ಅಂತರಾಷ್ಟ್ರೀಯ

ಸೊಮಾಲಿಯಾದಲ್ಲಿ ಟ್ರಕ್ ಬಾಂಬ್ ಸ್ಫೋಟಕ್ಕೆ 73 ಮಂದಿ ಸಾವು

Pinterest LinkedIn Tumblr


ಮೊಗದಿಶು: ಸೊಮಾಲಿಯಾ ರಾಜಧಾನಿ ಮೊಗದಿಶುನ ಹೊರವಲಯದಲ್ಲಿ ಉಗ್ರರು ಶನಿವಾರ ಬೆಳಗ್ಗೆ ಟ್ರಕ್ ಬಾಂಬ್ ಸ್ಫೋಟಿಸಿದ್ದು, ಕನಿಷ್ಠ 73 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೊಗದಿಶುವಿನ ಹೊರವಲಯದ ಅಫ್‍ಗೊಯೆ ರಸ್ತೆಯಲ್ಲಿನ ಭದ್ರತಾ ತಪಾಸಣಾ ಕೇಂದ್ರದ ಸಮೀಪ ಆತ್ಮಾಹುತಿ ಬಾಂಬರ್ ಟ್ರಕ್ ಬಾಂಬ್ ಸ್ಫೋಟಿಸಿದ್ದಾನೆ ಎಂದು ಸೊಮಾಲಿಯಾ ಸರ್ಕಾರದ ವಕ್ತಾರ ಇಸ್ಮಾಯಿಲ್ ಮುಖ್ತಾರ್ ಹೇಳಿರುವುದಾಗಿ ಕ್ಸಿನುವಾ ವರದಿ ಮಾಡಿದೆ.

‘ದಾಳಿಯಲ್ಲಿ 73ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ತುರ್ತು ಸೇವೆಗಳು ಸ್ಥಳಕ್ಕೆ ಧಾವಿಸಿ
ಗಾಯಗೊಂಡವರನ್ನು ಆಸ್ಪತ್ರೆಗಳಿಗೆ ದಾಖಲಿಸಿವೆ. ಸತ್ತವರಲ್ಲಿ ಅನೇಕ ವಿದ್ಯಾರ್ಥಿಗಳು ಸೇರಿದ್ದಾರೆ.’ ಎಂದು ಓಮರ್ ಕ್ಸಿನುವಾಗೆ ತಿಳಿಸಿದ್ದಾರೆ.

ದಾಳಿಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರನ್ನು ಸಮೀಪದ ಮದಿನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದುವರೆಗೆ 73 ಮೃತದೇಹಗಳನ್ನು ಸ್ವೀಕರಿಸಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ. ಮೊಹಮ್ಮದ್ ಯೂಸಫ್ ಅವರು ಹೇಳಿದ್ದಾರೆ.

ರಸ್ತೆಯಲ್ಲಿನ ತೆರಿಗೆ ಕಚೇರಿಯನ್ನು ಗುರಿಯಾಗಿಸಿಕೊಂಡು ಭೀಕರ ಬಾಂಬ್ ಸ್ಫೋಟಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿ ಪೊಲೀಸ್ ಒಬ್ಬರು ತಿಳಿಸಿದ್ದಾರೆ.

ಕಳೆದ ಡಿ. 10ರಂದು ಮೊಗದಿಶು ನಗರದ ಪ್ರಸಿದ್ಧ ಶಬಾಬ್ ಹೋಟೆಲ್ ಅನ್ನು ಉಗ್ರರು ಸ್ಫೋಟಿಸಿದ್ದರಿಂದ ಕನಿಷ್ಟ ನಾಲ್ವರು ಮೃತಪಟ್ಟು ಇತರ ಆರು ಮಂದಿ ಗಾಯಗೊಂಡಿದ್ದರು.

Comments are closed.