಗ್ದಾದ್ ನಲ್ಲಿರುವ ಅಮೆರಿಕಾ ದೂತಾವಾಸದ ಆವರಣ ಹಾಗೂ 2 ವಾಯುನೆಲೆಗಳ ಮೇಲೆ ಶನಿವಾರ 5 ಕ್ಷಿಪಣಿಗಳಿಂದ ಪ್ರತ್ಯೇಕ ದಾಳಿ ನಡೆಸಲಾಗಿದ್ದು, ಘಟನೆಯಲ್ಲಿ 5 ಮಂದಿ ಗಾಯಗೊಂಡಿದ್ದಾರೆ. ಕ್ಷಿಪಣಿ ದಾಳಿಯ ಹಿಂದೆ ಇರಾನ್ ಕೈವಾಯವಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಮೆರಿಕಾದ ಶ್ವೇತಭವನ, ಭಯೋತ್ಪಾದನೆ ಪ್ರಯತ್ನಗಳ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ. ನಮ್ಮ ತಂಡೆಗೆಬಂದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಟ್ಟೆಚ್ಚರಿಕೆ ನೀಡಿದೆ. ಈ ಎಲ್ಲಾ ಬೆಳವಣಿಗೆಗಳು 3ನೇ ವಿಶ್ವಯುದ್ಧಕ್ಕೆ ಮುನ್ನಡಿ ಬರೆಯುವ ಆತಂಕ ತೀವ್ರಗೊಂಡಿದೆ.

Comments are closed.