ಕ್ರೀಡೆ

ಹೋಟೆಲ್ ಮಹಿಳಾ ಸಿಬ್ಬಂದಿ ಜೊತೆ ದೆಹಲಿ ಅಂಡರ್-23 ಆಟಗಾರರ ಅಸಭ್ಯ ವರ್ತನೆ!

Pinterest LinkedIn Tumblr


ಕೋಲ್ಕತ್ತಾ: ಸಿಕೆ ನಾಯ್ಡು ಟ್ರೋಫಿ ಸಂಬಂದ ಕೋಲ್ಕತ್ತಾಗೆ ತೆರಳಿರುವ ದೆಹಲಿ ಅಂಡರ್ 23 ತಂಡದ ಆಟಗಾರರಾದ ಕುಲದೀಪ್ ಯಾದವ್ ಮತ್ತು ಲಕ್ಷ್ಯಾ ತರೇಜಾ ಅಸಭ್ಯ ವರ್ತನೆ ತೋರಿದ್ದಾರೆ.

ಕೋಲ್ಕತ್ತಾದ ಹೊಟೇಲ್ ವೊಂದರಲ್ಲಿ ದೆಹಲಿ ಅಂಡರ್ 23 ತಂಡದ ಆಟಗಾರರು ತಂಗಿದ್ದರು. ಈ ವೇಳೆ ಇಬ್ಬರು ಆಟಗಾರರು ಹೋಟೆಲ್ ನ ಮಹಿಳಾ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಡಿಡಿಸಿಎ ಅವರನ್ನು ಮನೆಗೆ ಕಳುಹಿಸಿದೆ.

ದೆಹಲಿ ಪರ ಆಡಿದ್ದ ತರೇಜಾ ಎರಡು ಅರ್ಧ ಶತಕ ಸಿಡಿಸಿದ್ದರು. ಇನ್ನು ವೇಗಿ ಕುಲದೀಪ್ ಯಾದವ್ ಮುಂದಿನ ಪಂಜಾಬ್ ವಿರುದ್ಧದ ರಣಜಿ ಟ್ರೋಫಿಗೆ ಇಶಾಂತ್ ಶರ್ಮಾ ಬದಲಿಗೆ ಕಣಕ್ಕಿಳಿಯುವ ಸಾಧ್ಯತೆ ಇತ್ತು.

ಈ ಸಂಬಂಧ ಪೊಲೀಸರಿಗೆ ದೂರು ನೀಡಿಲ್ಲ. ಪರಿಸ್ಥಿತಿಯನ್ನು ತಿಳಿಗೊಳಿಸಲು ಡಿಡಿಸಿಎ ನಿರ್ದೇಶಕ ಸಂಜಯ್ ಭಾರದ್ವಜ್ ಅವರನ್ನು ಕೋಲ್ಕತ್ತಾಗೆ ಕಳುಹಿಸಿದೆ.

Comments are closed.